Tirumala: ತಿರುಪತಿ ಭಕ್ತಾದಿಗಳೇ ಗಮನಿಸಿ, ಈ ಸೇವೆಗಳು ಏಪ್ರಿಲ್ 3ರಿಂದ ಇರಲ್ಲ

Tirumala: ರೈಲಿನಲ್ಲಿ ಪ್ರಯಾಣ ಬೆಳೆಸುವ ಮುನ್ನ ಈ ಮಾಹಿತಿ ತಿಳಿದುಕೊಳ್ಳುವುದು ಉತ್ತಮ. ಅದರಲ್ಲಿಯೂ ತಿರುಪತಿಗೆ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಬಹು ಮುಖ್ಯ ಮಾಹಿತಿ ಇಲ್ಲಿ ನೀಡಲಾಗಿದೆ.

ತಿರುಮಲ(Tirumala)ತಿರುಪತಿ ದೇವಸ್ಥಾನಂ (ಟಿಟಿಡಿ) ತಿರುಮಲದಲ್ಲಿ ವಾರ್ಷಿಕ ವಸಂತೋತ್ಸವವು ಏಪ್ರಿಲ್ 3 ರಿಂದ 5 ರ ನಡುವೆ ನಡೆಯಲಿದ್ದು, ಈ ಮೂರು ದಿನಗಳ ಹಬ್ಬ ಚೈತ್ರ ಶುದ್ಧ ಹುಣ್ಣಿಮೆಯಂದು ಅಂತ್ಯಗೊಳ್ಳಲಿದೆ. ವೆಂಕಟೇಶ್ವರನ ಸನ್ನಿಧಾನ ತಿರುಮಲದಲ್ಲಿ ಪ್ರತಿ ವರ್ಷ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆದುಕೊಂಡು ವಿಶೇಷ ಕಾರ್ಯಕ್ರಮಗಳ ಸಂದರ್ಭದಲ್ಲಿ ಪ್ರತಿದಿನ ನಡೆಯುವ ಕೆಲವು ಸೇವೆಗಳನ್ನು ರದ್ದುಗೊಳಿಸಲಾಗುತ್ತದೆ.

ಯುಗಾದಿ ಹಬ್ಬದ( Ugadhi Festival) ಸಮಯದಲ್ಲಿ ವೆಂಕಟೇಶ್ವರ ಸನ್ನಿಧಾನದಲ್ಲಿ ಮಾರ್ಚ್ 21 ಮತ್ತು 22 ರಂದು ವಿಐಪಿ (VIP)ಬ್ರೇಕ್ ದರ್ಶನವನ್ನು ರದ್ದುಗೊಳಿಸಲಿರುವ ಕುರಿತು ಮಾಹಿತಿ ನೀಡಿದ್ದಾರೆ. ಪ್ರತಿ ವರ್ಷ ಯುಗಾದಿ ದಿನದಂದು ತಿರುಮಲದಲ್ಲಿ ಯುಗಾದಿ ಆಸ್ಥಾನ ಆಚರಣೆಗಳು ನಡೆಯಲಿದ್ದು, ಈ ಬಾರಿ ಕೂಡ ಮಾರ್ಚ್ 22ರಂದು ಈ ಆಚರಣೆ ನಡೆಯಲಿದ್ದು, ಈ ನಿಟ್ಟಿನಲ್ಲಿ ತಿಮ್ಮಪ್ಪನ ದರ್ಶನದಲ್ಲಿ ಬದಲಾವಣೆ ತರಲಾಗಿದೆ. ಈ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿರುವ ಹಿನ್ನೆಲೆ ಏಪ್ರಿಲ್ 3 ರಿಂದ 5 ರ ನಡುವೆ ಕಲ್ಯಾಣೋತ್ಸವ, ಬ್ರಹ್ಮೋತ್ಸವ ಮತ್ತು ಸಹಸ್ರ ದೀಪಾಲಂಕಾರ ಸೇವೆಗಳನ್ನು ಟಿಟಿಡಿ ರದ್ದು ಮಾಡಲಾಗಿದೆ.

ತಿರುಮಲ ದೇವಸ್ಥಾನದಲ್ಲಿ ವಾರ್ಷಿಕ ವಸಂತೋತ್ಸವವು ಏಪ್ರಿಲ್ 3 ರಿಂದ ನಡೆಯಲಿದ್ದು, ಈ ಮೂರು ದಿನಗಳಲ್ಲಿ ಪ್ರತಿ ದಿನ ಮಧ್ಯಾಹ್ನ 2 ರಿಂದ 4 ಗಂಟೆಯವರೆಗೆ ವಸಂತ ಮಂಟಪದಲ್ಲಿ ಸ್ನಪನ ತಿರುಮಂಜನ ಎಂಬ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದೆ. ಈ ಧಾರ್ಮಿಕ ಕಾರ್ಯಕ್ರಮ ಎರಡನೇ ದಿನ ಬೆಳಗ್ಗೆ 8ರಿಂದ 10ರವರೆಗೆ ಸ್ವರ್ಣ ರಥೋತ್ಸವ ಜರುಗುತ್ತದೆ. ಈ ಹಿನ್ನೆಲೆಯಲ್ಲಿ ಹಲವು ಸೇವೆಗಳನ್ನು ರದ್ದು ಮಾಡಲಾಗಿದೆ.

ಇದನ್ನೂ ಓದಿ :ಚಿನ್ನ ಖರೀದಿ ಮಾಡ್ತೀರಾ?ಹಾಗಾದರೆ ಈ ಹೊಸ ನಿಯಮಗಳು ನಿಮ್ಗೆ ಗೊತ್ತಿರಬೇಕು!

Leave A Reply

Your email address will not be published.