BJP is world’s most important party : ವಿಶ್ವದ ಪ್ರಮುಖ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ! 2024ರಲ್ಲೂ ಮೋದಿ ಪ್ರಧಾನಿ ಎಂದ ಅಮೇರಿಕಾ ವರದಿ!
BJP Party :ಭಾರತದಾದ್ಯಂತ ವ್ಯಾಪಿಸಿರುವಂತಹ ಭಾರತೀಯ ಜನತಾ ಪಾರ್ಟಿ(BJP Party) ಈಗ ವಿದೇಶಗಳಲ್ಲಿಯೂ ಸದ್ದು ಮಾಡುತ್ತಿದೆ. ಸದ್ಯ ಇದು ಪ್ರಪಂಚದ ಪ್ರಮುಖ ಪಕ್ಷಗಳಲ್ಲೊಂದು ಎಂದು ಗುರುತಿಸಿಕೊಳ್ಳುತ್ತಿದೆ. ಯಾಕೆಂದರೆ ಅಮೆರಿಕದ(America) ಪ್ರಮುಖ ದಿನಪತ್ರಿಕೆ ವಾಲ್ ಸ್ಟ್ರೀಟ್ ಜರ್ನಲ್(Wall Street Gunral) ತನ್ನ ವರದಿಯಲ್ಲಿ ಬಿಜೆಪಿ ವಿಶ್ವದ ಪ್ರಮುಖ ಪಕ್ಷವಾಗಿದೆ ಎಂದು ಹೇಳಿದೆ.
ಹೌದು, ಒಂದು ಕಾಲದಲ್ಲಿ ಚಿಗುರೊಡೆಯುತ್ತಿದ್ದ ಬಿಜೆಪಿ ಪಕ್ಷವನ್ನು, ನಾಯಕರನ್ನು ಅಸಡ್ಡೆಯಿಂದ ಕಾಣುತ್ತಿದ್ದ ಕಾಲವೀಗ ಬದಲಾಗಿದೆ. ಇಂದು ಬಿಜೆಪಿಯನ್ನು ವಿಶ್ವಮಟ್ಟದಲ್ಲಿಟ್ಟು ನೋಡುವಂತಾಗಿದೆ. ಅಂತೆಯೇ ಅಮೆರಿಕದ ಮಾಧ್ಯಮಗಳು ಈಗ ಭಾರತೀಯ ಜನತಾ ಪಕ್ಷವನ್ನ ಬಹಿರಂಗವಾಗಿ ಹೊಗಳಲು ಪ್ರಾರಂಭಿಸಿವೆ. ಹೀಗಾಗಿ ಇಲ್ಲಿಯವರೆಗೆ ಬಲಪಂಥೀಯ ಪಕ್ಷ ಮತ್ತು ‘ರಾಜಕೀಯ ಅಸ್ಪೃಶ್ಯರು’ ಎಂದು ಪರಿಗಣಿಸಲ್ಪಟ್ಟಿದ್ದ ಬಿಜೆಪಿಯನ್ನ ವಿಶ್ವದ ಪ್ರಮುಖ ರಾಜಕೀಯ ಪಕ್ಷ ಎಂದು ಸಂಬೋಧಿಸಲಾಗುತ್ತಿದೆ.
