How to get Rid Of Rats : ನಿಮ್ಮ ಮನೆಯಲ್ಲಿ ಇಲಿ ಕಾಟವೇ? ಇಲ್ಲಿದೆ ಕೆಲವೊಂದು ನೈಸರ್ಗಿಕ ಉಪಾಯ!

Rat problem : ಇಲಿ ಒಂದು ಚೇಷ್ಟೆ ಮಾಡಬಲ್ಲ ಪ್ರಾಣಿ ಮತ್ತು ಆರೋಗ್ಯ ದೃಷ್ಟಿ ಯಿಂದಲೂ ಅಪಾಯಕಾರಿ. ಇನ್ನು ಮನೆಯಲ್ಲಿ ಇಲಿಗಳ ಕಾಟ (Rat problem) ತಪ್ಪಿದ್ದಲ್ಲ. ಮುಖ್ಯವಾಗಿ ಇಲಿಗಳಿಂದ ರೋಗ ರುಜಿನಗಳು ಹರಡುತ್ತವೆ ಎಂಬುದರಲ್ಲಿ ಸಂಶಯವಿಲ್ಲ. ಅದಲ್ಲದೆ ಪುಸ್ತಕಗಳನ್ನು, ಬಟ್ಟೆಗಳನ್ನು, ಆಹಾರಗಳನ್ನು ಹಾಳು ಮಾಡಿಬಿಡುತ್ತವೆ. ಇದರಿಂದ ನೀವು ಬೇಸತ್ತು ಹೋಗಿರಬಹುದು. ನಿಮ್ಮ ಪ್ರಕಾರ ಇಲಿಗಳ ನಾಶ ಮಾಡುವುದು ಒಂದು ದೊಡ್ಡ ಸಮಸ್ಯೆ ಎಂದು ನೀವು ಅಂದುಕೊಂಡಿರಬಹುದು. ನಿಮ್ಮ ಊಹೆ ತಪ್ಪು. ಯಾಕೆಂದರೆ ಇಲಿಗಳಿಂದ ತಪ್ಪಿಸಿಕೊಳ್ಳಲು ಈ ಕೆಳಗಿನ ಸಲಹೆಯನ್ನು ಅನುಸರಿಸಿ.

ಇಲಿಗಳ ಕಾಟದಿಂದ ಮುಕ್ತಿ ಪಡೆಯೋದಕ್ಕೆ ಇಲಿಗಳನ್ನು ಮನೆ ಯಿಂದ ಓಡಿಸಲು, ಜನರು ವಿಷ ಬೆರೆಸಿದ ಪಂಜರಗಳಲ್ಲಿ ಮತ್ತು ಬ್ರೆಡ್ ಅನ್ನು ಮನೆಗಳಲ್ಲಿ ಇಡುತ್ತಾರೆ. ಇದರಿಂದ ನಿಮ್ಮ ಸಾಕು ಪ್ರಾಣಿಗಳ ಪ್ರಾಣಕ್ಕೆ ಅಪಾಯ ಉಂಟಾಗಬಹುದು. ಅಂದರೆ ಇಲಿ ಪಾಷಾಣ ತಿಂದು ಮನೆಯ ಬೆಕ್ಕು, ನಾಯಿಗಳೂ ಸಾಯಬಹುದು. ಆದ್ದರಿಂದ ಈ ಕೆಳಗಿನ ನೈಸರ್ಗಿಕ ತಂತ್ರ ಬಳಸಿ ನೋಡಿ ಇಲಿಗಳು ಮಾಯ ಆಗಲಿದೆ.

ಬೆಳ್ಳುಳ್ಳಿ (garlic):
ಬೆಳ್ಳುಳ್ಳಿಯ ವಾಸನೆಯು ಇಲಿಗಳಿಗೆ ಇಷ್ಟವಾಗುವುದಿಲ್ಲ. ಬೆಳ್ಳುಳ್ಳಿಯನ್ನು ನೀರಿನಲ್ಲಿ ನೆನೆಸಿಡಿ. ಬಳಿಕ ಆ ನೀರನ್ನು ಮನೆಯ ವಿವಿಧೆಡೆ ಸಿಂಪಡಿಸಿ. ಆ ಸ್ಥಳಗಳಿಗೆ ಇಲಿಗಳು ಹೋಗುವುದಿಲ್ಲ.

