Astro Tips : ರಂಗಪಂಚಮಿಯ ದಿನ ಈ ಎಲ್ಲಾ ಕೆಲಸ ಮಾಡಿದರೆ ನಿಮಗೆ ಯಶಸ್ಸು ಖಂಡಿತ!

Ranga panchami : ರಂಗ ಪಂಚಮಿ (Ranga panchami ) ಹಬ್ಬವು ಮಹಾರಾಷ್ಟ್ರದಲ್ಲಿ ಹುಟ್ಟಿಕೊಂಡಿದ್ದು, ಇದನ್ನು ಶಿಮ್ಗಾ ಅಥವಾ ಶಿಮ್ಗೋ ಎಂದೂ ಕರೆಯಲಾಗುತ್ತದೆ. ಕೆಲವು ಸ್ಥಳಗಳಲ್ಲಿ, ಜನರು ದೇವರ ಚಿತ್ರಣವನ್ನು ಹೊತ್ತುಕೊಂಡು ಸಣ್ಣ ಮೆರವಣಿಗೆಗಳನ್ನು ಮಾಡುತ್ತಾರೆ ಮತ್ತು ಮೆರವಣಿಗೆಯು ಹತ್ತಿರದ ನದಿ ಅಥವಾ ಕೊಳದಲ್ಲಿ ದೇವರನ್ನು ಮುಳುಗಿಸುವುದರೊಂದಿಗೆ ಕೊನೆಗೊಳ್ಳುತ್ತದೆ.

ಮುಖ್ಯವಾಗಿ ರಂಗ ಪಂಚಮಿ ಹಬ್ಬವನ್ನು ಚೈತ್ರ ಮಾಸದ ಕೃಷ್ಣ ಪಕ್ಷದ 5ನೇ ದಿನದಂದು ಆಚರಿಸಲಾಗುತ್ತದೆ. ಈ ದಿನವು ತುಂಬಾ ಒಳ್ಳೆಯದು ಮತ್ತು ಈ ದಿನದಂದು ಕೈಗೊಂಡ ಕ್ರಮಗಳು ಬಯಸಿದ ಆಸೆಗಳನ್ನು ಪೂರೈಸುತ್ತವೆಂದು ನಂಬಲಾಗಿದೆ.

ಫಾಲ್ಗುಣ ಪೂರ್ಣಿಮಾ ತಿಥಿಯಂದು ಪ್ರಾರಂಭವಾಗುವ ಹೋಳಿ ಹಬ್ಬಗಳು ಭಾರತದ ಹಲವಾರು ಭಾಗಗಳಲ್ಲಿ ರಂಗ ಪಂಚಮಿಯೊಂದಿಗೆ ಮುಕ್ತಾಯಗೊಳ್ಳುತ್ತವೆ. ಇದನ್ನು ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಕೆಲವು ಉತ್ತರ ಭಾರತದ ಪ್ರದೇಶಗಳಲ್ಲಿ ಆಚರಿಸಲಾಗುತ್ತದೆ.

ರಂಗ ಪಂಚಮಿ ದಿನದಂದು ದೇವ-ದೇವತೆಗಳು ಹೋಳಿ ಆಡಲು ಭೂಮಿಗೆ ಬರುತ್ತಾರೆಂದು ನಂಬಲಾಗಿದೆ. ಅದಕ್ಕಾಗಿಯೇ ಈ ದಿನವು ದೇವರ ಆಶೀರ್ವಾದ ಪಡೆಯಲು ಬಹಳ ವಿಶೇಷವಾಗಿದೆ.

