H3N2 virus update :H3N2 ವೈರಸ್ ಭಯಕ್ಕೆ ಈ ರಾಜ್ಯದ ಶಾಲೆಗಳು ಬಂದ್!
H3N2 virus update :ಕೊರೊನಾ ಬಳಿಕ H3N2 ವೈರಸ್ ನಿಧಾನವಾಗಿ ದೇಶದ ಜನರಲ್ಲಿ ಭಯ ಮೂಡಿಸುತ್ತಿದೆ. ವರದಿಗಳ ಪ್ರಕಾರ ಪುದುಚರಿಯಲ್ಲಿ ಬರೋಬ್ಬರಿ 79 H3N2 ಪ್ರಕರಣಗಳು ಪತ್ತೆಯಾಗಿವೆ (H3N2 virus update).ಮುಂಜಾಗೃತ ಕ್ರಮವಾಗಿ ಪುದಚರಿ ಸರ್ಕಾರ ಮುಖ್ಯ ನಿರ್ಧಾರ ತೆಗೆದುಕೊಂಡಿದೆ.
ಪುದುಚರಿಗೆ H3N2 ಭೀತಿಯು ಭಯಂಕರವಾಗಿದ್ದು, 10 ದಿನಗಳವರೆಗೆ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಮಾರ್ಚ್ 16 ರಿಂದ 26ರವರೆಗೆ ಶಾಲೆಗಳು ಬಂದ್ ಇರಲಿವೆ.
1ರಿಂದ 8ನೇ ತರಗತಿವರೆಗಿನ ಎಲ್ಲಾ ಶಾಲೆಗಳನ್ನು ಬಂದ್ ಮಾಡಲಾಗಿದೆ. ಪುದುಚೇರಿಯ ಶಿಕ್ಷಣ ಸಚಿವ ನಮಶಿವಾಯಂ ಈ ಕುರಿತಾಗಿ ಎಲ್ಲಾ ಶಾಲೆ ಹಾಗೂ ಪೋಷಕರಿಗೆ ಮಾಹಿತಿ ನೀಡಿದ್ದಾರೆ.
ಅಮೆರಿಕ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳ ಸಂಸ್ಥೆ (ಸಿಡಿಸಿ) ಪ್ರಕಾರ, ಎಚ್ 3 ಎನ್ 2 ಸಾಮಾನ್ಯವಾಗಿ ಹಂದಿಗಳಲ್ಲಿ ಹರಡುತ್ತದೆ ಮತ್ತು ಮನುಷ್ಯರಿಗೆ ಸೋಂಕು ತಗುಲುತ್ತದೆ. ಕೆಮ್ಮು, ಜ್ವರ, ನೋವು, ವಾಕರಿಕೆ, ವಾಂತಿ ಅಥವಾ ಅತಿಸಾರ ರೋಗಲಕ್ಷಣಗಳಿವೆ. ಇದು ಋತುಮಾನಕ್ಕೆ ಅನುಗುಣವಾಗಿ ಕಾಣಿಸಿಕೊಳ್ಳುವ ಇನ್ಫ್ಲುಯೆಂಜಾ ಸೋಂಕು ಎಂದಿದೆ.
ಜನರು ಭಯಭೀತರಾಗಬೇಡಿ ಎಂದುಪುದುಚೇರಿಯ ವೈದ್ಯಕೀಯ ಸೇವೆಗಳ ನಿರ್ದೇಶಕ ಜಿ ಶ್ರೀರಾಮುಲು ಸಲಹೆ ನೀಡಿದ್ದಾರೆ. ಹೆಚ್ಚುತ್ತಿರುವ ಪ್ರಕರಣಗಳನ್ನು ನಿಯಂತ್ರಿಸಲು ಆರೋಗ್ಯ ಇಲಾಖೆ ಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಿದೆ. ವೈರಸ್ ಹರಡದಂತೆ ನಾವು ಎಲ್ಲಾ ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಂಡಿದ್ದೇವೆ’ ಕೋವಿಡ್ ಸಾಂಕ್ರಾಮಿಕ ರೋಗಕ್ಕೆ ಶಿಫಾರಸು ಮಾಡಲಾದ ಮಾರ್ಗಸೂಚಿಗಳನ್ನು ಅನುಸರಿಲು ಸೂಚನೆ ನೀಡಲಾಗಿದ್ದು, ಅದರಲ್ಲಿ ಕೈ ತೊಳೆಯುವುದು, ಮಾಸ್ಕ್ ಧರಿಸುವುದು ಮತ್ತು ಕಿಕ್ಕಿರಿದ ಸ್ಥಳಗಳನ್ನು ತಪ್ಪಿಸುವುದು ಸೇರಿದಂತೆ ಹಲವು ನಿಯಮಗಳನ್ನು ಅನುಸರಿಬೇಕಾಗಿದೆ ಎಂದಿದಾರೆ.