Mosquitoes: ಸೊಳ್ಳೆ ಕಾಟದಿಂದ ತಪ್ಪಿಸಿಕೊಳ್ಳಬೇಕಾ? ಈ ಟಿಪ್ಸ್ ಫಾಲೋ ಮಾಡಿ
Mosquitoes: ಮನೆಯನ್ನು ಎಷ್ಟೇ ಸ್ವಚ್ಛವಾಗಿರಿಸಿದರೂ, ಎಷ್ಟೇ ಜಾಗರೂಕರಾಗಿದ್ದರೂ ಕೂಡ ಸೊಳ್ಳೆಗಳು (Mosquitoes) ಮಾತ್ರ ಮನೆಯ ಮೂಲೆಗಳಲ್ಲಿ ಎಲ್ಲಿಯಾದರೂ ಅಡಗಿ ಕುಳಿತಿರುತ್ತದೆ. ರಾತ್ರಿಯಾಗುತ್ತಿದ್ದಂತೆ, ಮನೆಯೊಳಗೆ ಸುತ್ತಾಟ ಶುರು ಮಾಡಿ ಬಿಡುತ್ತದೆ. ಕೆಲವೊಮ್ಮೆ ಇವುಗಳ ಕಾಟ ತಡೆಯಲಾಗದೆ ಕೊನೆಗೆ ಸಿಕ್ಕ ಎಲ್ಲಾ ಮದ್ದುಗಳನ್ನು ತಂದು ಮನೆಯ ಮೂಲೆ ಮೂಲೆಯನ್ನು ಬಿಡದೇ ಸ್ಪ್ರೇ ಮಾಡಿದರೂ ಕೂಡ, ಪ್ರಯೋಜವಾಗಲ್ಲ, ಅವುಗಳು ನಮಗೆಯೇ ಚಳ್ಳೆಹಣ್ಣು ತಿನ್ನಿಸಿ, ಯಾವುದಾದರೂ ಒಂದು ಮೂಲೆಯಲ್ಲಿ ಅಡಗಿ ಕೂತು ಬಿಡುತ್ತವೆ!.
ಅಷ್ಟೇ ಅಲ್ಲದೆ, ಈ ದರಿದ್ರ ಸೊಳ್ಳೆಗಳು ಕಿವಿ ಹತ್ತಿರ ಬಂದು ಗುಂಯ್‌ಯ್ ಎಂದು ಶಬ್ದ ಮಾಡುವುದು ಮಾತ್ರವಲ್ಲದೆ, ಮೈಗೆಲ್ಲಾ ಕಚ್ಚಲು ಶುರು ಮಾಡಿಬಿಡುತ್ತದೆ.ಇಂತಹ ಸಂದರ್ಭದಲ್ಲಿ, ಅಯ್ಯೋ ದೇವರೆ ಈ ಸೊಳ್ಳೆಗಳ ಕಾಟಕ್ಕೆ ಏನೂ ಪರಿಹಾರವಿಲ್ಲವೇ ಎಂದೆನಿಸುತ್ತದೆ. ಅದರಲ್ಲೂ ಬೇಸಿಗೆಗಾಲದಲ್ಲಂತೂ ಸೊಳ್ಳೆಗಳ ಕಾಟ ಸಿಕ್ಕಾಪಟ್ಟೆ ಇರುತ್ತವೆ. ಹಾಗಿದ್ದರೆ ಇವುಗಳ ಕಾಟದಿಂದ ತಪ್ಪಿಸಿಕೊಳ್ಳೋದು ಹೇಗೆ? ಇದಕ್ಕೆ ಪರಿಹಾರ ಏನು? ಈ ಟಿಪ್ಸ್ ಫಾಲೋ ಮಾಡಿ, ಸೊಳ್ಳೆಗಳನ್ನು ಓಡಿಸಿ.
