KFD Ane Kavadi Notification 2023: ಕರ್ನಾಟಕ ಅರಣ್ಯ ಇಲಾಖೆಯಿಂದ ಆನೆ ಕಾವಡಿ ಹುದ್ದೆಗೆ ಅರ್ಜಿ ಆಹ್ವಾನ

KFD Ane Kavadi Notification 2023: 2022-23ನೇ ಸಾಲಿನಲ್ಲಿ ರಾಜ್ಯದ ವಿವಿಧ ಅರಣ್ಯ ವೃತ್ತಗಳಲ್ಲಿ ಖಾಲಿ ಇರುವ ಆನೆ ಕಾವಾಡಿ ಹುದ್ದೆಗಳನ್ನು( KFD Ane Kavadi Notification 2023) ಭರ್ತಿ ಮಾಡುವ ಸಲುವಾಗಿ ನೇರ ನೇಮಕಾತಿ ಪ್ರಕ್ರಿಯೆಗೆ ಅಧಿಸೂಚನೆ ಹೊರಡಿಸಿ ಅರ್ಜಿ ಆಹ್ವಾನ ಮಾಡಲಾಗಿದೆ.

ಕರ್ನಾಟಕ ಅರಣ್ಯ ಇಲಾಖೆಯು( KFD)ರಾಜ್ಯದ ವಿವಿಧ ವೃತ್ತದಲ್ಲಿ ಅಗತ್ಯ ಆನೆ ಕಾವಾಡಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅಧಿಸೂಚನೆ ಬಿಡುಗಡೆ ಮಾಡಿದ್ದು, ಕೊಡಗು, ಚಾಮರಾಜನಗರ, ಮೈಸೂರು, ಶಿವಮೊಗ್ಗ ಅರಣ್ಯ ವೃತ್ತಗಳಲ್ಲಿ ಈ ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ನೇಮಕಾತಿ ಪ್ರಾಧಿಕಾರ: ಕರ್ನಾಟಕ ಅರಣ್ಯ ಇಲಾಖೆ
ಹುದ್ದೆ ಹೆಸರು : ಆನೆ ಕಾವಾಡಿ
ವೃತ್ತವಾರು ಆನೆ ಕಾವಾಡಿ ಹುದ್ದೆಗಳ ವಿವರ
ಕೊಡಗು: 4
ಚಾಮರಾಜನಗರ : –
ಮೈಸೂರು: 5
ಶಿವಮೊಗ್ಗ: 4

ಪ್ರಮುಖ ದಿನಾಂಕಗಳು
ಅರ್ಹ ಅಭ್ಯರ್ಥಿಗಳು ಈ ಹುದ್ದೆಗೆ(KFD Ane Kavadi Notification 2023) ಅರ್ಜಿ ಸಲ್ಲಿಸಲು 30-03-2023 ಆರಂಭಿಕ ದಿನವಾಗಿದ್ದು, 29-04-2023 ಅರ್ಜಿ ಸಲ್ಲಿಸಲು ಕೊನೆ ದಿನವಾಗಿದೆ. ತಾತ್ಕಾಲಿಕ ಆಯ್ಕೆಪಟ್ಟಿ 29-05-2023 ಬಿಡುಗಡೆಯಾಗಲಿದ್ದು, ಅಂತಿಮ ಆಯ್ಕೆಪಟ್ಟಿ 01-06-2023 ಪ್ರಕಟವಾಗಲಿದೆ.

ಅರ್ಹತಾ ಮಾನದಂಡ
ಕನ್ನಡ ಭಾಷೆ ಮಾತನಾಡಲು ಮತ್ತು ಅರ್ಥೈಸಿಕೊಳ್ಳುವವರಾಗಿರಬೇಕು. ಆನೆ ನಿರ್ವಹಣೆಯಲ್ಲಿ ಅನುಭವ ಹೊಂದಿರುವುದು ಕಡ್ಡಾಯ.
ವಯೋಮಿತಿ (Age Limit)
ಕನಿಷ್ಠ 18 ವರ್ಷ ವಯೋಮಿತಿ ಆಗಿರಬೇಕು. ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ ಆಗಿದ್ದು, ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 38 ವರ್ಷ ಹಾಗೂ ಇತರೆ ಅಭ್ಯರ್ಥಿಗಳಿಗೆ 35 ವರ್ಷ ಗರಿಷ್ಠ ವಯಸ್ಸು ಮೀರಿರಬಾರದು.

ವೇತನ ಶ್ರೇಣಿ: Rs.18,600-32,600
ಅರ್ಜಿ ನಮೂನೆಯನ್ನು ಪಡೆದುಕೊಂಡು ಬೆರಳಚ್ಚು /ಕಂಪ್ಯೂಟರ್ ಪ್ರಿಂಟ್ ಮಾಡಿಸಿ, ಭರ್ತಿ ಮಾಡಿದ ಅರ್ಜಿಯನ್ನು ಕೆಳಗೆ ನೀಡಲಾದ ವಿಳಾಸಕ್ಕೆ ಕಳುಹಿಸಬೇಕು. ಅರ್ಜಿ ಸಲ್ಲಿಸಬೇಕಾದ ವಿಳಾಸ ಹೀಗಿದೆ:
ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ, ಕೊಡಗು/ ಚಾಮರಾಜನಗರ/ ಮೈಸೂರು/ ಶಿವಮೊಗ್ಗ ಅರಣ್ಯ ವೃತ್ತ (ಆಯಾ ಅರಣ್ಯ ವೃತ್ತಕ್ಕೆ ಅರ್ಜಿ) ಕ್ಕೆ ಅರ್ಜಿ ಸಲ್ಲಿಸಬೇಕು. ಅರಣ್ಯ ವೃತ್ತಾವಾರು ಆನೆ ಕಾವಾಡಿ ಹುದ್ದೆಗಳ ಅಧಿಸೂಚನೆಗೆ ವೆಬ್‌ಸೈಟ್‌ ವಿಳಾಸ https://kfdrecruitment.in/ ಕ್ಕೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು.

ನೇಮಕಾತಿ ವಿಧಾನ( Selection Procedures)
ಸಂದರ್ಶನದ (Interview) ಮೂಲಕ ಅರ್ಹ ಅಭ್ಯರ್ಥಿಗಳನ್ನು (Candidates) ಆಯ್ಕೆ ಮಾಡಲಾಗುತ್ತದೆ.ಅಭ್ಯರ್ಥಿಗಳ ಸಂದರ್ಶನವು ಮೇ 16, 17, 2023 ರಂದು ನಡೆಯಲಿದ್ದು, ನೇಮಕಾತಿ ಆದೇಶವನ್ನು 01-07-2023 ರಂದು ನೀಡಲಾಗುತ್ತದೆ.

Leave A Reply

Your email address will not be published.