EPFO : ರೂ.7071 ಪಿಂಚಣಿ ಪಡೆಯೋದು ಹೇಗೆ ? ಇಪಿಎಫ್ ಕ್ಯಾಲ್ಕುಲೇಟರ್ ಬಗ್ಗೆ ಇಲ್ಲಿದೆ ಮಾಹಿತಿ!
EPFO: ಉಳಿತಾಯ (Savings) ಒಂದು ಉತ್ತಮ ಹವ್ಯಾಸವಾಗಿದ್ದು, ಭವಿಷ್ಯದಲ್ಲಿ ಎದುರಾಗುವ ಆರ್ಥಿಕ ಮುಗ್ಗಟ್ಟಿನಿಂದ ಪಾರಾಗುವ ಜೊತೆಗೆ ವೃದ್ಧಾಪ್ಯದಲ್ಲಿ ಹಣಕಾಸಿನ ಅಗತ್ಯತೆಯನ್ನು ಪೂರೈಸಲು ಕೂಡ ಉಳಿತಾಯ ನೆರವಾಗುತ್ತದೆ. ಸಾಮಾನ್ಯವಾಗಿ ಪ್ರತಿಯೊಬ್ಬರು ಯಾವುದಾದರೂ ಒಂದು ಕ್ಷೇತ್ರದಲ್ಲಿ ಹೂಡಿಕೆ(Investment) ಮಾಡೋದು ಸಹಜ. ವೃದಾಪ್ಯದಲ್ಲಿ ಯಾವುದೇ ನಿಶ್ಚಿಂತೆಯಿಲ್ಲದೆ ಇರಬೇಕೆಂದು ಹೆಚ್ಚಿನವರು ಉಳಿತಾಯದ ಮೂಲ ಕಂಡುಕೊಳ್ಳುತ್ತಾರೆ.
ಸಾಮಾನ್ಯವಾಗಿ ತಿಂಗಳ ವೇತನ ಪಡೆಯುವ ಎಲ್ಲರೂ ಉದ್ಯೋಗಿಗಳ ಭವಿಷ್ಯ ನಿಧಿಯಲ್ಲಿ (ಇಪಿಎಫ್) ಖಾತೆ ಹೊಂದಿರುವುದು ಕಾಮನ್. ಇಪಿಎಫ್( EPF)ಅಥವಾ ಕಾರ್ಮಿಕ ಭವಿಷ್ಯ ನಿಧಿ ಸೇವಾ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗಾಗಿ ಭಾರತ ಸರಕಾರ ಜಾರಿಗೆ ತಂದಿರುವ ಪ್ರಮುಖ ಉಳಿತಾಯ ಯೋಜನೆಯಾಗಿದೆ. ಉದ್ಯೋಗಿಗಳ ಪಾಲಿಗೆ ಪಿಎಫ್ (PF) ಮೊತ್ತವು ಸಂಕಷ್ಟದ ಸಂದರ್ಭಗಳಲ್ಲಿ ಆರ್ಥಿಕ ನೆರವನ್ನು ನೀಡುವ ಖಾತೆ ಎಂದರೇ ತಪ್ಪಾಗಲಾರದು. ಕುಟುಂಬದ ಸದಸ್ಯರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವುದಲ್ಲದೇ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಯುನಿವರ್ಸಲ್ ಅಕೌಂಟ್ ನಂಬರ್ (UAN) ಮೂಲಕ ಇ-ನಾಮನಿರ್ದೇಶನವನ್ನು ಮಾಡಬಹುದಾಗಿದೆ. ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್ ಅಥವಾ ಉದ್ಯೋಗಿಗಳ ಭವಿಷ್ಯ ನಿಧಿ) ಖಾತೆ ಹೊಂದಿದ್ದರೆ, ನೀವು ಈ ಸುದ್ದಿಯನ್ನು ತಿಳಿದುಕೊಂಡರೆ ಒಳ್ಳೆಯದು.