ತುಳಸಿ ಎಲೆ: ಸೊಳ್ಳೆಗಳು ತುಳಸಿ ಎಲೆಗಳ (Basil leaf) ವಾಸನೆಯನ್ನು ಇಷ್ಟಪಡುವುದಿಲ್ಲ. ಈ ಗಿಡದ ಎಲೆಗಳಿಂದ ತೆಗೆದ ಎಣ್ಣೆ ಸೊಳ್ಳೆಗಳನ್ನು ಓಡಿಸಲು ತುಂಬಾ ಪರಿಣಾಮಕಾರಿಯಾಗಿದೆ.
ಪುದೀನ ಎಲೆಗಳು: ಪುದೀನ ಎಲೆಗಳನ್ನು (Mint leaves) ಐಸ್ಡ್ ಟೀ, ಮೊಜಿಟೊ ಮುಂತಾದ ಪಾನೀಯಗಳಲ್ಲಿ ಬಳಸಲಾಗುತ್ತದೆ. ಇದರ ಪರಿಮಳವನ್ನು ಚೂಯಿಂಗ್ ಗಮ್ನಲ್ಲಿಯೂ ಬಳಸಲಾಗುತ್ತದೆ. ಈ ಎಲೆಯಿಂದ ತಯಾರಿಸಿದ ಎಣ್ಣೆಯ ವಾಸನೆಯು ಸೊಳ್ಳೆಗಳನ್ನು ದೂರವಿಡುತ್ತದೆ. ಹಾಗಾಗಿ ಪುದೀನ ಎಲೆಗಳಿಂದ ತಯಾರಿಸಿದ ಎಣ್ಣೆಯನ್ನು ಬಳಸಿ, ಸೊಳ್ಳೆಗಳನ್ನು ಓಡಿಸಿ.
ಲೆಮೊನ್ಗ್ರಾಸ್: ಲೆಮೊನ್ಗ್ರಾಸ್ ಸಾರದಿಂದ ತಯಾರಿಸಿದ ಎಣ್ಣೆಯ ಪರಿಮಳವೂ ಸೊಳ್ಳೆಗಳನ್ನು ಓಡಿಸಲು ಸಹಕಾರಿಯಾಗಿದೆ. ಇದರ ವಾಸನೆ ಸೊಳ್ಳೆಗಳಿಗೆ ಕಹಿಯಾಗಿದೆ.
ಬೇವಿನ ಎಲೆಗಳು (Neem leaves): ಸೊಳ್ಳೆ ಕಡಿತವನ್ನು ತಡೆಗಟ್ಟಲು ಬೇವಿನ ಎಣ್ಣೆಯನ್ನು ಕೈ ಮತ್ತು ಪಾದಗಳಿಗೆ ಹಚ್ಚಿರಿ. ಈ ವಾಸನೆಯಿಂದ ಸೊಳ್ಳೆಗಳು ನಮ್ಮ ಮನೆಯೊಳಗೆ ಬರುವುದಿಲ್ಲ. ಅಲ್ಲದೆ, ನಿಮ್ಮ ಹತ್ತಿರವೂ ಸುಳಿಯಲ್ಲ.
ಬೆಳ್ಳುಳ್ಳಿ: ಸೊಳ್ಳೆಗಳು ಬೆಳ್ಳುಳ್ಳಿಯ (Garlic) ಬಲವಾದ ವಾಸನೆಯನ್ನು ಇಷ್ಟಪಡುವುದಿಲ್ಲ. ಬೆಳ್ಳುಳ್ಳಿಯನ್ನು ಹೆಚ್ಚು ತಿನ್ನುವವರ ರಕ್ತವನ್ನು ಸೊಳ್ಳೆಗಳು ಕುಡಿಯಲು ಇಷ್ಟಪಡುವುದಿಲ್ಲ. ಏಕೆಂದರೆ ಸೊಳ್ಳೆಗಳು ಈ ವಾಸನೆಯನ್ನು ಸಹಿಸುವುದಿಲ್ಲ. ಹಾಗಿದ್ದಾಗ ಸೊಳ್ಳೆ ಓಡಿಸಲು ಬೆಳ್ಳುಳ್ಳಿ ಬೆಸ್ಟ್!!.