ಈ ಕುರಿತಂತೆ ಮಹತ್ವದ ವರದಿ ಬಿಡುಗಡೆ ಮಾಡಿರುವ ರಸ್ಸೆಲ್ ಮೀಡ್ ಅವರು ವಾಲ್ ಸ್ಟ್ರೀಟ್ ಜರ್ನಲ್ ಪತ್ರಿಕೆಯಲ್ಲಿ ‘ಅಮೆರಿಕದ ರಾಷ್ಟ್ರೀಯ ಹಿತಾಸಕ್ತಿಗಳ ದೃಷ್ಟಿಕೋನದಿಂದ ಭಾರತದ ಆಡಳಿತಾರೂಢ ಭಾರತೀಯ ಜನತಾ ಪಕ್ಷವು ವಿಶ್ವದ ಪ್ರಮುಖ ವಿದೇಶಿ ರಾಜಕೀಯ ಪಕ್ಷವಾಗಿದೆ’. 2014 ಮತ್ತು 2019ರಲ್ಲಿ ಸತತ ಎರಡು ವಿಜಯಗಳನ್ನ ಗೆದ್ದ ನಂತರ, ಭಾರತೀಯ ಜನತಾ ಪಕ್ಷ (ಬಿಜೆಪಿ) 2024ರ ಚುನಾವಣೆಯಲ್ಲಿ ಸತತ ಮೂರನೇ ಗೆಲುವಿನತ್ತ ಸಾಗುತ್ತಿದೆ, ಭಾರತವು ಪ್ರಮುಖ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ಯುಎಸ್ ಮತ್ತು ಜಪಾನ್ ಇಂಡೋ-ಪೆಸಿಫಿಕ್ನಲ್ಲಿ ಪ್ರಮುಖ ಶಕ್ತಿಯಾಗಿ ಹೊರಹೊಮ್ಮುತ್ತಿವೆ, ಇದು ಯುಎಸ್ ಕಾರ್ಯತಂತ್ರಕ್ಕೆ ಉತ್ತಮ ಮೈಲಿಗಲ್ಲಾಗಿದೆ’ ಎಂದು ತಿಳಿಸಿದ್ದಾರೆ.
ಆಧುನಿಕತೆಯ ಪ್ರಮುಖ ಲಕ್ಷಣಗಳನ್ನ ಅಳವಡಿಸಿಕೊಂಡರೂ, ಬಿಜೆಪಿ ಪಾಶ್ಚಿಮಾತ್ಯ ಉದಾರವಾದದ ಅನೇಕ ವಿಚಾರಗಳು ಮತ್ತು ಆದ್ಯತೆಗಳನ್ನ ತಿರಸ್ಕರಿಸುತ್ತದೆ. ಚೀನಾದ ಕಮ್ಯುನಿಸ್ಟ್ ಪಕ್ಷದಂತೆ, ಒಂದು ಶತಕೋಟಿ ಜನರನ್ನ ಹೊಂದಿರುವ ದೇಶವನ್ನ ಜಾಗತಿಕ ಸೂಪರ್ ಪವರ್ ಆಗಿ ಮುನ್ನಡೆಸಲು ಬಿಜೆಪಿ ಆಶಿಸಿದೆ. ಇಸ್ರೇಲ್ನ ಲಿಕುಡ್ ಪಕ್ಷದಂತೆ (ಬೆಂಜಮಿನ್ ನೆತನ್ಯಾಹು ಅವರ ಪಕ್ಷ), ಬಿಜೆಪಿಯು ಮೂಲಭೂತವಾಗಿ ಮಾರುಕಟ್ಟೆ ಪರ ಆರ್ಥಿಕ ನಿಲುವನ್ನ ಜನಪ್ರಿಯ ವಾಕ್ಚಾತುರ್ಯ ಮತ್ತು ಸಾಂಪ್ರದಾಯಿಕ ಮೌಲ್ಯಗಳೊಂದಿಗೆ ಸಂಪರ್ಕಿಸುತ್ತದೆ’ ಎಂದು ವರದಿ ಹೇಳಿದೆ.
ಇದರೊಂದಿಗೆ ಭಾರತೀಯೇತರರಿಗೆ ಪರಿಚಯವಿಲ್ಲದ ಭಾರತೀಯ ಸಾಂಸ್ಕೃತಿಕ ಇತಿಹಾಸ ಮತ್ತು ಇಲ್ಲಿನ ರಾಜಕೀಯವನ್ನು ಬಿಜೆಪಿಯಿಂದ ಅರ್ಥಮಾಡಿಕೊಳ್ಳಲಾಗಿದೆ. ಬಿಜೆಪಿಯ ಚುನಾವಣಾ ಪ್ರಾಬಲ್ಯವು ಹಿಂದೂ ಮಾರ್ಗದ ಮೂಲಕ ಆಧುನೀಕರಣದತ್ತ ಸಾಗುವ ದೃಷ್ಟಿಕೋನದೊಂದಿಗೆ ಸಾಮಾಜಿಕ ಚಿಂತಕರು ಮತ್ತು ಕಾರ್ಯಕರ್ತರ ಸಾಮಾಜಿಕ ಚಳವಳಿಯ ಯಶಸ್ಸನ್ನ ಪ್ರತಿಬಿಂಬಿಸುತ್ತದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಹೇಳಿದೆ.