SBI Clerk Main Result : 5008 ಎಸ್‌ಬಿಐ ಕ್ಲರ್ಕ್ ಮೇನ್ಸ್ ರಿಸಲ್ಟ್ ಪ್ರಕಟ!
SBI Clerk Mains Result 2023: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ State Bank Of India)5008 ಕ್ಲರ್ಕ್ ಹುದ್ದೆಗಳ ಭರ್ತಿಗೆ ಸಂಬಂಧಿಸಿದ ಮುಖ್ಯ ಮಾಹಿತಿ ನೀಡಿದೆ. ಈ ಹಿಂದೆ 5008 ಕ್ಲರ್ಕ್(Clerk)ಹುದ್ದೆಯ ಮುಖ್ಯ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಈ ಪರೀಕ್ಷೆಗೆ ಅರ್ಹರಾಗಿದ್ದ ಅಭ್ಯರ್ಥಿಗಳು ಪರೀಕ್ಷಾ ಫಲಿತಾಂಶ ವೀಕ್ಷಿಸಬಹುದು.
ಕಳೆದ 2022 ರ ಸೆಪ್ಟೆಂಬರ್‌ನಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್(State Bank of India) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಿತ್ತು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ(SBI Recruitment ) 5008 ಜೂನಿಯರ್ ಅಸೋಸಿಯೇಟ್ಸ್ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದ್ದು, ಈ ಹುದ್ದೆಗಳಿಗೆ ನವೆಂಬರ್ ತಿಂಗಳಲ್ಲಿ ಪ್ರಿಲಿಮ್ಸ್ ಪರೀಕ್ಷೆ ನಡೆಸಲಾಗಿದೆ. ಜನವರಿ 15 ರಂದು ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಎಸ್‌ಬಿಐ 5008 ಕ್ಲರ್ಕ್ ಮೇನ್ಸ್ ಪರೀಕ್ಷೆಯನ್ನು (Main Exam)ನಡೆಸಲಾಗಿದೆ.
ಭಾರತೀಯ ಸ್ಟೇಟ್ ಬ್ಯಾಂಕ್ 2022ರ ಸೆಪ್ಟೆಂಬರ್ ನಲ್ಲಿ ಅಧಿಸೂಚಿಸಿದ್ದ 5008 ಜೂನಿಯರ್ ಅಸೋಸಿಯೇಟ್ಸ್ (ಕಸ್ಟಮರ್ ಸಪೋರ್ಟ್ ಮತ್ತು ಸೇಲ್ಸ್) ಹುದ್ದೆಗಳ ಭರ್ತಿಗೆ ಅನುಸಾರ ಆಯ್ಕೆ ಮಾಡುವ ಪ್ರಕ್ರಿಯೆ ಭಾಗವಾಗಿ ಮುಖ್ಯ ಪರೀಕ್ಷೆ ನಡೆಸಲಾಗಿದ್ದು(SBI Clerk Mains Result 2023)ಫಲಿತಾಂಶವನ್ನು ಇದೀಗ ಪ್ರಕಟಿಸಲಾಗಿದೆ. ಈ ಸದರಿ ಪರೀಕ್ಷೆ ಬರೆದ ಅಭ್ಯರ್ಥಿಗಳು ತಮ್ಮ ಫಲಿತಾಂಶವನ್ನು ರಿಜಿಸ್ಟರ್ ನಂಬರ್ ಮೂಲಕ ಚೆಕ್ ಮಾಡಿಕೊಳ್ಳಬಹುದಾಗಿದೆ.
ಎಸ್‌ಬಿಐ ಕ್ಲರ್ಕ್ ರಿಸಲ್ಟ್ ಚೆಕ್ ಮಾಡಲು ಮೊದಲು, ಅಧಿಕೃತ ವೆಬ್ ಸೈಟ್ (Website) https://sbi.co.in/web/careers#lattest ಗೆ ಭೇಟಿ ನೀಡಬೇಕು. ಆ ಬಳಿಕ, ಓಪನ್ ಆದ ಪೇಜ್‌ನಲ್ಲಿ ‘Recruitment Result and Archive ‘ ಸೆಲೆಕ್ಟ್ ಮಾಡಿ ಕ್ಲಿಕ್ ಮಾಡಬೇಕು. ಆನಂತರ, ಓಪನ್ ಆಗುವ ಪೇಜ್‌ನಲ್ಲಿ ಹುದ್ದೆ ಸೆಲೆಕ್ಟ್ ಮಾಡಿ ರಿಸಲ್ಟ್ ಚೆಕ್ ಮಾಡಬಹುದಾಗಿದೆ. ಸದ್ಯ, ಆಯ್ಕೆಯಾಗಿರುವ ಅಭ್ಯರ್ಥಿಗಳು ತಾತ್ಕಾಲಿಕವಾಗಿ ಮಾತ್ರ ಅರ್ಹತೆ ಗಳಿಸಿದ್ದು, ತಮ್ಮ ಪ್ರಾದೇಶಿಕ ಭಾಷಾ ಪರೀಕ್ಷೆಯಲ್ಲಿ ಅರ್ಹತೆ ಪಡೆಯಬೇಕು ಎಂಬುದನ್ನು ಗಮನಿಸಬೇಕು.
Post Office : ಅಂಚೆ ಕಚೇರಿಯಲ್ಲಿ ಹಣ ಹೂಡಿಕೆ ಮಾಡುವವರಿಗೆ ಇಲ್ಲಿದೆ ಭರ್ಜರಿ ಸಿಹಿ ಸುದ್ದಿ!