ಅಡುಗೆ ಸೋಡಾ :
ಅಡುಗೆ ಸೋಡಾ ಇಲಿಗಳು ಮತ್ತು ಇತರ ಕೀಟಗಳನ್ನು ತಡೆಯಲು ಸಹಾಯ ಮಾಡುತ್ತದೆ. ಇಲಿಗಳು ಹೆಚ್ಚಾಗಿ ಬರುವ ಸ್ಥಳಗಳಲ್ಲಿ ಉತ್ತಮ ಪ್ರಮಾಣದ ಅಡಿಗೆ ಸೋಡಾವನ್ನು ಸಿಂಪಡಿಸಿ ಮತ್ತು ರಾತ್ರಿಯಿಡೀ ಬಿಡಿ. ಬೆಳಿಗ್ಗೆ, ಪುಡಿಯನ್ನು ಕ್ಲೀನ್ ಮಾಡಲು ಮರೆಯದಿರಿ. ಈ ವಿಧಾನವನ್ನು ಒಂದೆರಡು ದಿನಗಳವರೆಗೆ ಪುನರಾವರ್ತಿಸಿ.

ಈರುಳ್ಳಿ (onion) :
ಇಲಿಗಳಿಗೆ ಈರುಳ್ಳಿಯ ವಾಸನೆಯೇ ಇಷ್ಟವಾಗುವುದಿಲ್ಲ. ಆದ್ದರಿಂದ ನೀವು ಇಲಿಗಳನ್ನು ಹಿಮ್ಮೆಟ್ಟಿಸಲು ಈರುಳ್ಳಿ ಸಿಪ್ಪೆ ಅಥವಾ ಕತ್ತರಿಸಿದ ಈರುಳ್ಳಿ ಬಳಸಬಹುದು. ಇಲಿಗಳು ಸಂತಾನೋತ್ಪತ್ತಿ ಮಾಡುವ ಮನೆಯ ಪ್ರದೇಶಗಳಲ್ಲಿ ಅವುಗಳನ್ನು ಹರಡಿ. ಇಲಿಗಳು ಹೆಚ್ಚಾಗಿ ಎಲ್ಲಿ ಸೇರಿಕೊಳ್ಳುತ್ತವೆಯೋ ಅಲ್ಲಿ ಈರುಳ್ಳಿಗಳನ್ನು ಕತ್ತರಿಸಿ ಹಾಕಿ.

ಪುದೀನ ಎಲೆಗಳು:
ಇಲಿಗಳು ಪುದೀನದ ಪರಿಮಳವನ್ನು ಇಷ್ಟಪಡುವುದಿಲ್ಲ. ಆದ್ದರಿಂದ, ನೀವು ಇಲಿಗಳ ಸ್ಥಳದ ಮೇಲೆ ಪುದೀನಾ ನೀರನ್ನು ಸಿಂಪಡಣೆ ಮಾಡಿದರೆ, ಇಲಿಗಳು ತಕ್ಷಣ ಓಡಿ ಹೋಗುತ್ತದೆ.

ತಂಬಾಕು:
ನಿಮ್ಮ ಮನೆಯಲ್ಲಿ ಇಲಿಗಳಿಂದ ನೀವು ತೊಂದರೆಗೀಡಾಗಿದ್ದರೆ, ನೀವು ತಂಬಾಕನ್ನು ಬಳಸಬಹುದು. ಇದಕ್ಕಾಗಿ, ನೀವು ಕಡಲೆ ಹಿಟ್ಟಿಗೆ ಸ್ವಲ್ಪ ತುಪ್ಪವನ್ನು ಸೇರಿಸಿ ಇಲಿಗಳ ಇರಬಹುದಾದ ಜಾಗದಲ್ಲಿ ಇರಿಸಿ.

ಕೆಂಪು ಮೆಣಸಿನ ಪುಡಿ :
ನಿಮ್ಮ ಮನೆಯಲ್ಲಿ ಇಲಿಗಳು ಬಂದು ಹೋಗುತ್ತಿದ್ದರೆ, ಅವುಗಳು ಬರುವ ಸ್ಥಳದ ಮೇಲೆ ಕೆಂಪು ಮೆಣಸಿನ ಪುಡಿಯನ್ನು ಸಿಂಪಡಿಸಿ. ಇದರೊಂದಿಗೆ, ಇಲಿಗಳು ಮತ್ತೆ ಆ ಸ್ಥಳಕ್ಕೆ ಬರುವುದಿಲ್ಲ.

