PF New Rules : ಪಿಎಫ್ ಹಣವನ್ನು ಹಿಂಪಡೆಯಲು ಈ ಹೊಸ ನಿಯಮ ಅನುಸರಿಸಿ!

PF New Rules: ನೀವೇನಾದರೂ ‘ಪಿಎಫ್’ ಹಣವನ್ನು ಹಿಂಪಡೆಯಲು ಯೋಜನೆ ಹಾಕಿದ್ದರೆ, ಈ ಹೊಸ ನಿಯಮಗಳ ಮಾಹಿತಿ ತಿಳಿದಿರುವುದು ಒಳ್ಳೆಯದು.

ಉದ್ಯೋಗಿ ಭವಿಷ್ಯ ನಿಧಿ (EPF) ಒಂದು ನಿಧಿಯಾಗಿದ್ದು, ಇದರಲ್ಲಿ ಉದ್ಯೋಗಿ ಮತ್ತು ಉದ್ಯೋಗದಾತರು ಸಮಾನವಾದ ಪೂರ್ವ-ನಿರ್ಧರಿತ ಮೊತ್ತದ ಹಣವನ್ನು ಕೊಡುಗೆ ನೀಡಬೇಕಾಗುತ್ತದೆ, ಅದನ್ನು ನಂತರ ಉದ್ಯೋಗಿ ಹತೋಟಿಗೆ ತರಬಹುದು. ಇದನ್ನು ಎಂಪ್ಲಾಯಿ ಪ್ರಾವಿಡೆಂಟ್ ಫಂಡ್ ಆರ್ಗನೈಸೇಶನ್ ಆಫ್ ಇಂಡಿಯಾ (EPFO) ನಿರ್ವಹಿಸುತ್ತದೆ.

ಉದ್ಯೋಗಿಗಳ ಭವಿಷ್ಯ ನಿಧಿ, ಇದನ್ನು ಸಾಮಾನ್ಯವಾಗಿ ಪಿಎಫ್ (Provident Fund)ಎಂದು ಕರೆಯಲಾಗುತ್ತದೆ. ಇದು ನಿವೃತ್ತಿ ಅಥವಾ ನಿವೃತ್ತಿಯ ನಂತರದ ಪ್ರಯೋಜನ ಯೋಜನೆಯಾಗಿದೆ. ಈ ಸೌಲಭ್ಯವು ಎಲ್ಲ ವೇತನದಾರರಿಗೆ ಲಭ್ಯವಿದೆ. ಭಾರತದಲ್ಲಿ ವೇತನ ಪಡೆಯುವ ಎಲ್ಲ ವ್ಯಕ್ತಿಗಳು ನೌಕರರ ಭವಿಷ್ಯ ನಿಧಿ ಸಂಸ್ಥೆಯಲ್ಲಿ (EPFO) ಖಾತೆ ಹೊಂದಿರುತ್ತಾರೆ. ಪ್ರತಿ ತಿಂಗಳು ನೌಕರರ ಮೂಲ ವೇತನದಿಂದ (Basic Salary) ಶೇ. 12ರಷ್ಟು ಮೊತ್ತವನ್ನು ಪಿಎಫ್ ಖಾತೆಗೆ ಜಮಾ ಮಾಡಲಾಗುತ್ತದೆ. ಹಾಗೆಯೇ ಕಂಪನಿ (Company) ಕೂಡ ಶೇ.12 ರಷ್ಟು ಪಾಲನ್ನು ತನ್ನ ನೌಕರನ ಪಿಎಫ್ ಖಾತೆಗೆ ಜಮೆ ಮಾಡುತ್ತದೆ.ಇದನ್ನು ನೌಕರರು ತಮ್ಮ ತುರ್ತು ಅವಶ್ಯಕತೆಯ ಸಂದರ್ಭಗಳಲ್ಲಿ ಬಳಕೆ ಮಾಡಬಹುದಾಗಿದೆ. ಬ್ಯಾಂಕ್ ಖಾತೆಯನ್ನು ಆಧಾರ್ ಸಂಖ್ಯೆಗೆ ಲಿಂಕ್ ಮಾಡಿದರೆ ಕೆಲಸ ಶೀಘ್ರಗತಿಯಲ್ಲಿ ಆಗುತ್ತದೆ. ಇಪಿಎಫ್‌ಒ(EPFO) ನಿಯಮಗಳ ಅನುಸಾರ, ಯಾವ ಸಂದರ್ಭಗಳಲ್ಲಿ ಪಿಎಫ್ (PF) ನ ಸಂಪೂರ್ಣ ಮೊತ್ತವನ್ನು ನೀವು ಹಿಂಪಡೆಯಬಹುದು ಎಂಬುದರ ಕುರಿತ ಮಾಹಿತಿ ಇಲ್ಲಿದೆ ನೋಡಿ.

