SSPCA : ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ; ಕೇಂದ್ರ ಸರ್ಕಾರದ ಈ ಯೋಜನೆಯಡಿ ನಿಮಗೆ ಸಿಗುತ್ತೆ ₹10 ಲಕ್ಷ!!

SSPCA scheme: ಸರ್ಕಾರ ವಿದ್ಯಾರ್ಥಿಗಳಿಗಾಗಿ ಹಲವು ಯೋಜನೆಗಳನ್ನು (Central Scheme) ಜಾರಿಗೆ ತಂದಿದೆ. ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ನೀಡುತ್ತಿದೆ. ಅಂತೆಯೇ ಇದೀಗ ಕೇಂದ್ರ ಸರ್ಕಾರದ “ವಿದೇಶದಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಲು ವಿದ್ಯಾರ್ಥಿಗಳಿಗೆ ಬೆಂಬಲ” (Support To Students For Participating In Competition Abroad) ಈ ಯೋಜನೆಯಡಿ ವಿದ್ಯಾರ್ಥಿಗಳಿಗೆ ₹10 ಲಕ್ಷ ರೂ. ಲಭ್ಯವಾಗಲಿದೆ.

ವಿದೇಶಕ್ಕೆ (foreign) ತೆರಳಿ ಅಲ್ಲಿ ಸ್ಪರ್ಧೆಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಕಾರಕ್ಕೆ ಈ ಯೋಜನೆ (SSPCA scheme) ಜಾರಿಗೆ ತರಲಾಗಿದ್ದು, ವಿದೇಶದಲ್ಲಿ ನಡೆಯುವ ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸಲು ಹೆಚ್ಚು ವೆಚ್ಚ ಬೇಕಿದೆ. ಇಂಜಿನಿಯರಿಂಗ್ ವಿದ್ಯಾರ್ಥಿಗಳು (engeneering students) ವಿದೇಶಕ್ಕೆ ತೆರಳಿ ಅಲ್ಲಿನ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಲು ಆರ್ಥಿಕ ನೆರವು ನೀಡುವ ಸಲುವಾಗಿ ಕೇಂದ್ರ ಸರ್ಕಾರ ಈ ಯೋಜನೆಯನ್ನು ಜಾರಿಗೊಳಿಸುತ್ತಿದೆ. ಪ್ರತಿ ವಿದ್ಯಾರ್ಥಿಗೆ 1 ಲಕ್ಷದಂತೆ ಒಂದು ಗುಂಪಿನಲ್ಲಿ ಗರಿಷ್ಠ 10 ವಿದ್ಯಾರ್ಥಿಗಳಿಗೆ ಇಂತಹ ಸಹಾಯವನ್ನು ಒದಗಿಸುತ್ತದೆ.

ಕೇಂದ್ರ ಸರ್ಕಾರವು (central government) ಈ ಯೋಜನೆಯನ್ನು ಇಂಜಿನಿಯರಿಂಗ್ ಶಿಕ್ಷಣವನ್ನು ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಜಾರಿಗೊಳಿಸಿದೆ. ಎಐಸಿಡಿಇ ಈ ಯೋಜನೆಯನ್ನ ಜಾರಿಗೊಳಿಸುತ್ತಿದೆ. ಇದು ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವುದಲ್ಲದೇ, ಸಂಶೋಧನೆ, ನಾವೀನ್ಯತೆ ಮತ್ತು ಸ್ಪರ್ಧಾತ್ಮಕತೆಯನ್ನ ಹೆಚ್ಚಿಸುವ ಉದ್ದೇಶದಿಂದ ಕೇಂದ್ರವು ಈ ಯೋಜನೆಯನ್ನು ತಂದಿದೆ.

ಯಾರೆಲ್ಲಾ ಅರ್ಹರು?
• ದೇಶದಲ್ಲಿ ಬಿಇ/ಬಿ.ಟೆಕ್. ಅಥವಾ ಇಂಟಿಗ್ರೇಟೆಡ್ ಎಂ. ಟೆಕ್, ಅಥವಾ ME/M.Tech ನ 1 ನೇ ಮತ್ತು 2 ನೇ ವರ್ಷದ ವಿದ್ಯಾರ್ಥಿಗಳು ವಿದೇಶದಲ್ಲಿ ನಡೆಯುವ ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಲು ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡುತ್ತದೆ.
• ಅಭ್ಯರ್ಥಿಗಳು ಕಾಲೇಜುಗಳಲ್ಲಿ ಓದುತ್ತಿರಬೇಕು.
• ಪ್ರತಿ ವಿದ್ಯಾರ್ಥಿಗೆ ಸ್ಪರ್ಧೆಗೆ ಹೋಗುವ ತಂಡದಲ್ಲಿ ಗರಿಷ್ಠ 10 ಮಂದಿಗೆ ಒಂದೊಂದು ಲಕ್ಷ ರೂಪಾಯಿ ನೀಡಲಾಗುತ್ತದೆ.
• ಈ ಸ್ಪರ್ಧೆಯಲ್ಲಿ ನೀವು ಆಯ್ಕೆಯಾದರೆ, ನೀವು ಹಣವನ್ನು ಮುಂಚಿತವಾಗಿ ಪಾವತಿಸಬೇಕು. ಅಲ್ಲಿ ನೀವು ಪ್ರಸ್ತುತಿಯನ್ನು ನೀಡಬೇಕು. ಅರ್ಜಿಯಲ್ಲಿಯೇ ವಿವರಗಳನ್ನು ಸೇರಿಸಬೇಕು.

ಅರ್ಜಿ ಸಲ್ಲಿಸುವುದು ಹೇಗೆ?
ಅರ್ಜಿ ಸಲ್ಲಿಸಲು https://www.myscheme.gov.in/schemes/sspca ವೆಬ್‌ಸೈಟ್‌ಗೆ ಭೇಟಿ ನೀಡಿ. ಕೇಳಲಾಗುವ ಮಾಹಿತಿ‌ ನೀಡಿ, ಭರ್ತಿ ಮಾಡಿದ ಅರ್ಜಿಗಳನ್ನು ಆಫ್‌ಲೈನ್ ಮೂಲಕ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು.

ವಿಳಾಸ:
ಪ್ರೊ. ದಿಲೀಪ್ ಎನ್ ಮಾಲ್ಖೇಡೆ,
ಸಲಹೆಗಾರ RIFD,
ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ,
ನೆಲ್ಸನ್ ಮಂಡೇಲಾ ಮಾರ್ಗ್,
ವಸಂತ್ ಕುಂಜ್,
ನವದೆಹಲಿ – 110070

Leave A Reply

Your email address will not be published.