Home Breaking Entertainment News Kannada Swara Bhasker: ಮತ್ತೊಂದು ಮದುವೆಗೆ ಮುಂದಾದ್ರಾ ಸ್ವರಾ ಭಾಸ್ಕರ್? ಹೊಸ ಮದುವೆ ಶಾಸ್ತ್ರದ ಫೋಟೋ,ವಿಡಿಯೋವೀಗ ...

Swara Bhasker: ಮತ್ತೊಂದು ಮದುವೆಗೆ ಮುಂದಾದ್ರಾ ಸ್ವರಾ ಭಾಸ್ಕರ್? ಹೊಸ ಮದುವೆ ಶಾಸ್ತ್ರದ ಫೋಟೋ,ವಿಡಿಯೋವೀಗ ವೈರಲ್!

Hindu neighbor gifts plot of land

Hindu neighbour gifts land to Muslim journalist

Swara Bhasker :ಸದಾ ತಮ್ಮ ವಿವಾದಿತ ಹೇಳಿಕೆಗಳ ಮೂಲಕವೇ ಹೆಚ್ಚು ಸದ್ದು ಮಾಡುವ ಬಾಲಿವುಡ್ ನಟಿ ಸ್ವರಾ ಭಾಸ್ಕರ್ (Swara Bhasker) ಕಳೆದ ತಿಂಗಳು ತಾವು ಅಣ್ಣ ಎಂದು ಕರೆದಿದ್ದ ರಾಜಕಾರಣಿ ಫಹಾದ್ ಅಹ್ಮದ್ ಅವರನ್ನು ಸದ್ಧಿಲ್ಲದಂತೆ ಮದುವೆಯಾಗಿದ್ದರು. ಈ ವೇಳೆ ಸ್ವರ ವಿರುದ್ಧ ವಿರೋಧಗಳು ವ್ಯಕಾತವಾಗಿದ್ವು. ಆದರೆ ಇದಾವುದರ ಕುರಿತು ತಲೆಕೆಡಿಸಿಕೊಳ್ಳದ ಸ್ವರಾ ಭಾಸ್ಕರ್ ಮತ್ತೊಂದು ಮದುವೆ ಆಗುವ ಸಂಭ್ರಮದಲ್ಲಿದ್ದಾರೆ.

ಹೌದು, ಕುಟುಂಬದವರ ಆಸೆಯಂತೆ ಸ್ವಾರಾ ಅವರು ಫಹಾದ್ ಜೊತೆ ಹಿಂದೂ ಸಂಪ್ರದಾಯದಂತೆ ಮತ್ತೆ ಮದುವೆಯಾಗುತ್ತಿದ್ದಾರೆ. ಸದ್ಯ ಇವರ ಈ ಎರಡನೇ ಸಲ ಮದುವೆಯ ಸಂಗೀತ, ಹಳದಿ ಶಾಸ್ತ್ರದ ಸಂಭ್ರಮದ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಸಮಾಜವಾದಿ ಪಕ್ಷದ ನಾಯಕ ಫಹಾದ್ ಅಹ್ಮದ್ (Fahad Ahamad) ಜೊತೆ ರಿಜಿಸ್ಟರ್ ಮದುವೆಯಾಗುವ (Wedding) ಮೂಲಕ ನಟಿ ಸ್ವರಾ ಭಾಸ್ಕರ್ ಅಚ್ಚರಿ ಮೂಡಿಸಿದ್ದರು. ಈ ಸರಳ ಮದುವೆ ಸ್ವರಾ ಅವರ ತಂದೆ- ತಾಯಿ ಕುಟುಂಬಸ್ಥರಿಗೆ ಇಷ್ಟವಾಗಿಲ್ಲ. ಇದೀಗ ಅವರ ಆಸೆಯಂತೆಯೇ ನಟಿ ಅದ್ದೂರಿಯಾಗಿ ಮದುವೆಯಾಗುತ್ತಿದ್ದಾರೆ.

ಖಾಸಗಿ ರೆಸಾರ್ಟ್‌ವೊಂದರಲ್ಲಿ ಸ್ವರಾ ಮತ್ತು ಫಹಾದ್ ಮಾರ್ಚ್ 16ರಂದು ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಅವರ ದೆಹಲಿ ಮನೆಯಲ್ಲಿ ಈಗಾಗಲೇ ಸಂಗೀತ ಮತ್ತು ಹಳದಿ ಶಾಸ್ತ್ರವು ಸಡಗರದಿಂದ ನಡೆದಿದ್ದು, ಈ ಕುರಿತ ಫೋಟೋ ಮತ್ತು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

ಅಂದಹಾಗೆ ಕಳೆದ ತಿಂಗಳು ಮದುವೆಗೂ ಮುನ್ನ ಸ್ವರಾ, ನಿಗೂಢ ವ್ಯಕ್ತಿ ಜೊತೆ ಫೋಟೋ ಶೇರ್ ಮಾಡಿ ಅಚ್ಚರಿ ಮೂಡಿಸಿದ್ದರು. ಆ ಫೋಟೋದಲ್ಲಿ ಸ್ವರಾ ಅವರನ್ನು ತಬ್ಬಿಕೊಂಡಿದ್ದರು. ಆದರೆ ಅವರ ಮುಖ ಕಾಣುತ್ತಿರಲಿಲ್ಲ. ‘ಇದು ಪ್ರೀತಿ ಆಗಿರಬಹುದು’ ಎಂದಷ್ಟೇ ಹೇಳಿದ್ದ ಸ್ವರಾ ಭಾಸ್ಕರ್​ ದಿಢೀರನೆ ಆ ವ್ಯಕ್ತಿಯ ಜೊತೆ ಮದುವೆಯಾಗಿ ಫೋಟೋ ಶೇರ್​​ ಮಾಡಿ ಸರ್​ಪ್ರೈಸ್​ ಮೂಡಿಸಿದ್ದರು. ಸ್ವರಾ ಖುದ್ದು ಆ ವ್ಯಕ್ತಿಯ ಪಕ್ಕದಲ್ಲಿ ಪತ್ನಿಯಾಗಿ ಕಾಣಿಸಿಕೊಂಡಿದ್ದರು. ಈ ಮೂಲಕ ಅಭಿಮಾನಿಗಳಿಗೆ ಶಾಕ್​ ಕೊಟ್ಟಿದ್ದರು. ಟ್ವಿಟರ್‌ (Tweet) ಹಾಗೂ ಇನ್​ಸ್ಟಾಗ್ರಾಮ್​ನಲ್ಲಿ ತಮ್ಮ ಮದುವೆ ವಿಚಾರ ತಿಳಿಸಿದ್ದರು. ತಾವು ಕೈ ಹಿಡಿದಿರುವ ವರ ಎಂದರೆ ರಾಜಕಾರಣಿ ಹಾಗೂ ಕಾರ್ಯಕರ್ತ ಫಹಾದ್ ಅಹ್ಮದ್ ಎಂದು ಹೇಳಿದ್ದರು. ಸಮಾಜವಾದಿ ಪಕ್ಷದ ನಾಯಕ ಫಹಾದ್ ಝಿರಾರ್ ಅಹ್ಮದ್ (Fahad Zirar Ahmad) ಅವರೊಂದಿಗೆ ತಾವು ಮದುವೆಯಾಗಿರುವುದಾಗಿ ಹೇಳಿದ್ದರು.