Home Breaking Entertainment News Kannada Rashmika Mandanna : ಇದು ನನ್ನ ಹೋಮ್‌ ಎಂದದ್ದು ಕರ್ನಾಟಕವನ್ನಲ್ಲ! ಇಲ್ಲಿದೆ ನೋಡಿ ಕಿರಿಕ್‌ ರಾಣಿಯ...

Rashmika Mandanna : ಇದು ನನ್ನ ಹೋಮ್‌ ಎಂದದ್ದು ಕರ್ನಾಟಕವನ್ನಲ್ಲ! ಇಲ್ಲಿದೆ ನೋಡಿ ಕಿರಿಕ್‌ ರಾಣಿಯ ಕಿರಿಕ್‌ ಉತ್ತರ

Rashmika Mandanna

Hindu neighbor gifts plot of land

Hindu neighbour gifts land to Muslim journalist

Rashmika Mandanna red sharara: ಕಿರಿಕ್ ಪಾರ್ಟಿ (Kirik Party) ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣ (Rashmika Mandanna) ಸದ್ಯ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಲ್ಲಿರುತ್ತಾರೆ. ತನ್ನ ಸಿನಿಮಾದ ವಿಚಾರಕ್ಕಿಂತಲೂ ಹೆಚ್ಚಾಗಿ ವಿವಾದಗಳ ಮೂಲಕವೇ ಗಮನ ಸೆಳೆದಿರುವ ನಟಿ ಟ್ರೊಲಿಂಗ್ ಆಗುವ ವಿಚಾರದಲ್ಲಿ ಟಾಪ್ ಲಿಸ್ಟ್ ನಲ್ಲಿದ್ದಾರೆ. ಸ್ಯಾಂಡಲ್ ವುಡ್, ಕಾಲಿವುಡ್ (kollywood), ಬಾಲಿವುಡ್ (Bollywood) ಹೀಗೆ ಹಲವು ಭಾಷೆಯ ಸಿನಿರಂಗದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ ಕೂಡ. ಆದರೆ ಈ ಬಾರಿ ನಟಿ ನನ್ನ ಹೋಮ್‌ ಎಂದದ್ದು ಕರ್ನಾಟಕವನ್ನಲ್ಲ, ಹೈದರಾಬಾದ್ ಅನ್ನು ಎಂದು ಹೇಳಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ನಟಿ ತನ್ನ ಡ್ರೆಸ್ಸಿಂಗ್ ಸೆನ್ಸ್, ಮೋಹಕ ಮೈ ಮಾಟ ಕಾಣುವ ತುಂಡುಡುಗೆಯ ಜೊತೆಗೆ ವಿಭಿನ್ನ ವಸ್ತ್ರ ವಿನ್ಯಾಸ ಧರಿಸಿ ಫೋಟೋ ಶೂಟ್ ಮಾಡಿಸಿಕೊಂಡು, ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಾರೆ. ನಟಿಯ ಫೋಟೋ ನೋಡಿದ ಪಡ್ಡೆ ಹುಡುಗರ ಎದೆ ಬಡಿತ ಏರುಪೇರಾಗುವುದಂತು ಸುಳ್ಳಲ್ಲ. ಇನ್ನೂ ಕೆಲ ವರ್ಗದವರು ಟ್ರೊಲ್ (troll) ಮಾಡುವುದುಂಟು. ಏನೇ ಮಾಡಿದರೂ ಟ್ರೊಲ್ ಮಾಡುವ ಮಂದಿ ಇರುವಂತೆ ಕಿರಿಕ್ ಬೆಡಗಿಯನ್ನೂ ಮೆಚ್ಚಿಕೊಂಡು ಸಾಥ್ ನೀಡುವ ಅಭಿಮಾನಿಗಳು (Fans) ಕೂಡ ಅಷ್ಟೆ ಸಂಖ್ಯೆಯಲ್ಲಿದ್ದಾರೆ ಅನ್ನೋದು ಸುಳ್ಳಲ್ಲ. ಹೀಗಾಗಿ, ತಮ್ಮ ಪೋಸ್ಟ್ , ಫೋಟೊ ಮೂಲಕ ರಶ್ಮಿಕಾ ಅಭಿಮಾನಿಗಳಿಗೆ ಖುಷಿ ಪಡಿಸುವ ಪ್ರಯತ್ನ ನಡೆಸುತ್ತಲೇ ಇರುತ್ತಾರೆ.

ಅಂತೆಯೇ ಈ ಬಾರಿಯು ನಟಿ ಕೆಂಪು ಬಣ್ಣದ ಶರಾರಾ(Rashmika Mandanna red sharara) ಧರಿಸಿ ಪೋಸ್ ಕೊಟ್ಟಿದ್ದು, ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಫೋಟೋದಲ್ಲಿ ನಟಿ ಕ್ಯೂಟ್ ಆಗಿ ಕಾಣಿಸಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದರಾದರೂ
ಫೋಟೋ ಜೊತೆ ನಟಿ ಬ್ಯಾಕ್ ಟು ಹೋಮ್ ಹೈದರಾಬಾದ್ ಎಂದು ಬರೆದಿದ್ದಾರೆ. ಸದ್ಯ ವೈರಲ್ ಆಗಿದೆ.

ಕಲ್ಯಾಣ್ ಜ್ಯುವೆಲ್ಲರ್ಸ್ ಬ್ರ್ಯಾಂಡ್ ಅಂಬಾಸಿಡರ್ ಆಗಿರುವ ನಟಿ ಉತ್ತರ ಪ್ರದೇಶದಲ್ಲಿ ಕಲ್ಯಾಣ್ ಜ್ಯುವೆಲ್ಲರ್ಸ್ ಹೊಸ ಶೋರೂಮ್ ಉದ್ಘಾಟನೆಯ ಸಂದರ್ಭದಲ್ಲಿ ಕೆಂಪು ಬಣ್ಣದ ಸಿಲ್ವರ್ ಅಂಚಿನ ಶರಾರಾದಲ್ಲಿ ಮಿಂಚಿದ್ದಾರೆ. ಅಲ್ಲದೆ, ನಟಿ ತನ್ನ ಸುಂದರವಾದ ಫೋಟೋವನ್ನು ಇನ್​ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್ ಮಾಡಿದ್ದಾರೆ. “ಈ ದಿನ ನಿಮ್ಮ ಕೆಲವು ನಗರಗಳಿಗೆ ನಿಮ್ಮನ್ನು ಭೇಟಿ ಮಾಡಲು ನಾನು ಬರುತ್ತೇನೆ. ಪ್ರಯಾಗ್​​ರಾಜ್​ನಿಂದ ಗೋರಖ್​ಪುರ್, ನಂತರ ಜೈಪುರ್, ಈಗ ಬ್ಯಾಕ್ ಹೋಮ್ ಟು ಹೈದರಾಬಾದ್​ ”ಎಂದು ಬರೆದಿದ್ದಾರೆ. ಇದೀಗ ಸ್ಟೋರಿಯಲ್ಲಿ ಶೇರ್ ಮಾಡಲಾದ ಫೋಟೋ
ವೈರಲ್ ಆಗಿದೆ. ಸದ್ಯ ನಟಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ರಶ್ಮಿಕಾ ತೆಲುಗಿನಲ್ಲಿ ನಟ ನಿತಿನ್ ಜೊತೆ ಸಿನಿಮಾ ಮಾಡಲಿದ್ದಾರೆ. ಹಾಗೇ ನಟಿ ಪುಷ್ಪಾ 2 ಸಿನಿಮಾದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.