Home Breaking Entertainment News Kannada Actress Haripriya: ಗುಡ್ ನ್ಯೂಸ್ ಏನೆಂದು ಹೇಳಿದ್ರು ಹರಿಪ್ರಿಯಾ! ಅಭಿಮಾನಿಗಳೇ, ಪ್ರೆಗ್ನೆಂಟ್‌ ಅಲ್ಲ...

Actress Haripriya: ಗುಡ್ ನ್ಯೂಸ್ ಏನೆಂದು ಹೇಳಿದ್ರು ಹರಿಪ್ರಿಯಾ! ಅಭಿಮಾನಿಗಳೇ, ಪ್ರೆಗ್ನೆಂಟ್‌ ಅಲ್ಲ ಇದಂತೆ ನ್ಯೂಸ್‌!

Actress Haripriya

Hindu neighbor gifts plot of land

Hindu neighbour gifts land to Muslim journalist

Actress Haripriya : ಮೈಸೂರಿನಲ್ಲಿ ವಿವಾಹ (Marriage) ನೆರವೇರಿಸಿಕೊಂಡಿದ್ದ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ (Haripriya -Vasishta Simha) ಜೋಡಿ ಕಳೆದ ಕೆಲ ದಿನಗಳ ಹಿಂದೆ ಗುಡ್‌ನ್ಯೂಸ್‌ ನೀಡಿದೆ. ಆ ವಿಚಾರವೇನು ಎಂಬುದನ್ನು ಸೋಷಿಯಲ್‌ ಮೀಡಿಯಾದಲ್ಲಿ ಸಂಪೂರ್ಣವಾಗಿ ಹೇಳಿಕೊಂಡಿಲ್ಲ. ಬದಲಿಗೆ ನೀವೇ ಊಹಿಸಿ ಎಂದು ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದರು ಹರಿಪ್ರಿಯಾ (Actress Haripriya). ಸದ್ಯ ಈ ಬಗ್ಗೆ ಇದೀಗ ಮಾಹಿತಿ ಬಹಿರಂಗಪಡಿಸಿದ್ದಾರೆ.

ಹರಿಪ್ರಿಯಾ ಗುಡ್ ನ್ಯೂಸ್ ಎಂದಿದ್ದೇ ತಡ ಅವರ ಅಭಿಮಾನಿಗಳು ಬಗೆಬಗೆ ರೀತಿಯಲ್ಲಿ ಕಮೆಂಟ್‌ ಮಾಡುತ್ತಿದ್ದು, ನಟಿಯ ಮದುವೆಯಾಯಿತು ಇನ್ನೇನು ಆಕೆ ಗರ್ಭಿಣಿ (Pregnant) ಆಗಿರಬಹುದು. ಇನ್ನೇನು ಮಗು ಬರಲಿದೆ ಎನ್ನುತ್ತಿದ್ದ ಆಕೆಯ ಅಭಿಮಾನಿ ಬಳಗಕ್ಕೆ ಇದೀಗ ನಟಿ ಶಾಕ್ ಕೊಟ್ಟಿದ್ದಾರೆ. ಊಹೆ ಸುಳ್ಳು ಮಾಡಿದ್ದಾರೆ.

ನಟಿ ಹರಿಪ್ರಿಯಾ ತಾಯಿ ಆಗ್ತಾ ಇಲ್ಲ. ಬದಲಿಗೆ ಯೂಟ್ಯೂಬ್ ಚಾನೆಲ್ ಪ್ರಾರಂಭ ಮಾಡ್ತಾ ಇದ್ದಾರೆ. ಅದಕ್ಕೆ ಗುಡ್ ನ್ಯೂಸ್ ಎಂದು ಹೇಳಿಕೊಂಡಿದ್ದಾರೆ. “ನಿಮ್ಮ ಎಲ್ಲಾ ಊಹೆಗಳಿಗೆ ಧನ್ಯವಾದಗಳು. ಇಲ್ಲಿದೆ ಸುದ್ದಿ, ನನ್ನ ಯೂಟ್ಯೂಬ್ ಚಾನೆಲ್ ಅನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ”ಎಂದು ಹರಿಪ್ರಿಯಾ ಹೊಸ ವಿಡಿಯೋ ಶೇರ್ ಮಾಡಿದ್ದಾರೆ.

ಹರಿಪ್ರಿಯಾ ಎಲ್ಲೇ ಹೋದ್ರೂ, ಬಂದ್ರು ಎಲ್ಲರೂ ಯೂಟ್ಯೂಬ್ ಚಾನೆಲ್ ಯಾವಾಗ ಪ್ರಾರಂಭ ಮಾಡ್ತೀರಿ ಎಂದು ಕೇಳ್ತಾ ಇದ್ದರಂತೆ. ಹಾಗಾಗಿ ನಟಿ ಆದಷ್ಟು ಬೇಗ ಯೂಟ್ಯೂಬ್ ಚಾನೆಲ್ ಓಪನ್ ಮಾಡುವುದಾಗಿ ಹೇಳಿದ್ದಾರೆ.