ಒಬ್ಬ ಉದ್ಯೋಗಿ ತನ್ನ ಮಾಸಿಕ ವೇತನದ ಶೇ.12ರಷ್ಟನ್ನು ಇಪಿಎಫ್ ಗೆ ಕೊಡುಗೆಯಾಗಿ ನೀಡಬೇಕಾಗಿದ್ದು, ಉದ್ಯೋಗದಾತ ಸಂಸ್ಥೆ ಕೂಡ ಇಷ್ಟೇ ಪ್ರಮಾಣದ ಅಂದರೆ ಶೇ.12ರಷ್ಟನ್ನು ಇಪಿಎಫ್ ಗೆ ಕೊಡುಗೆಯಾಗಿ ನೀಡುತ್ತದೆ. ಈ ಶೇ.12ರಲ್ಲಿ ಶೇ.8.33 ಉದ್ಯೋಗಿಗಳ ಪಿಂಚಣಿ ಯೋಜನೆಗೆ ಹಾಗೂ ಶೇ.3.67ಉದ್ಯೋಗಿಗಳ ಭವಿಷ್ಯ ನಿಧಿಗೆ ರವಾನೆಯಾಗುತ್ತದೆ. ಉದ್ಯೋಗಿಗಳ ಭವಿಷ್ಯ ನಿಧಿ(EPF) ಖಾತೆ ಹೊಂದಿದ್ದರು ಕೂಡ ಹೂಡಿಕೆ ಮಾಡಿದ ಹಣಕ್ಕೆ ಎಷ್ಟು ಬಡ್ಡಿ ? ವರ್ಷಕ್ಕೆ ಎಷ್ಟು ರಿಟರ್ನ್ (Return) ಸಿಗುತ್ತದೆ ಎಂಬ ಬಗ್ಗೆ ನಿಮಗೆ ತಿಳಿದಿದೆಯೇ?
ಯಾವುದೇ ಹೂಡಿಕೆ ಮಾಡಿದರು ಕೂಡ ಹೂಡಿಕೆ ಮಾಡಿದಾಗ ಬಡ್ಡಿದರ ಸೇರಿ ಎಷ್ಟು ಮೊತ್ತ ಆಗಿದೆ ಎಂಬ ಮೊತ್ತ ತಿಳಿದಿರುವುದು ಅವಶ್ಯಕ.ಕನಿಷ್ಠ 20 ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆ ತನ್ನ ಉದ್ಯೋಗಿಗಳಿಗೆ ಇಪಿಎಫ್ ಖಾತೆಗಳನ್ನು ತೆರೆಯಬೇಕು. ಕೆಲವು ಸಂಸ್ಥೆಗಳು 20ಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿದ್ದರೂ ಇಪಿಎಫ್ ಖಾತೆ ತೆರೆಯಲು ಉದ್ಯೋಗಿಗಳಿಗೆ ಆದೇಶಿಸುತ್ತದೆ. EPFO ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯಲ್ಲಿ ಹೂಡಿಕೆ ಮಾಡಿದರೆ, ಪಿಎಫ್ ಕ್ಯಾಲ್ಕುಲೇಟರ್ ಮೂಲಕ ಈ ಕೆಲಸವನ್ನು ಸುಲಭವಾಗಿ ಮಾಡಬಹುದು. ಪ್ರತಿ ತಿಂಗಳು ಉದ್ಯೋಗಿಯ ವೇತನದ ಒಂದು ಭಾಗವನ್ನು ಇಪಿಎಫ್( EPF)ಖಾತೆಗೆ ಜಮೆ ಮಾಡಲಾಗುತ್ತದೆ. ಇದಲ್ಲದೆ, ಉದ್ಯೋಗದಾತರು (ಕಂಪನಿ ಅಥವಾ ಸಂಸ್ಥೆ) ಸಹ ನಿರ್ದಿಷ್ಟ ಮೊತ್ತವನ್ನು ಈ ಖಾತೆಗೆ ಜಮೆ ಮಾಡುತ್ತಾರೆ. ಹೀಗಾಗಿ ನಿಮ್ಮ ಇಪಿಎಫ್ ಖಾತೆಯಲ್ಲಿ ಎಷ್ಟು ಹಣವಿದೆ ಎಂದು ತಿಳಿದುಕೊಳ್ಳಲು ಈ ಕ್ಯಾಲ್ಕುಲೇಟರ್ ಬಳಸಿ ಲೆಕ್ಕ ಮಾಡಬಹುದಾಗಿದೆ.
