Dhanush – Meena : ನಟಿ ಮೀನಾ-ಧನುಷ್‌ ಮದುವೆ ಬಗ್ಗೆ ಮೀನಾ ನೀಡಿದ್ರು ಬಿಗ್‌ ಅಪ್ಡೇಟ್‌!

Share the Article

Dhanush – Meena Marriage: ನಟಿ ಮೀನಾ ಬೆಂಗಳೂರು ಮೂಲದ ಸಾಫ್ಟ್‌ವೇರ್ ಎಂಜಿನಿಯರ್ ವಿದ್ಯಾಸಾಗರ್ ಅವರನ್ನು 2009 ಜುಲೈ 12 ರಂದು ವಿವಾಹ ಆಗಿದ್ದರು. ಆದರೆ 2022 ಜೂನ್ 28 ರಂದು ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆಯಿಂದಾಗಿ ವಿದ್ಯಾಸಾಗರ್ ಸಾವನ್ನಪ್ಪಿದರು. ಸದ್ಯ ವಿದ್ಯಾಸಾಗರ್ – ಮೀನಾ ದಂಪತಿಗೆ ನೈನಿಕಾ ಎಂಬ ಪುತ್ರಿಯಿದ್ದು, ಈ ನಡುವೆ ತಮಿಳು ನಟ ಧನುಷ್ ಅವರು ಬಹುಭಾಷಾ ನಟಿ ಮೀನಾ (Dhanush – Meena Marriage)ಅವರನ್ನು ಮದುವೆ ಆಗುತ್ತಾರೆ ಎಂದು ಇತ್ತೀಚೆಗೆ ಎಲ್ಲೆಡೆ ಸುದ್ದಿ ಆಗಿದ್ದು, ಈ ಗಾಸಿಪ್ ಬಗ್ಗೆ ನಟಿ ಮೀನಾ ತೆರೆ ಎಳೆದಿದ್ದಾರೆ.

ತಮಿಳು ನಟ ಧನುಷ್ ಅವರನ್ನು ನಟಿ ಮೀನಾ ಮದುವೆಯಾಗ್ತಾರಂತೆ ಎಂಬ ಅಂತೆ – ಕಂತೆ ವಿಷಯವನ್ನು ಯೂಟ್ಯೂಬ್‌ ಚಾನೆಲ್‌ನಲ್ಲಿ ಬೈಲ್ವಾನ್ ರಂಗನಾಥನ್ ಹೇಳಿದ್ದು, ಇದೀಗ ಈ ಮಾತುಗಳು ನಟಿ ಮೀನಾ ಅವರ ಕಿವಿಗೂ ಬಿದ್ದಿದೆ. ಪರಿಣಾಮ, ಎರಡನೇ ಮದುವೆ ಬಗ್ಗೆ ಹಬ್ಬಿರುವ ಗಾಸಿಪ್ ಶುದ್ಧ ಸುಳ್ಳು ಎಂದಿದ್ದಾರೆ ನಟಿ ಮೀನಾ.

ಬಾಲನಟಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ನಟಿ ಮೀನಾ. ತೆಲುಗಿನ ‘ನವಯುಗಂ’ ಚಿತ್ರದ ಮೂಲಕ ಮೀನಾ ನಾಯಕಿಯಾದರು. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯ ಚಿತ್ರಗಳಲ್ಲಿ ಮೀನಾ ಅಭಿನಯಿಸಿದ್ದಾರೆ.

ಮೀನಾ ಅವರು ಕನ್ನಡ ಸಿನಿಮಾ ರಂಗದಲ್ಲೂ ದೊಡ್ಡ ಆಸ್ತಿಯೂ ಹೌದು, ಸದ್ಯ ಕನ್ನಡದಲ್ಲಿ ‘ಪುಟ್ನಂಜ’, ‘ಚೆಲುವ’, ‘ಮೊಮ್ಮಗ’, ‘ಶ್ರೀ ಮಂಜುನಾಥ’, ‘ಗ್ರಾಮದೇವತೆ’, ‘ಸಿಂಹಾದ್ರಿಯ ಸಿಂಹ’, ‘ಸ್ವಾತಿ ಮುತ್ತು’, ‘ಮಹಾಸಾದ್ವಿ ಮಲ್ಲಮ್ಮ’, ‘ಮೈ ಆಟೋಗ್ರಾಫ್’, ‘ಹೆಂಡ್ತೀರ್ ದರ್ಬಾರ್’ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಇತ್ತೀಚೆಗಷ್ಟೇ ಮೀನಾ ಅಭಿನಯದ ‘ದೃಶ್ಯಂ 2’, ‘ಅಣ್ಣಾತ್ತೆ’, ‘ಬ್ರೊ ಡ್ಯಾಡಿ’ ಸಿನಿಮಾಗಳು ಯಶಸ್ಸು ಕಂಡಿದ್ದವು. ಸದ್ಯ ‘ರೌಡಿ ಬೇಬಿ’ ಸಿನಿಮಾದಲ್ಲಿ ಮೀನಾ ಕಾರ್ಯಗತವಾಗಿದ್ದಾರೆ.

