

Drishyam Film : ಮಲಯಾಳಂನ ʼದೃಶ್ಯಂ 1′ ಮತ್ತು ʼದೃಶ್ಯಂ 2′ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಭಾರತೀಯ ಚಿತ್ರರಂಗದಲ್ಲೇ ಹೊಸ ಹವಾ ಸೃಷ್ಟಿಸಿದಂತಹ ಸಿನಿಮಾಗಳು. ಕನ್ನಡ, ಹಿಂದಿಯಲ್ಲೂ ರಿಮೇಕ್ ಆಗಿರುವ ಈ ಸಿನಿಮಾ ಅಭಿಮಾನಿಗಳ ಮೆಚ್ಚುಗೆ ಪಡೆಯುವುದರ ಜತೆಯಲ್ಲಿ ಕೋಟ್ಯಂತರ ರೂಪಾಯಿ ಗಳಿಸಿದೆ.
ಇದೀಗ ಭಾರತದಾದ್ಯಂತ ಸದ್ದು ಮಾಡಿರುವ “ದೃಶ್ಯಂ’ (Drishyam Film ) ಸಿನಿಮಾ ಹಾಲಿವುಡ್‌ಗೆ ರಿಮೇಕ್ ಮಾಡಲು ಸಕಲ ಸಿದ್ಧತೆಗಳು ನಡೆಯುತ್ತಿದ್ದು, ಇತ್ತೀಚೆಗೆ ಪನೊರಮಾ ಸ್ಟುಡಿಯೋ ಇಂಟರ್‌ನ್ಯಾಷನಲ್ ಲಿ. ಸಂಸ್ಥೆಯು ವಿದೇಶ ಭಾಷೆಯ ರಿಮೇಕ್ ಹಕ್ಕುಗಳನ್ನು ಪಡೆದುಕೊಂಡಿದೆ. ಹಾಗೆಯೇ ಚೀನಾ ಭಾಷೆಗೂ ರೀಮೇಕ್ ಮಾಡುವುದಕ್ಕೆ ಅನುಮತಿ ಸಿಕ್ಕಿದೆ. ಅದಲ್ಲದೆ ಕೋರಿಯಾ ಹಾಗೂ ಜಪಾನಿ ಭಾಷೆಗಳಲ್ಲಿ (language ) ರಿಮೇಕ್ ಮಾಡುವುದಕ್ಕೆ ಅನುಮತಿ ಪಡೆಯುವುದಕ್ಕೂ ಮಾತುಕತೆ ನಡೆಯುತ್ತಿದೆ.
ಈ ಹಿನ್ನೆಲೆಯಲ್ಲಿ ಹಾಲಿವುಡ್‌ನಲ್ಲೂ “ದೃಶ್ಯಂ’ ಹಾಗೂ “ದೃಶ್ಯಂ 2′ ಸಿರೀಸ್ ನಿರ್ಮಾಣ ಆಗಲಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಇನ್ನು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವಾಗಿರುವ ಈ ದೃಶ್ಯಂ ಮಲಯಾಳಂ ಭಾಷೆಯಲ್ಲಿ ಮೂಲ ಚಿತ್ರ ನಿರ್ಮಾಣವಾಗಿದ್ದು, ಸೂಪರ್ ಸ್ಟಾರ್ ಮೋಹನ್ ಲಾಲ್ “ಜಾರ್ಜ್ ಕುಟ್ಟಿ’ ಪಾತ್ರದಲ್ಲಿ ಎಲ್ಲರ ಮನಸೆಳೆದಿದ್ದರು. ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾದ ಸಿನಿಮಾ ಸೂಪರ್ ಹಿಟ್ ಆಗಿತ್ತು. ನಂತರ ಕನ್ನಡದಲ್ಲಿ ರಿಮೇಕ್ ಮಾಡಲಾಗಿದ್ದು, ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಅದರಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಹಿಂದಿಯಲ್ಲಿ ದೃಶ್ಯಂ 2 ಸಿನಿಮಾದಲ್ಲಿ ಅಜಯ್ ದೇವಗನ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.