ಒಬ್ಬ ವ್ಯಕ್ತಿ ನಿವೃತ್ತಿಯಾದ ಬಳಿಕ ಇಪಿಎಫ್ ಖಾತೆಯಲ್ಲಿ ಒಟ್ಟು ಎಷ್ಟು ಹಣವಿದೆ ಎಂಬುದನ್ನು ಈ ಕ್ಯಾಲ್ಕುಲೇಟರ್ ಮೂಲಕ ತಿಳಿಯಬಹುದು. ಇಪಿಎಫ್ ಖಾತೆಯಲ್ಲಿರುವ ಸಂಪೂರ್ಣ ಮೊತ್ತವನ್ನು ಲೆಕ್ಕ ಮಾಡಬಹುದು. ಉದ್ಯೋಗಿ ತನ್ನ ಇಪಿಎಫ್ ಖಾತೆಗೆ ಮೂಲವೇತನ ಹಾಗೂ ದಿನ ಭತ್ಯೆಯ ಗರಿಷ್ಠ ಶೇ.12ರಷ್ಟನ್ನು ಕೊಡುಗೆಯಾಗಿ ನೀಡಬಹುದಾಗಿದೆ. ಉದ್ಯೋಗದಾತ ಸಂಸ್ಥೆ ಕೂಡ ಇಷ್ಟೇ ಪ್ರಮಾಣದ ಅಂದರೆ, ಶೇ.12ರಷ್ಟು ಕೊಡುಗೆ ನೀಡುತ್ತದೆ. ಇದರಲ್ಲಿ ಶೇ. 8.33 ಇಪಿಎಸ್ ಗೆ ಹಾಗೂ ಶೇ.3.67 ಉದ್ಯೋಗಿ ಇಪಿಎಫ್ ಖಾತೆಗೆ ಹೋಗುತ್ತದೆ.
ಇಪಿಎಫ್ ಸೂತ್ರ (Formula)
ಇಪಿಎಸ್ ಪಿಂಚಣಿ ಸೂತ್ರ = ಪಿಂಚಣಿ ವೇತನ X ಪಿಂಚಣಿ ಸೇವೆ /70
ಇಪಿಎಫ್ ಸೂತ್ರ , ನಿಮ್ಮ ವಯಸ್ಸು (Age),ಮೂಲ ಮಾಸಿಕ ವೇತನ, ಪಿಎಫ್ ಕೊಡುಗೆ ಶೇಕಡವಾರು, ಸಂಸ್ಥೆಯ ಕೊಡುಗೆ ಶೇಕಡವಾರು, ಅಂದಾಜು ಸರಾಸರಿ ವಾರ್ಷಿಕ ವೇತನ ಏರಿಕೆ ಶೇಕಡವಾರು, ನಿವೃತ್ತಿ ವಯಸ್ಸು ಹಾಗೂ ಬಡ್ಡಿದರಗಳ ಮಾಹಿತಿ ನೀಡಿದ ಬಳಿಕ ನಿವೃತ್ತಿಗೆ ಎಷ್ಟು ಹಣ ಉಳಿತಾಯ ಮಾಡಬಹುದು ಎಂಬ ಮಾಹಿತಿ ತಿಳಿದುಕೊಳ್ಳಬಹುದಾಗಿದೆ.
ನೀವು ಅಧಿಕ ಪಿಂಚಣಿ ಪಡೆಯಬೇಕಾದರೆ, ನಿವೃತ್ತಿ ದಿನಾಂಕದ ಆಧಾರದಲ್ಲಿ ಈ ಹಿಂದಿನ 60 ತಿಂಗಳ ಸರಾಸರಿ ಪಿಂಚಣಿ ವೇತನ ಬಳಕೆ ಮಾಡಿಕೊಂಡು ಇಪಿಎಸ್ ಪಿಂಚಣಿ ಲೆಕ್ಕ ಮಾಡಬೇಕಾಗುತ್ತದೆ. ಉದಾಹರಣೆಗೆ ನೀವು 25ನೇ ವಯಸ್ಸಿಗೆ ಇಪಿಎಸ್ ಆರಂಭಿಸಿದರೆ, 58ನೇ ವಯಸ್ಸಿಗೆ ನಿವೃತ್ತಿಯಾಗುವಾಗ ನಿಮಗೆ ಮಾಸಿಕ 7071 ರೂ. Rs. (1500033/70)ಪಿಂಚಣಿ ದೊರೆಯಲಿದೆ.
ಇದನ್ನೂ ಓದಿ : KKRTC ITI Jobs : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಭರ್ಜರಿ ಉದ್ಯೋಗವಕಾಶ! ಈ ಕೂಡಲೇ ಅರ್ಜಿ ಸಲ್ಲಿಸಿ!