ಆದರೆ ಈಗಾಗಲೇ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಬೈಲ್ವಾನ್ ರಂಗನಾಥನ್, ‘’ನಟಿ ಮೀನಾ ಹಾಗೂ ನಟ ಧನುಷ್ ಮದುವೆ ಆಗಲಿದ್ದಾರೆ. ಇದೇ ವರ್ಷದ ಜುಲೈ ತಿಂಗಳಿನಲ್ಲಿ ಮೀನಾ ಮತ್ತು ಧನುಷ್ ಅವರ ವಿವಾಹ ಮಹೋತ್ಸವ ಜರುಗಲಿದೆ. ಒಂದು ವೇಳೆ ಅದು ಆಗಲಿಲ್ಲ ಎಂದರೆ, ಧನುಷ್ ಮತ್ತು ಮೀನಾ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿರಲಿದ್ದಾರೆ’’ ಎಂದಿದ್ದರು.

ಈ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ ಮೀನಾ, ‘’ನಾನಿನ್ನೂ ಪತಿಯನ್ನ ಕಳೆದುಕೊಂಡ ನೋವಿನಲ್ಲಿದ್ದೇನೆ. ಇಂತಹ ಸಮಯದಲ್ಲಿ ಎರಡನೇ ಮದುವೆಯ ಗಾಸಿಪ್ ಹಬ್ಬಿರುವುದು ತೀರಾ ಬೇಸರ ತರಿಸಿದೆ.

ವಿದ್ಯಾಸಾಗರ್ ನಿಧನದ ನೋವನ್ನು ಅರಗಿಸಿಕೊಳ್ಳುವುದೇ ಕಷ್ಟವಾಗುತ್ತಿದೆ. ಹಾಗಿರುವಾಗ ಈ ತರಹದ ಗಾಸಿಪ್ ಹಬ್ಬಿದರೆ ಬೇಸರ ಆಗುವುದು ಖಂಡಿತಾ . ನನ್ನ ಗಮನ ಈಗ ಏನಿದ್ದರೂ ಮಗಳ ಭವಿಷ್ಯದ ಮೇಲೆ ಮಾತ್ರ. ಅದಲ್ಲದೆ ಸಿನಿಮಾ ಹಾಗೂ ಪಾತ್ರಗಳ ಆಯ್ಕೆ ವಿಚಾರದಲ್ಲೂ ನಾನು ಚ್ಯೂಸಿ ಆಗಿದ್ದೇನೆ’’ ಎಂದು ಸ್ಪಷ್ಟವಾಗಿ ಹೇಳಿದ್ದಾರೆ .

ಮೀನಾ ಬೇಸರಗೊಂಡಿದ್ದು ಅಲ್ಲದೆ , ಬೈಲ್ವಾನ್ ರಂಗನಾಥನ್ ಅವರ ಹೇಳಿಕೆ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಮೀನಾ – ಧನುಷ್ ಬಗ್ಗೆ ಪುರಾವೆ ಇಲ್ಲದೆ ಮಾತನಾಡಿದ ಬೈಲ್ವಾನ್ ರಂಗನಾಥನ್ ವಿರುದ್ಧ ಅಭಿಮಾನಿಗಳು ಕೂಡ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

 

ಇದನ್ನೂ ಓದಿ: Rashmika Mandanna : ಇದು ನನ್ನ ಹೋಮ್‌ ಎಂದದ್ದು ಕರ್ನಾಟಕವನ್ನಲ್ಲ! ಇಲ್ಲಿದೆ ನೋಡಿ ಕಿರಿಕ್‌ ರಾಣಿಯ ಕಿರಿಕ್‌ ಉತ್ತರ

Leave A Reply