Ramayan Yatra: IRCTCಯಿಂದ ಟೂರ್ ಪ್ಯಾಕೇಜ್ ಬಿಡುಗಡೆ ;18 ದಿನಗಳ ರಾಮಾಯಣ ಯಾತ್ರಾ ! ಸಂಪೂರ್ಣ ಮಾಹಿತಿ ಇಲ್ಲಿದೆ
Ramayan Yatra: ಭಾರತೀಯ ರೈಲ್ವೆಯು (Indian railways) ಈಗಾಗಲೇ ಹಲವಾರು ಟೂರ್ ಪ್ಯಾಕೇಜ್ (tour package) ಬಿಡುಗಡೆ ಮಾಡಿದೆ. ಜನರನ್ನು ಪ್ರೇಕ್ಷಣೀಯ ಸ್ಥಳಗಳಿಗೆ ಕರೆದುಕೊಂಡು ಹೋಗಿ ಮರಳಿ ಸುರಕ್ಷಿತವಾಗಿ ಊರಿಗೆ ಬಿಡುವಂತಹ ಕಾರ್ಯ ಮಾಡುತ್ತಿದೆ. ಇದೀಗ ಭಾರತೀಯ ರೈಲ್ವೆಯು ಇನ್ನೊಂದು ಟೂರ್ ಪ್ಯಾಕೇಜ್ ಬಿಡುಗಡೆ ಮಾಡಿದ್ದು, ರಾಮಾಯಾಣದ ಕಾಲದಲ್ಲಿನ ಸ್ಥಳಗಳಿಗೆ ಭೇಟಿ (Ramayan Yatra) ನೀಡುವ ಅದ್ಭುತ ಅವಕಾಶ ಕಲ್ಪಿಸಿದೆ.
ರೈಲ್ವೆಯು ಏಪ್ರಿಲ್ 7ರಿಂದ ರಾಮಾಯಾಣ ಯಾತ್ರಾ (ರಾಮಾಯಣ ಯಾತ್ರೆ) ಆರಂಭ ಮಾಡಲಿದ್ದು, ಈ ಯಾತ್ರೆ ನವದೆಹಲಿಯಿಂದ ಆರಂಭವಾಗಲಿದೆ. ಭಾರತ್ ಗೌರವ್ ಡಿಲಕ್ಸ್ ಎಸಿ ಟೂರಿಸ್ಟ್ ರೈಲಿನಲ್ಲಿ (Bharat gaurav deluxe luxury tourist train) ಈ ಪ್ರವಾಸ ಇರಲಿದ್ದು, ಈವೆರೆಗೆ ಒಟ್ಟು 26 ಭಾರತ್ ಗೌರವ್ ರೈಲುಗಳನ್ನು ಆರಂಭಿಸಲಾಗಿದೆ. ಹಾಗೆಯೇ ಈ ಪ್ರವಾಸ 18 ದಿನದ್ದಾಗಿದೆ ಎಂದು ಭಾರತೀಯ ರೈಲ್ವೆ ಮಾಹಿತಿ ನೀಡಿದೆ.
ಯಾತ್ರೆಯ ಬಗ್ಗೆ ಹೆಚ್ಚಿನ ಮಾಹಿತಿ :
• ಪ್ರವಾಸಿಗರು ದೆಹಲಿಯ (Delhi) ಸಫ್ದರ್ಜಂಗ್, ಗಾಜಿಯಾಬಾದ್, ಆಲಿಗಢ, ತುಂಡ್ಲಾ, ಇತಾವ್, ಕಾನ್ಪುರ, ಲಕ್ನೋ ರೈಲು ನಿಲ್ದಾಣದಲ್ಲಿ ರೈಲು ಏರಲು ಅವಕಾಶವಿರುತ್ತದೆ.
• ವಿರಾಂಗಣ ಲಕ್ಷ್ಮೀ ಬಾಯಿ, ಗ್ವಾಲಿಯರ್, ಆಗ್ರಾ, ಮಥುರಾದಲ್ಲಿ ರೈಲು ಇಳಿಯುವ ಅವಕಾಶವಿರುತ್ತದೆ.
• ರೈಲಿನಲ್ಲಿ ಸಿಸಿಟಿವಿ ಕ್ಯಾಮೆರಾ, ಪ್ರತಿ ಕೋಚ್ಗೂ ಓರ್ವ ಸೆಕ್ಯೂರಿಟಿ ಗಾರ್ಡ್ಗಳು ಇರುತ್ತಾರೆ.
• ಉತ್ತಮ ರೆಸ್ಟೋರೆಂಟ್ಗಳು, ಆಧುನಿಕ ಅಡುಗೆ ಕೋಣೆ, ಸ್ನಾನದ ವ್ಯವಸ್ಥೆ ಇರುವ ಕೋಚ್ಗಳು, ಸೆನ್ಸರ್ ಆಧಾರಿತ ವಾಷ್ರೂಮ್ ವ್ಯವಸ್ಥೆ, ಕಾಲಿಗೆ ಮಸಾಬ್ ನೀಡುವ ವ್ಯವಸ್ಥೆ ಕೂಡ ಇರುತ್ತದೆ.
ಯಾತ್ರೆಯಲ್ಲಿ ಯಾವೆಲ್ಲಾ ಪ್ರದೇಶಗಳಿಗೆ ಭೇಟಿ ?