ಪೂರ್ಣ ಪ್ರಮಾಣದ ಪಿಎಫ್ ಹಿಂಪಡೆಯಬಹುದು( PF New Rules)ಎಂಬ ಗೊಂದಲ ಹೆಚ್ಚಿನವರಿಗೆ ಕಾಡುತ್ತದೆ. ಈ ಕುರಿತ ಮಾಹಿತಿ ನಿಮಗಾಗಿ.

ನೌಕರರು ಕೇವಲ ತುರ್ತು ಸಂದರ್ಭದಲ್ಲಿ ಮಾತ್ರವೇ ಪಿಎಫ್ ಸಂಪೂರ್ಣ ಮೊತ್ತವನ್ನು ಹಿಂಪಡೆಯಬಹುದಾಗಿದೆ. ನಿಮ್ಮ ಪಿಎಫ್‌ನ ಪೂರ್ಣ ಮೊತ್ತವನ್ನು ನೀವು ಕೆಳಕಂಡ ಸಂದರ್ಭಗಳಲ್ಲಿ ಪಡೆಯಬಹುದು.
ವೈದ್ಯಕೀಯ ಚಿಕಿತ್ಸೆ (Medical Help):
ಮನೆಯ ಸದಸ್ಯರಿಗೆ ಯಾರಿಗಾದರೂ ಚಿಕಿತ್ಸೆಗೆ ಹಣದ ಅವಶ್ಯಕತೆ ಉಂಟಾದರೆ ಪಿಎಫ್ ಹಣವನ್ನು ಹಿಂಪಡೆಯಬಹುದಾಗಿದೆ. ಹಣವನ್ನು ಹಿಂಪಡೆಯುವ ಸಂದರ್ಭ ನೀವು ವೈದ್ಯಕೀಯದ ಕೆಲವು ಸಾಕ್ಷಿಗಳನ್ನು ಒದಗಿಸಬೇಕಾಗುತ್ತದೆ. ಪಿಎಫ್ ಹಣ (PF Amount)ಹಿಂಪಡೆಯಲು ನಮೂನೆ 31ರಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಆ ಬಳಿಕ, ಅನಾರೋಗ್ಯದ ಪ್ರಮಾಣ ಪತ್ರ ನೀಡಿದ ಬಳಿಕ ತನಿಖೆ ನಡೆಯುತ್ತದೆ.

