Interesting Fact : ಇಲ್ಲಿ ಯಾವ ವಸ್ತು ಮುಟ್ಟಿದ್ರೂ ಬೀಳುತ್ತೇ ಭಾರೀ ದಂಡ ; ಇದು ದೇಶದಲ್ಲೇ ವಿಚಿತ್ರ ಕಾನೂನು ಇರುವ ಸ್ಥಳ!!
Interesting Fact: ದೇಶದಲ್ಲಿ (India) ಸಾಕಷ್ಟು ಜನರಿದ್ದಾರೆ. ಜನರು (people) ತಮಗೆ ಬೇಕಾದ ಹಾಗೆ ಜೀವನ ನಡೆಸುತ್ತಿದ್ದಾರೆ. ಪ್ರತಿಯೊಬ್ಬರು ಪ್ರತಿದಿನ ಹಲವು ದಿನೋಪಯೋಗಿ ವಸ್ತು ಮುಟ್ಟುತ್ತಾರೆ. ಅಂಗಡಿಯಿಂದ ಹಲವು ವಸ್ತು ಖರೀದಿಸುತ್ತಾರೆ. ಆದರೆ, ನಿಮಗೆ ಗೊತ್ತಾ (Interesting Fact)? ಭಾರತದಲ್ಲಿನ ಈ ಹಳ್ಳಿಯಲ್ಲಿ ಯಾವ ವಸ್ತು ಮುಟ್ಟಿದ್ರೂ ಬೀಳುತ್ತೇ ಭಾರೀ ದಂಡ. ಇದು ಇಲ್ಲಿನ ಕಾನೂನು.
ಹೌದು, ದೇಶದಲ್ಲಿನ ಶಿಮ್ಲಾದ (Shimla) ಕುಲು ಜಿಲ್ಲೆಯಲ್ಲಿನ ಮಲಾನಾ (Malana) ಗ್ರಾಮದಲ್ಲಿ ಇಂತಹ ವಿಚಿತ್ರ ಕಾನೂನು ಇದೆ. ಈ ಗ್ರಾಮದಲ್ಲಿರುವವರು, ಗ್ರಾಮಕ್ಕೆ ಬರುವ ಪ್ರವಾಸಿಗರು ಹಳ್ಳಿಯಲ್ಲಿನ ಯಾವ ವಸ್ತು ಕೂಡ ಮುಟ್ಟುವ ಹಾಗಿಲ್ಲ. ಮುಟ್ಟಿದರೆ ದಂಡ ಖಚಿತ!!.
ಈ ಕಾನೂನಿನ ಸಂಪೂರ್ಣ ಮಾಹಿತಿಯನ್ನು ಗ್ರಾಮದ ಹೊರಗೆ ಇರುವ ಬೋರ್ಡಿನ ಮೇಲೆ ಅಂಟಿಸಲಾಗಿದೆ. ಗ್ರಾಮಕ್ಕೆ ಹೋದ ನಂತರ ಅಲ್ಲಿ ಏನನ್ನಾದರೂ ಮುಟ್ಟಿದರೆ, 1,000 ರೂ.ನಿಂದ 2,500 ರೂ.ವರೆಗೆ ದಂಡ ವಿಧಸಲಾಗುತ್ತದೆ ಎಂಬುದನ್ನು ಈ ನೋಟಿಸ್‌ನಲ್ಲಿ ಬರೆಯಲಾಗುತ್ತದೆ. ಹಾಗಾಗಿ ಗ್ರಾಮಕ್ಕೆ ಬರುವ ಪ್ರವಾಸಿಗರು ಮೊದಲೇ ತಿಳಿದುಕೊಂಡು ಬರುತ್ತಾರೆ. ಇಲ್ಲವಾದರೆ ಎಲ್ಲದಕ್ಕೂ ದಂಡ ತೆರಬೇಕಾದೀತು!!!.
ಅಲ್ಲದೆ, ಈ ಗ್ರಾಮಕ್ಕೆ ಹೋಗಿ ಅಲ್ಲಿನ ಅಂಗಡಿಯಲ್ಲಿ ಏನಾದರೂ ಖರೀದಿಸಿದರೆ ಅಂಗಡಿಯವನು ಅದನ್ನು ಕೈಗೆ ಕೊಡದೆ ಅಂಗಡಿಯ ಹೊರಗೆ ಇಡುತ್ತಾರೆ ಎಂದು ಹೇಳಲಾಗಿದೆ. ಸದ್ಯ ಅಲ್ಲಿನ ಜನರಿಗೆ ಹೊಂದಾಣಿಕೆ ಆಗಿದ್ದರೂ ಪ್ರವಾಸಿಗರಿಗೆ ಪಜೀತಿಯೇ ಸರಿ.
ಈ ಹಳ್ಳಿ ಇತಿಹಾಸದಲ್ಲಿ ತನ್ನದೇ ಆದ ಸಂವಿಧಾನವನ್ನು ಹೊಂದಿತ್ತು. ಈ ಸಂವಿಧಾನದ ಪ್ರಕಾರವೇ ಗ್ರಾಮ ನಡೆಯುತ್ತಿತ್ತು. ಇಂದಿಗೂ ಸಂವಿಧಾನದ ಹಲವು ನಿಯಮಗಳನ್ನು ಇಲ್ಲಿ ಅನುಸರಿಸಲಾಗುತ್ತದೆ. ಅಲ್ಲದೆ, ಈ ಗ್ರಾಮವು ವಿಶ್ವದ ಅತ್ಯಂತ ಹಳೆಯ ಪ್ರಜಾಪ್ರಭುತ್ವವನ್ನು ಹೊಂದಿದೆ.