ಕರ್ಪೂರ:
ಕರ್ಪೂರದ ವಾಸನೆ ಕೆಟ್ಟದಾಗಿರುತ್ತದೆ , ಆ ಕಾರಣಕ್ಕಾಗಿ ನಿಮ್ಮ ಮನೆಯ ಪ್ರತಿಯೊಂದು ಮೂಲೆಯಲ್ಲಿ ಕರ್ಪೂರದ ತುಂಡುಗಳನ್ನು ಇಡಬೇಕು. ಈ ಕಾರಣದಿಂದಾಗಿ, ಇಲಿಗಳು ಅಸಮಾಧಾನಗೊಂಡು ನಿಮ್ಮ ಮನೆಯಿಂದ ಓಡಿಹೋಗುತ್ತವೆ.

ಇನ್ನು ಒಂದು ಸ್ಪ್ರೇ ಬಾಟಲ್ ನಲ್ಲಿ ನೀವು ಅರ್ಧ ಗ್ಲಾಸ್ ನೀರು ಹಾಕಿ. ಅಂದ್ರೆ ಬಾಟಲಿ ಅರ್ಧವಷ್ಟೇ ತುಂಬಿರಬೇಕು. ಅದಕ್ಕೆ ಎರಡು ಸ್ಪೂನ್ ಉಪ್ಪು, ಒಂದು ಸ್ಪೂನ್ ಕರ್ಪೂರದ ಪುಡಿ ಹಾಕಿ ಮಿಕ್ಸ್ ಮಾಡಿ. ಇದಕ್ಕೆ ನಾಲ್ಕು ಸ್ಪೂನ್ ವೈಟ್ ವಿನೇಗರ್, ಎರಡು ಸ್ಪೂನ್ ಡೆಟಾಲ್ ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ. ಒಂದು ಹತ್ತಿ ತೆಗೆದುಕೊಂಡು ಅದಕ್ಕೆ ಈ ನೀರನ್ನು ಸ್ಪ್ರೇ ಮಾಡಿ, ಆ ಹತ್ತಿಯನ್ನು ಇಲಿ ಬರುವ ಜಾಗದಲ್ಲಿರಿಸಿ. ಹೀಗೆ ಮಾಡುವುದರಿಂದ ಇಲಿ ಓಡಿ ಹೋಗುತ್ತದೆ. ಆದರೆ ನೆನಪಿರಲಿ, ಗೋಡೆಗಳಿಗೆ, ನೆಲಕ್ಕೆ ಈ ಹತ್ತಿ ತಾಕದಂತೆ ನೋಡಿಕೊಳ್ಳಿ

ಲವಂಗ :
ಇಲಿಗಳಿಗೆ ಲವಂಗದ ವಾಸನೆಯೂ ಆಗುವುದಿಲ್ಲ . ಕೆಲವು ಲವಂಗಗಳನ್ನು ಬಟ್ಟೆಯಲ್ಲಿ ಸುತ್ತಿಡಿ. ಬಳಿಕ ಅದನ್ನು ಮನೆಯ ಕೋಣೆಗಳ ಮೂಲೆಗಳಲ್ಲಿ, ಇಲಿಗಳು ಹೆಚ್ಚು ಸೇರುವಲ್ಲಿ ಇರಿಸಿ.

ಈ ರೀತಿಯಾಗಿ ನೈಸರ್ಗಿಕ ವಿಧಾನ ಬಳಸಿ ಇಲಿಗಳನ್ನು ಮನೆಯಿಂದ ಸುಲಭವಾಗಿ ಓಡಿಸಬಹುದು.

ಇದನ್ನೂ ಓದಿ: Dog : ನಾಯಿ ಸಾಕುವವರಿಗೊಂದು ಉಪಯುಕ್ತ ಮಾಹಿತಿ ಇಲ್ಲಿದೆ!

Leave A Reply

Your email address will not be published.