EPFO Recruitment 2023 : ಕೇಂದ್ರ ಸರಕಾರದ ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್‌ನ್ಯೂಸ್! 2,859 ಸಾಮಾಜಿಕ ಭದ್ರತಾ ಸಹಾಯಕ, ಸ್ಟೆನೋಗ್ರಾಫರ್ ಹುದ್ದೆಗಳಿಗೆ ಅರ್ಜಿ ಅಹ್ವಾನ! ಆಸಕ್ತರೇ ಈ ಕೂಡಲೇ ಅರ್ಜಿ ಸಲ್ಲಿಸಿ
EPFO Recruitment 2023: ಇಂದಿನ ಕಾಲದಲ್ಲಿ ಉದ್ಯೋಗ ಅತ್ಯವಶ್ಯಕವಾಗಿದ್ದು, ಆದರೆ, ಬಯಸಿದ ಉದ್ಯೋಗ(Job) ಪಡೆಯುವುದು ಸುಲಭದ ಮಾತಲ್ಲ. ಪೈಪೋಟಿಯ ನಡುವೆ ನೆಚ್ಚಿನ ಕೆಲ್ಸ ಗಿಟ್ಟಿಸಿಕೊಳ್ಳೋದು ಯುವಜನತೆಯ ಪಾಲಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದೀಗ ಸರಕಾರಿ ನೌಕರಿಯನ್ನು ಅರಸುತ್ತಿರುವ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ ಇಲ್ಲಿದೆ.
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು (EPFO)ಅಧಿಕೃತ ಅಧಿಸೂಚನೆಯ ಮಾರ್ಚ್ 2023 ರ (EPFO Recruitment 2023)ಮೂಲಕ ಸಾಮಾಜಿಕ ಭದ್ರತಾ ಸಹಾಯಕ, ಸ್ಟೆನೋಗ್ರಾಫರ್ ಪೋಸ್ಟ್‌ಗಳನ್ನು ಭರ್ತಿ ಮಾಡಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ. 2859 ಸಾಮಾಜಿಕ ಭದ್ರತಾ ಸಹಾಯಕ (Security Assistant), ಸ್ಟೆನೋಗ್ರಾಫರ್ (Stenographer) ಹುದ್ದೆಗಳು ಖಾಲಿಯಿದ್ದು, ಕೊನೆಯ ದಿನದ ಮೊದಲು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವುದು ಉತ್ತಮ. ಅರ್ಜಿ ಸಲ್ಲಿಸುವ ಮುನ್ನ ಹುದ್ದೆಗಳ ವಿವರ, ನೇಮಕಾತಿ ಪ್ರಕ್ರಿಯೆ, ವೇತನ ಮೊದಲಾದ ಮಾಹಿತಿ ತಿಳಿದಿರುವುದು ಒಳ್ಳೆಯದು. ಈ ಕುರಿತ ಮಾಹಿತಿ ಇಲ್ಲಿ ನೀಡಲಾಗಿದೆ.
ಸಂಸ್ಥೆಯ ಹೆಸರು: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO)
ಹುದ್ದೆಗಳ ಸಂಖ್ಯೆ: 2859
ಹುದ್ದೆಯ ಹೆಸರು: ಸಾಮಾಜಿಕ ಭದ್ರತಾ ಸಹಾಯಕ, ಸ್ಟೆನೋಗ್ರಾಫರ್
ಸಾಮಾಜಿಕ ಭದ್ರತಾ ಸಹಾಯಕ- 2674
ಸ್ಟೆನೋಗ್ರಾಫರ್- 185
ಉದ್ಯೋಗ ಸ್ಥಳ: ಭಾರತ
ಪ್ರಮುಖ ದಿನಾಂಕಗಳು:
ಆಸಕ್ತ ಅಭ್ಯರ್ಥಿಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು 27-03-2023 ಪ್ರಾರಂಭಿಕ ದಿನವಾಗಿದ್ದು,26-04-2023 ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಅರ್ಹತೆ ಮತ್ತು ಮಾನದಂಡ (Education Qualification)
ಸಾಮಾಜಿಕ ಭದ್ರತಾ ಸಹಾಯಕ ಹುದ್ದೆಗೆ ಆಸಕ್ತ ಅಭ್ಯರ್ಥಿಗಳು ಪದವಿ ಪೂರ್ಣಗೊಳಿಸಿರಬೇಕು.ಸ್ಟೆನೋಗ್ರಾಫರ್ ಹುದ್ದೆಗೆ ಪಿಯುಸಿ ಆಗಿರಬೇಕಾಗುತ್ತದೆ.
