Upcoming Micro Electric SUV : MGಯಿಂದ ಬರಲಿದೆ ಹೊಸ ಎಲೆಕ್ಟ್ರಿಕ್ ಕಾರು ! ಎಲ್ಲರನ್ನೂ ಮಂತ್ರ ಮುಗ್ಧರನ್ನಾಗಿಸುವುದು ಖಂಡಿತ!
Micro Electric SUV : ಬ್ರಿಟಿಷ್ ವಾಹನ ತಯಾರಕ ‘ಎಂಜಿ ಮೋಟಾರ್’ ಕಂಪನಿ ವಿಶ್ವಾದ್ಯಂತ ಖ್ಯಾತಿಗಳಿಸಿದ್ದು, ಇದೀಗ ಹೊಸ ಮೈಕ್ರೋ ಎಲೆಕ್ಟ್ರಿಕ್ ಎಸ್‌ಯುವಿಯನ್ನು (Micro Electric SUV) ಪರಿಚಯಿಸಲು ಸಿದ್ಧತೆ ನಡೆಸಿದೆ. ಅದೂ ಸಹ ಹೊಸ ವಿನ್ಯಾಸದೊಂದಿಗೆ.
ಶೀಘ್ರದಲ್ಲಿ ಅಂದರೆ ಬರುವ ಏಪ್ರಿಲ್ ಕೊನೆಗೆ ಅಥವಾ ಮೇ ತಿಂಗಳ ಆರಂಭದಲ್ಲಿ ಎಂಜಿ ಮೋಟಾರ್ ಇಂಡಿಯಾ (MG Motor India) ಭಾರತದ ಮಾರುಕಟ್ಟೆಯಲ್ಲಿ ತನ್ನ ಕಾಮೆಟ್ (Comet) ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಕಂಪನಿಯು ‘ಗ್ಲೋಬಲ್ ಸ್ಮಾಲ್ ಎಲೆಕ್ಟ್ರಿಕ್ ವೆಹಿಕಲ್’ (GSEV) ಎಂಬುದಾಗಿ ಇದನ್ನು ಪ್ಲಾಟ್‌ಫಾರ್ಮ್‌ನಡಿ ಆಕರ್ಷಕವಾಗಿ ವಿನ್ಯಾಸ ಮಾಡಿದ್ದು, ಮಾರುಕಟ್ಟೆಯಲ್ಲಿ ಹವಾ ಎಬ್ಬಿಸಲಿದೆ.
‘ಎಂಜಿ ಮೋಟಾರ್’ ತನ್ನ ಹೊಸ ‘ಕಾಮೆಟ್’ ಎಲೆಕ್ಟ್ರಿಕ್ ಕಾರನ್ನು ದೇಶೀಯ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ನೀಡುವ ಉದ್ದೇಶದಿಂದ ಟಾಟಾ ಆಟೋಕಾಂಪ್‌ನಿಂದ ಬ್ಯಾಟರಿಗಳನ್ನು ತೆಗೆದುಕೊಳ್ಳುತ್ತಿದ್ದು, ಇದಕ್ಕೆ E260 ಎಂಬ ಕೋಡ್ ನೇಮ್ ಇಡಲಾಗಿದ್ದು, 3 ಡೋರ್ ಆಯ್ಕೆಯನ್ನು ಹೊಂದಿದೆ. ಇದು ನಗರದೊಳಗೆ ಸಂಚರಿಸಲು ಸಾಧ್ಯವಾಗುವಂತೆ ಅಭಿವೃದ್ಧಿಪಡಿಸಲಾಗುತ್ತಿದೆ.