ಅಯೋಧ್ಯೆ (Ayodhya): ರಾಮ ಜನ್ಮಭೂಮಿ ದೇವಾಲಯ, ಹನುಮಾನ್ ಗರ್ಹಿ (ಮಂದಿರ), ಸರಾಯುಘಾಟ್.
ನಂಧಿಗ್ರಾಮ: ಭರತ-ಹನುಮಾನ್ ದೇವಾಲಯ, ಭರತ್ ಕುಂಡ್
ಜನಕಪುರ: ರಾಮ ಜಾನಕಿ ಮಂದಿರ
ಸೀತಾಮರ್ಹಿ: ಸೀತಾಮರ್ಹಿಯಲ್ಲಿನ ಜಾನಕಿ ಮಂದಿರ, ಪನೌರಾ ಧಾಮ
ಬಕ್ಸರ್: ರಾಮ್ ರೇಖ ಘಾಟ್, ರಾಮೇಶ್ವರ ನಾಥ ದೇವಾಲಯ
ವಾರಾಣಾಸಿ: ತುಳಸಿ ಮಾನಸ ದೇವಾಲಯ, ಸಂಕಟ್ ಮೋಚನ್ ದೇವಾಲಯ, ವಿಶ್ವನಾಥ ದೇವಾಲಯ, ಗಂಗಾ ಆರತಿ
ಸೀತಾ ಸಮಹಿತಿ ಸ್ಥಳ, ಸೀತಾಮರ್ಹಿ: ಸೀತಾ ಮಾತಾ ದೇವಾಲಯ
ಪ್ರಯಾಗ್ರಾಜ್: ಭಾರಧ್ವಾಜ ಆಶ್ರಮ, ಗಂಗಾ-ಯಮುನಾ ಸಂಗಮ, ಹನುಮಾನ್ ದೇವಾಲಯ
ಶೃಂಗವೀರಪುರ: ಶೃಂಗ ರಿಶಿ ಸಮಾಧಿ, ಶಾಂತ ದೇವಿ ದೇವಾಲಯ, ರಾಮ ಚೌರಾ
ಚಿತ್ರಕೂಟ: ಗುಪ್ತಾ ಗೋಧಾವರಿ, ರಾಮಘಾಟ್, ಸತಿ ಅನುಸೂಯ ದೇವಾಲಯ
ನಾಸಿಕ್: ತ್ರಯಂಬೇಕೇಸ್ವರ ದೇವಾಲಯ, ಪಂಚಾವತಿ, ಸೀತಾಗುಹ, ಕಲಾರಾಮ ದೇವಾಲಯ,
ಹಂಪಿ: ಅಂಜನಾದ್ರಿ ಬೆಟ್ಟ, ವಿರೂಪಾಕ್ಷ ದೇವಾಲಯ, ವಿಠಲ ದೇವಾಲಯ
ರಾಮೇಶ್ವರಂ: ರಾಮನಾಥಸ್ವಾಮಿ ದೇವಾಲಯ, ಧನುಷ್ಕೋಡಿ
ಭದ್ರಚಲಂ: ಶ್ರೀ ಸೀತಾರಾಮ ಸ್ವಾಮಿ ದೇವಾಲಯ, ಅಂಜನಿ ಸ್ವಾಮಿ ದೇವಾಯಲ, ನಂತರ ನಾಗ್ಪುರಕ್ಕೆ ತೆರಳಿ ಅಲ್ಲಿಂದ ದೆಹಲಿಗೆ ವಾಪಾಸ್ ಬರಲಿದೆ.
ಯಾತ್ರೆಯ ವೆಚ್ಚ:
• ಐಆರ್ಸಿಟಿಸಿ (IRCTC) ಟೂರಿಸಂ ವೆಬ್ಸೈಟ್ನ ಮಾಹಿತಿ ಪ್ರಕಾರ, 2AC ಕೋಚ್ಗೆ ಪ್ರತಿ ವ್ಯಕ್ತಿಗೆ ಪ್ರಯಾಣ ಶುಲ್ಕ ಪ್ಯಾಕೇಜ್ 1,14,065 ರೂಪಾಯಿ ಆಗಿದೆ.
• 1 ಎಸಿ ಕ್ಲ್ಯಾಸ್ ಕ್ಯಾಬಿನ್ಗೆ 1,46,545 ರೂಪಾಯಿ ಆಗಿರಲಿದೆ.
• 1AC ಕ್ಯೂಪ್ಗೆ 1,68,950 ರೂಪಾಯಿ.
• ಈ ಹಣದಲ್ಲಿ ಎಸಿ ಹೊಟೇಲ್, ಎಲ್ಲ ಸಸ್ಯಾಹಾರಿ ಆಹಾರ, ಎಸಿ ವಾಹನದಲ್ಲಿ ಪ್ರಯಾಣ ಮತ್ತು ಪ್ರದೇಶ ವೀಕ್ಷಣೆ, ಪ್ರಯಾಣ ವಿಮೆಯು ಕೂಬ ಸೇರ್ಪಡೆಯಾಗಿರುತ್ತದೆ.
ಇದನ್ನೂ ಓದಿ: Car Tips : ಈ ವಿಧಾನಗಳಿಂದ ನೀವು ನಿಮ್ಮ ಕಾರಿನ ಮೈಲೇಜ್ ಹೆಚ್ಚಿಸಿ ! ಪೆಟ್ರೋಲ್, ಡೀಸೆಲ್ ದುಡ್ಡು ಉಳಿತಾಯ ಖಂಡಿತ