ಹಿಂದೂ ಪಂಚಾಂಗದ ಪ್ರಕಾರ ಚೈತ್ರ ಮಾಸದ ಪಂಚಮಿ ತಿಥಿ ಮಾರ್ಚ್ 11ರಂದು ರಾತ್ರಿ 10.05ರಿಂದ ಪ್ರಾರಂಭವಾಗಿದೆ, ಇದು ಮಾರ್ಚ್ 12ರಂದು ರಾತ್ರಿ 10.01ರವರೆಗೆ ಇರುತ್ತದೆ. ಆದ್ದರಿಂದ ಇಂದು ಉದಯತಿಥಿ ಪ್ರಕಾರ ರಂಗ ಪಂಚಮಿ ಆಚರಿಸಲಾಗುವುದು. ರಂಗ ಪಂಚಮಿಯಂದು ಪೂಜೆಗೆ ಅಭಿಜಿತ್ ಮುಹೂರ್ತ ಮಧ್ಯಾಹ್ನ 12:07ರಿಂದ 12:55ರವರೆಗೆ ಮತ್ತು ವಿಜಯ್ ಮುಹೂರ್ತವು ಮಧ್ಯಾಹ್ನ 2:30ರಿಂದ 3:17ರವರೆಗೆ ಇರುತ್ತದೆ. ರಂಗ ಪಂಚಮಿಯ ಪೂಜೆಗೆ ಈ ಎರಡೂ ಶುಭ ಸಮಯಗಳು ಒಳ್ಳೆಯದು ಎನ್ನಲಾಗಿದೆ.

ರಂಗ ಪಂಚಮಿಯ ದಿನದಂದು ಮಾಡುವ ಆಚರಣೆಗಳು ಅತ್ಯಂತ ಮಂಗಳಕರ ಫಲಿತಾಂಶ ನೀಡುತ್ತವೆ. ಇದರೊಂದಿಗೆ ಜಾತಕದಲ್ಲಿರುವ ಗ್ರಹದೋಷ ನಿವಾರಣೆಗೂ ಈ ದಿನ ಬಹಳ ಮುಖ್ಯ.

ರಂಗ ಪಂಚಮಿಯ ದಿನದಂದು ಮನೆಯ ಉತ್ತರ ದಿಕ್ಕಿನಲ್ಲಿ ಕಮಲದ ಹೂವಿನ ಮೇಲೆ ಕುಳಿತಿರುವ ಲಕ್ಷ್ಮಿ-ನಾರಾಯಣರ ಚಿತ್ರವನ್ನು ಇರಿಸಿ. ನಂತರ ತಾಮ್ರದ ಪಾತ್ರೆಯಲ್ಲಿ ನೀರು ತುಂಬಿದ ಕಲಶವನ್ನು ನಿಯಮಗಳ ಪ್ರಕಾರ ಇಟ್ಟುಕೊಳ್ಳಿ. ಅದರ ಮೇಲೆ ಸ್ವಸ್ತಿಕ್ ಚಿಹ್ನೆ ರಚಿಸಿರಿ. ತಾಯಿ ಲಕ್ಷ್ಮಿದೇವಿ ಮತ್ತು ಭಗವಾನ್ ವಿಷ್ಣುವಿಗೆ ಗುಲಾಬಿ ಹೂವುಗಳನ್ನು ಅರ್ಪಿಸಿ. ನಂತರ ಸಕ್ಕರೆ ಮಿಠಾಯಿ ನೀಡಿ. ಕೊನೆಯಲ್ಲಿ ಇಡೀ ಮನೆಯಲ್ಲಿ ಪಾತ್ರೆಯಲ್ಲಿ ಇರಿಸಲಾದ ನೀರನ್ನು ಸಿಂಪಡಿಸಿ. ಹೀಗೆ ಮಾಡುವುದರಿಂದ ಕೆಲವೇ ಸಮಯದಲ್ಲಿ ಮನೆಯಲ್ಲಿ ಹಣದ ಆದಾಯವು ಹೆಚ್ಚಾಗುತ್ತದೆ ಎಂಬುದಾಗಿ ತಿಳಿಸಲಾಗಿದೆ.

ಒಟ್ಟಿನಲ್ಲಿ ಜನರು ರಂಗ ಪಂಚಮಿಯನ್ನು ಬಣ್ಣಗಳಿಂದ ಸ್ಮರಿಸುವ ಮೂಲಕ ಮತ್ತು ನಕಾರಾತ್ಮಕತೆಯನ್ನು ಹೋಗಲಾಡಿಸಲಾಗುತ್ತದೆ.

Leave A Reply

Your email address will not be published.