ಶಿಕ್ಷಣ/ವಿವಾಹದ ನಿಯಮಗಳು
ಮಕ್ಕಳ ವಿದ್ಯಾಭ್ಯಾಸಕ್ಕಾಗಿ, ಇಲ್ಲವೇ ಮಕ್ಕಳ ಮದುವೆಗಾಗಿ ಪಿಎಫ್ ಮೊತ್ತವನ್ನು ಹಿಂಪಡೆಯಲು ಅವಕಾಶವಿದೆ. ಆದರೆ, ಇಲ್ಲಿ ಗಮನಿಸಬೇಕಾದ ಸಂಗತಿ ಏನೆಂದರೆ, ಇದರಲ್ಲಿ 7 ವರ್ಷಗಳಿಗಿಂತ ಹೆಚ್ಚು ಕಾಲ ಕೆಲಸ ಮಾಡಿದ ಬಳಿಕವೇ ನೀವು ಪಿಎಫ್ ಮೊತ್ತವನ್ನು ಹಿಂಪಡೆಯಬಹುದಾಗಿದೆ. ಪಿಎಫ್ ಪೂರ್ಣ ಮೊತ್ತವನ್ನು ಹಿಂತೆಗೆದುಕೊಳ್ಳುವ ಸಂದರ್ಭ ಇದಕ್ಕೆ ಸೂಕ್ತ ಆಧಾರ ಇಲ್ಲವೇ ಸಾಕ್ಷಿಯನ್ನು ಒದಗಿಸುವುದು ಬಹು ಮುಖ್ಯ ಪಾತ್ರ ವಹಿಸುತ್ತದೆ.

ಮನೆ ನಿರ್ಮಿಸಲು (House Building)
ಯಾವುದೇ ನೌಕರ ಮನೆ ನಿರ್ಮಿಸಲು, ಯಾವುದೇ ವ್ಯಕ್ತಿಯು ತನ್ನ ಸಂಬಳದ 36% ವರೆಗೆ ಪಿಎಫ್ ಹಣವನ್ನು ಹಿಂಪಡೆಯಲು ಅವಕಾಶವಿದ್ದು ಆದರೆ, ಪಿಎಫ್ ಮೊತ್ತವನ್ನು ಹಿಂಪಡೆಯಲು ನೀವು ಐದು ವರ್ಷಗಳನ್ನು ಪೂರ್ಣ ಮಾಡಿರಬೇಕಾಗುತ್ತದೆ.

ಆಸ್ತಿ ಖರೀದಿ(Land Purchase)
ನೀವೇನಾದರೂ ನೌಕರರಾಗಿದ್ದು, ಆಸ್ತಿ ಖರೀದಿ ಮಾಡುವ ಯೋಜನೆ ಹಾಕಿದ್ದರೆ, ಅದಕ್ಕೂ ಮುನ್ನ ಕೆಲ ವಿಚಾರಗಳ ಬಗ್ಗೆ ತಿಳಿದಿರುವುದು ಅವಶ್ಯಕ. ಆಸ್ತಿಯು ಯಾವುದೇ ಕಾನೂನು ಕ್ರಮದಲ್ಲಿ ಭಾಗಿಯಾಗದೆ ಇದ್ದಾಗ ಮಾತ್ರವೇ ನಿಮಗೆ ಪ್ಲಾಟ್ ಖರೀದಿಸಲು ಪಿಎಫ್ ಮೊತ್ತವನ್ನು ಹಿಂಪಡೆಯಲು ಸಾಧ್ಯವಾಗುತ್ತದೆ. ಪ್ಲಾಟ್ ಖರೀದಿಸಲು, ಯಾವುದೇ ವ್ಯಕ್ತಿಯು ನಿಮ್ಮ ಸಂಬಳದಿಂದ 24% ವರೆಗೆ PF ಅನ್ನು ಹಿಂತೆಗೆದುಕೊಳ್ಳಬಹುದಾಗಿದೆ. ಇದರ ಜೊತೆಗೆ ನೀವು ಒಮ್ಮೆ ಮಾತ್ರವೇ ಪಿಎಫ್ ಹಣವನ್ನು ಹಿಂಪಡೆಯಬಹುದಾಗಿದೆ.

ಇದನ್ನೂ ಓದಿ: NPS Scheme : ಎನ್ ಪಿಎಸ್ ಕುರಿತು ಸರಕಾರ ‌ನೀಡಿದೆ ಮಹತ್ವದ ಮಾಹಿತಿ!

Leave A Reply

Your email address will not be published.