Best Short Term Courses : ಗಮನಿಸಿ ವಿದ್ಯಾರ್ಥಿಗಳೇ, ಈ ಕೋರ್ಸ್‌ ಮಾಡಿದರೆ ನಿಮಗೆ ತಿಂಗಳಿಗೆ ಲಕ್ಷ ಸಂಬಳ ಗ್ಯಾರಂಟಿ!

Best Short Term Courses: ಕೆಲವರು ವಿದ್ಯಾಭ್ಯಾಸದ ಬಳಿಕ ಮುಂದೆ ಏನಾದರೂ ಕೋರ್ಸ್ ಮಾಡಬೇಕು ಎಂಬ ಯೋಚನೆಯಲ್ಲಿರುತ್ತಾರೆ. ಆದರೆ ಅವರಿಗೆ ಯಾವ ಕೋರ್ಸ್ ಮಾಡಬೇಕು ಎಂಬುದು ತಿಳಿದಿರುವುದಿಲ್ಲ. ಅಂತಹವರಿಗೆ ಉತ್ತಮ ಸಲಹೆ ಇಲ್ಲಿದೆ. ನೀವು ಈ ಕೋರ್ಸ್ (Best Short Term Courses) ಮಾಡಿದ್ರೆ, ಉದ್ಯೋಗದ ಜೊತೆಗೆ ಲಕ್ಷ ಲಕ್ಷ ಸಂಬಳ ಸಿಗೋದು ಗ್ಯಾರಂಟಿ!!. ಹಾಗಿದ್ದರೆ ಯಾವ ಕೋರ್ಸ್? ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ.

ವೆಬ್ ಡೆವಲಪರ್ (web developer): ಸದ್ಯ ವೆಬ್ ಡೆವಲಪರ್ ಗಳಿಗೆ ಹೆಚ್ಚು ಬೇಡಿಕೆ ಇದೆ. ವೆಬ್‌ಸೈಟ್‌ನ ಕೋಡಿಂಗ್ (coding), ಫ್ರಂಟ್ ಅಥವಾ ಕ್ಲೈಂಟ್ ಸೈಡ್ ಮತ್ತು ಬ್ಯಾಕೆಂಡ್ ಮತ್ತು ಡೇಟಾಬೇಸ್ ಮೂಲಕ ವೆಬ್‌ಸೈಟ್ ರಚಿಸುವಲ್ಲಿ ಕೆಲಸ ಮಾಡುವವರನ್ನು ಫುಲ್ ಸ್ಟಾಕ್ ಡೆವಲಪರ್‌ಗಳು (full stack developer) ಎನ್ನಲಾಗುತ್ತದೆ. ಕಂಪನಿಗಳಲ್ಲಿ ಹೆಚ್ಚು ಇಂತಹ ಡೆವಲಪರ್ ಗಳಿಗೆ ಬೇಗನೆ ಉದ್ಯೋಗ ಸಿಗುತ್ತದೆ. ಇವರಿಗೆ ಆರಂಭಿಕ ವೇತನವು ವಾರ್ಷಿಕ 8 ಲಕ್ಷ ರೂ. ಇರುತ್ತದೆ. ಈ ಕೋರ್ಸ್ ಮಾಡಿದ್ರೆ ಉದ್ಯೋಗ ಪಕ್ಕಾ!!.

ಬ್ಲಾಕ್‌ಚೈನ್ ಎಂಜಿನಿಯರ್ (blockchain engineer): ಬ್ಲಾಕ್‌ಚೈನ್ ಎಂಜಿನಿಯರ್ ಇಂದಿನ ಮಾರುಕಟ್ಟೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ಉದ್ಯೋಗ ಸ್ಥಾನಗಳಲ್ಲಿ ಒಂದಾಗಿದೆ. ಬ್ಲಾಕ್‌ಚೈನ್ ಎಂಜಿನಿಯರ್‌ಗಳ ಬೇಡಿಕೆಯು ಪ್ರತಿವರ್ಷ ಹೆಚ್ಚುತ್ತಿದೆ. ಬ್ಲಾಕ್‌ಚೈನ್ ಡೆವಲಪರ್ / ಬ್ಲಾಕ್‌ಚೈನ್ ಎಂಜಿನಿಯರ್ ಆಗಲು, ನೀವು ಕ್ರಿಪ್ಟೋಗ್ರಫಿ (cryptography), ಡೇಟಾ ರಚನೆಗಳು, ಅಲ್ಗಾರಿದಮ್‌ಗಳು, ಕಂಪ್ಯೂಟರ್ ನೆಟ್‌ವರ್ಕಿಂಗ್ (computer networking) ಮುಂತಾದ ಕೌಶಲ್ಯಗಳನ್ನು ಹೊಂದಿರಬೇಕು. ನೀವು ಈ ಕೋರ್ಸ್ ಮಾಡಿ, ಉದ್ಯೋಗ ಪಡೆದರೆ ನಿಮಗೆ 8 ರಿಂದ 10 ಲಕ್ಷ ರೂ. ಸಂಬಳ ದೊರೆಯುತ್ತದೆ.