ಈ ಎಸ್‌ಯುವಿ ಚೀನಾದ ಪ್ರಮುಖ ವಾಹನ ತಯಾರಕ ಕಂಪನಿ ‘Baojun’ 2022ರಲ್ಲಿ ಅನಾವರಣಗಳಿಸಿದ ‘ ‘Yep’ ಮೈಕ್ರೋ ಎಸ್‌ಯುವಿಯ ಕಾನ್ಸೆಪ್ಟ್ ಆಧರಿಸಿದೆ. ಜಿಮ್ನಿ/ ಫೋರ್ಡ್ ಬ್ರಾಂಕೊ ಹೊಂದಿರುವಂತೆ ರೆಟ್ರೋ ಲುಕ್ ಹೊಂದಿದ್ದು, ದೊಡ್ಡದಾದ ವೀಲ್ಸ್ ಹಾಗೂ ಟೈಯರ್ಸ್ ಒಳಗೊಂಡಿದೆ.
ಎಂಜಿಯ ಈ ಹೊಸ ಮೈಕ್ರೋ ಎಸ್‌ಯುವಿ, 2025ರಲ್ಲಿ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು. ದೇಶೀಯವಾಗಿ ದೊರೆಯುವ ಕಚ್ಚಾವಸ್ತುಗಳನ್ನು ಬಳಕೆ ಮಾಡಿಕೊಂಡು ಈ ಎಸ್‌ಯುವಿ ಅಭಿವೃದ್ಧಿಪಡಿಸುತ್ತಿರುವುದರಿಂದ ಮಾಹಿತಿ ಇದೆ.
ಸದ್ಯ ಮುಂದಿನ ತಿಂಗಳು ಭಾರತದ ಮಾರುಕಟ್ಟೆಯಲ್ಲಿ ಅನಾವರಣಗೊಳ್ಳಲಿರುವ ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರು, ಅತ್ಯಂತ ಕಡಿಮೆ ಬೆಲೆಯಲ್ಲಿಯೇ ಖರೀದಿಗೆ ಸಿಗಲಿದೆ. ಇದು ಎರಡು ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿರಲಿದೆ. 17.3 kWh ಬ್ಯಾಟರಿ ಹೊಂದಿರುವ ಕಾರು, 200 Km ರೇಂಜ್, 26.7 kWh ಬ್ಯಾಟರಿ ಪ್ಯಾಕ್ ಪಡೆದಿರುವ ಕಾರು, 350 Km ರೇಂಜ್ ನೀಡಲಿದೆ. 45-50 bhp ಪವರ್ ಮತ್ತು 90-110 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ.
ಇದು ಡ್ಯೂಯಲ್ 10.25-ಇಂಚಿನ ಇನ್ಫೋಟೈನ್‌ಮೆಂಟ್ ಮತ್ತು ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸ್ಕ್ರೀನ್, ಎಲ್‌ಇಡಿ DRLs, ಎಲ್‌ಇಡಿ ಹೈಡ್ ಲೈಟ್ಸ್, ಎಲ್‌ಇಡಿ ಟರ್ನ್ ಸಿಗ್ನಲ್, 13 ಇಂಚಿನ ವೀಲ್ಸ್ ಅನ್ನು ಪಡೆದಿರಲಿದೆ. ಇನ್ನು, ಮುಂಬರಲಿರುವ ಮೈಕ್ರೋ ಎಸ್‌ಯುವಿ ಬಗ್ಗೆ ಶೀಘ್ರದಲ್ಲೇ ಕಂಪನಿಯಿಂದ ಅಧಿಕೃತ ಮಾಹಿತಿ ಹೊರಬರಲಿದೆ.
ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಮೇಲೆ ಸಿಟ್ರಸ್ ಇಸಿ3 ಹಾಗೂ ಟಾಟಾದ ಟಿಯಾಗೊ ಇವಿಗಳಿಗೆ ಭಾರೀ ಪೈಪೋಟಿ ನೀಡಲಿದ್ದು, ಸದ್ಯ
ಈ ಕಾರು, ಪಿಂಕ್, ಯೆಲ್ಲೋ, ಬ್ಲೂ ಹಾಗೂ ಗ್ರೀನ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.
ಇದನ್ನೂ ಓದಿ :Owl Auspicious: ಗೂಬೆ ಕೂಗುವ ಶಬ್ಧ ಕೇಳಿದರೆ ಶಕುನದ ಭಯವೇ? ಇಲ್ಲಿದೆ ಉತ್ತರ!