ವಯೋಮಿತಿ(Age Limit):
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ ನೇಮಕಾತಿ ಅಧಿಸೂಚನೆಯ ಅನುಸಾರ, ಅಭ್ಯರ್ಥಿಯು 26 .04.2023 ರಂತೆ ಕನಿಷ್ಠ 18 ವರ್ಷಗಳಾಗಿದ್ದು ಮತ್ತು ಗರಿಷ್ಠ 27 ವರ್ಷಗಳನ್ನು ಹೊಂದಿರಬೇಕಾಗುತ್ತದೆ.ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ ನಿಯಮಗಳ ಅನುಸಾರ ವಯೋಮಿತಿ ಸಡಿಲಿಕೆ ಇರಲಿದೆ.
ಅರ್ಜಿ ಶುಲ್ಕ:
ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಆನ್ಲೈನ್ (Online) ಮೂಲಕ ಅರ್ಜಿ ಶುಲ್ಕ(Application Fee) ಪಾವತಿ ಮಾಡಬೇಕಾಗಿದ್ದು,SC/ST/PwBD/ಮಾಜಿ ಸೈನಿಕ/ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ. ಇನ್ನುಳಿದ ಅಭ್ಯರ್ಥಿಗಳಿಗೆಅರ್ಜಿ ಶುಲ್ಕ ರೂ.700/- ಆಗಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೊದಲು, EPFO ನೇಮಕಾತಿ ಅಧಿಸೂಚನೆ 2023 ಅನ್ನು ಸಂಪೂರ್ಣವಾಗಿ ಪರಿಶೀಲಿಸಿದ ಬಳಿಕ ನೀವು ಈ ಹುದ್ದೆಗೆ ಅರ್ಜಿ ಸಲ್ಲಿಸುವ ಮಾನದಂಡಗಳನ್ನು ಹೊಂದಿದ್ದೀರಿ ಎಂದಾದರೆ, ಆನ್‌ಲೈನ್ ಮೋಡ್ ಮೂಲಕ ಅರ್ಜಿ ಸಲ್ಲಿಸಬಹುದು.EPFO ಸಾಮಾಜಿಕ ಭದ್ರತಾ ಸಹಾಯಕ, ಸ್ಟೆನೋಗ್ರಾಫರ್ ಆನ್‌ಲೈನ್‌ನಲ್ಲಿ ಅನ್ವಯಿಸು ಎಂದು ಒತ್ತಿ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕು.
ಅಧಿಕೃತ ವೆಬ್‌ಸೈಟ್: epfindia.gov.in ಭೇಟಿ ನೀಡಿದ ನಂತರ, EPFO ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀಡಬೇಕು. ಇತ್ತೀಚಿನ ಫೋಟೋಗ್ರಾಫ್ ಜೊತೆಗೆ ಅಗತ್ಯ ಪ್ರಮಾಣಪತ್ರಗಳು/ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಬೇಕು. ಈ ಪ್ರಕ್ರಿಯೆಯ ಬಳಿಕ ಅರ್ಜಿ ಶುಲ್ಕವನ್ನು ಪಾವತಿಸಿದ ನಂತರ EPFO ನೇಮಕಾತಿ 2023 ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಲ್ಲಿಸು ಬಟನ್ ಅನ್ನು ಕೊನೆಯದಾಗಿ ಕ್ಲಿಕ್ ಮಾಡಬೇಕು.
ಆಯ್ಕೆ ಪ್ರಕ್ರಿಯೆ(Selection Procedures)
ಈ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆಯು ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ನಡೆಯುತ್ತದೆ.
ವೇತನ
ಸಾಮಾಜಿಕ ಭದ್ರತಾ ಸಹಾಯಕ ರೂ.29200-92300/-
ಸ್ಟೆನೋಗ್ರಾಫರ್ ರೂ.25500-81100/-
ಮೇಲೆ ತಿಳಿಸಿದ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 26-04-2023ಕೊನೆಯ ದಿನಾಂಕದ ಮೊದಲೇ ಅರ್ಜಿ ಸಲ್ಲಿಸುವುದು ಉತ್ತಮ.