ಡೇಟಾ ಸೈಂಟಿಸ್ಟ್ (data scientist): ಡೇಟಾ ವಿಜ್ಞಾನಿ ಪಾತ್ರವು ಗಣಿತಜ್ಞ, ವಿಜ್ಞಾನಿ, ಸಂಖ್ಯಾಶಾಸ್ತ್ರಜ್ಞ ಮತ್ತು ಕಂಪ್ಯೂಟರ್ ಪ್ರೋಗ್ರಾಮರ್ (computer programmer) ಸೇರಿದಂತೆ ಹಲವಾರು ಸಾಂಪ್ರದಾಯಿಕ ಮತ್ತು ತಾಂತ್ರಿಕ ಉದ್ಯೋಗಗಳ ಅಂಶಗಳನ್ನು ಸಂಯೋಜಿಸುತ್ತದೆ. ಇದು ವೈಜ್ಞಾನಿಕ ತತ್ವಗಳ ಅನ್ವಯದೊಂದಿಗೆ ಯಂತ್ರ ಕಲಿಕೆ ಮತ್ತು ಭವಿಷ್ಯಸೂಚಕ ಮಾಡೆಲಿಂಗ್‌ನಂತಹ ಸುಧಾರಿತ ವಿಶ್ಲೇಷಣಾ ತಂತ್ರಗಳ ಬಳಕೆಯನ್ನು ಒಳಗೊಂಡಿರುತ್ತದೆ. ಡೇಟಾ ವಿಜ್ಞಾನಿಗಳ ಆರಂಭಿಕ ವೇತನವು ವಾರ್ಷಿಕವಾಗಿ 7 ರಿಂದ 10 ಲಕ್ಷ ರೂ. ಇರಲಿದೆ. ಅನುಭವದ ನಂತರ ತಿಂಗಳಿಗೆ 2 ರಿಂದ 3 ಲಕ್ಷ ರೂಪಾಯಿ ಆಗಲಿದೆ ಎಂದು ಹೇಳಲಾಗಿದೆ.

DevOps ಇಂಜಿನಿಯರ್ : ಮುಂದೆ ಏನಾದರೂ ಕೋರ್ಸ್ ಮಾಡಬೇಕು ಎಂಬವರಿಗೆ ಇದೂ ಉತ್ತಮ ಆಯ್ಕೆಯೇ ಆಗಿದೆ.
ಕಂಪನಿಯ IT ಮೂಲಸೌಕರ್ಯವನ್ನು ಸರಿಯಾಗಿ ನಡೆಸಲು DevOps ಎಂಜಿನಿಯರ್‌ಗಳು ಜವಾಬ್ದಾರರಾಗಿರುತ್ತಾರೆ. ಇವರಿಗೂ ಇತ್ತೀಚೆಗೆ ಹೆಚ್ಚು ಬೇಡಿಕೆ ಇದೆ. ಸದ್ಯ ಅವರ ವಾರ್ಷಿಕ ಸಂಬಳ 7 ಲಕ್ಷ ರೂ. ಇರುತ್ತದೆ.

ಡಿಜಿಟಲ್ ಮಾರ್ಕೆಟಿಂಗ್ ಸ್ಪೆಷಲಿಸ್ಟ್ (digital marketing specialist): ವೆಬ್ ಡೆವಲಪರ್ ನ ಹಾಗೆ ಮಾರ್ಕೆಟಿಂಗ್ ಫೀಲ್ಡ್ ಗೂ ಹೆಚ್ಚು ಪ್ರಾಮುಖ್ಯತೆ ಇದೆ. ಆದರೆ ಡಿಜಿಟಲ್ ಮಾರ್ಕೆಟಿಂಗ್ ಬಗ್ಗೆ ವರದಿಯಾಗಿದ್ದು, ಮುಂಬರುವ ವರ್ಷಗಳಲ್ಲಿ ಡಿಜಿಟಲ್ ಮಾರ್ಕೆಟಿಂಗ್‌ನಲ್ಲಿ ಲಕ್ಷಗಟ್ಟಲೆ ಹುದ್ದೆಗಳು ಖಾಲಿಯಾಗಲಿವೆ ಎನ್ನಲಾಗಿದೆ. ಹಾಗಾಗಿ ಇದು ಉತ್ತಮ ಆಯ್ಕೆಯಾಗಿದೆ. ಬೇಗನೆ ಉದ್ಯೋಗವೂ ಸಿಗುತ್ತದೆ. ಹಾಗೆಯೇ ವಾರ್ಷಿಕ ವೇತನ 4 ರಿಂದ 5 ಲಕ್ಷ ರೂ ಇರಲಿದೆ.

ಈ ವಸ್ತುಗಳು ಕೈಯಿಂದ ಕೆಳಗೆ ಬಿದ್ದರೆ ಅಶುಭ ಸಂಕೇತ ; ಧನ ಹಾನಿ ಖಂಡಿತ!!

Leave A Reply

Your email address will not be published.