8th Pay Commission : 7ನೇ ವೇತನ ಆಯೋಗದ ಬದಲು 8 ನೇ ಆಯೋಗಕ್ಕೆ ಮಣೆ? ಏನಿದು ಹೊಸ ವಿಚಾರ?

8th Pay Commission : ಈ ಹಿಂದೆ ಹಣಕಾಸು ಸಚಿವಾಲಯದ ಅಧಿಕಾರಿಯೊಬ್ಬರು ತುಟ್ಟಿಭತ್ಯೆ ಹೆಚ್ಚಳದ ಕುರಿತು ಮಾಹಿತಿ ನೀಡಿದ್ದರು. ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಮುಂದಿನ ವಾರಗಳಲ್ಲಿ ಡಿಎ ಹೆಚ್ಚಳ ಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿತ್ತು. ಈ ಮಧ್ಯೆ ಇದೀಗ 7ನೇ ವೇತನದ ಆಯೋಗದ (7th Pay Commission) ಬದಲಾಗಿ 8ನೇ ವೇತನ ಆಯೋಗವನ್ನು (8th Pay Commission) ಜಾರಿ ಮಾಡುವ ಬಗ್ಗೆ ವರದಿಯಾಗಿದೆ.

2023ರ ಕೇಂದ್ರ ಬಜೆಟ್ ನಲ್ಲಿ (budget 2023) 8ನೇ ವೇತನ ಆಯೋಗದ ಘೋಷಣೆ ಮಾಡಬಹುದು ಎಂಬ ನಿರೀಕ್ಷೆಯಿತ್ತು. ಆದರೆ ಈ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಬಜೆಟ್‌ನಲ್ಲಿ 7ನೇ ವೇತನ ಆಯೋಗವನ್ನು 8ನೇ ವೇತನ ಆಯೋಗಕ್ಕೆ ಬದಲಾವಣೆ ಮಾಡುವ ಬಗ್ಗೆ ಯಾವುದೇ ವಿಚಾರವಿರಲಿಲ್ಲ. ಇದೀಗ ಇದರ ಬದಲಾವಣೆಯ ಬಗ್ಗೆ ವರದಿಯಾಗಿದೆ.

ಹೊಸ ವರದಿಯಿಂದ ಸರ್ಕಾರಿ ಉದ್ಯೋಗಿಗಳಲ್ಲಿ ಮತ್ತೆ ನಿರೀಕ್ಷೆ ಹೆಚ್ಚಾಗಿದೆ. 8ನೇ ವೇತನ ಆಯೋಗ ಆರಂಭದ ಸುದ್ದಿಯು ನೌಕರರಿಗೆ ಸಿಹಿಸುದ್ದಿ ತಂದುಕೊಟ್ಟಿದೆ. ಸಾಮಾನ್ಯವಾಗಿ 10 ವರ್ಷಗಳಿಗೊಮ್ಮೆ ಈ ವೇತನ ಆಯೋಗದ ನಿಯಮದಲ್ಲಿ ಪರಿಷ್ಕರಣೆ ಆಗುತ್ತದೆ. ಇತ್ತೀಚಿನ 5ನೇ (5th Pay Commission), 6ನೇ (6th Pay Commission) ಮತ್ತು 7ನೇ ವೇತನ ಆಯೋಗವನ್ನು ಜಾರಿ ಮಾಡುವಾಗಲೂ ಈ ರೀತಿಯೇ ಮಾಡಲಾಗಿದೆ. ಆದರೆ, 7ನೇ ವೇತನ ಆಯೋಗವನ್ನು 8ನೇ ವೇತನ ಆಯೋಗವಾಗಿ ಬದಲಾವಣೆ ಮಾಡುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಉದ್ಯೋಗಿಗಳು ಮಾತ್ರ ಅದರ ನಿರೀಕ್ಷೆಯಲ್ಲಿದ್ದಾರೆ.

ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲವಾದರೂ ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ. ಹಾಗೂ 2024ರಲ್ಲಿ ಈ ಬಗ್ಗೆ ಘೋಷಣೆ ಮಾಡಬಹುದು ಎಂಬುದು ವರದಿಯಾಗಿದೆ. ವರದಿಯಲ್ಲಿ, 2024ರ ಲೋಕಸಭೆ ಚುನಾವಣೆಗೂ ಮೊದಲು 8ನೇ ವೇತನ ಆಯೋಗವನ್ನು ಸರ್ಕಾರವು ಘೋಷಣೆ ಮಾಡಬಹುದು ಎಂದು ಹೇಳಲಾಗಿದೆ. ಹಾಗೆಯೇ ಚುನಾವಣಾ ಫಲಿತಾಂಶಗಳು ಪ್ರಕಟವಾದ ನಂತರ ಮತ್ತು ಹೊಸ ಸರ್ಕಾರ ರಚನೆಯಾದ ನಂತರ
8ನೇ ವೇತನ ಆಯೋಗದ ಬಗ್ಗೆ ಚರ್ಚೆ ನಡೆಯಲಿದೆ ಎಂದು ಎರಡು ರೀತಿಯಲ್ಲಿ ವರದಿಯಲ್ಲಿ ಉಲ್ಲೇಖವಾಗಿದೆ.

2024 ರ ಅಂತ್ಯದ ವೇಳೆಗೆ 8ನೇ ವೇತನ ಆಯೋಗವನ್ನು ಸರ್ಕಾರವು ಘೋಷಣೆ ಮಾಡಬಹುದು ಎನ್ನಲಾಗಿದ್ದು, ಘೋಷಣೆ ಮಾಡಿದರೆ, 2026 ರ ವೇಳೆಗೆ ಶಿಫಾರಸು ಜಾರಿಯಾಗಲಿದೆ. 8 ನೇ ವೇತನ ಆಯೋಗವು ಸರ್ಕಾರಿ ನೌಕರರಿಗೆ ಕನಿಷ್ಠ ವೇತನ ಶ್ರೇಣಿಯಿಂದ ಅತ್ಯುನ್ನತ ಹಂತದವರೆಗೆ ಭಾರಿ ವೇತನವನ್ನು ನೀಡುತ್ತದೆ. ಮೂಲ ವೇತನ, ಫಿಟ್‌ಮೆಂಟ್ ಅಂಶ ಮತ್ತು ಭತ್ಯೆ ಹೆಚ್ಚಳ ಇದಾಗಿದೆ. ಒಟ್ಟಾರೆ 8ನೇ ವೇತನ ಆಯೋಗವು ಜಾರಿಯಾದರೆ ಸರ್ಕಾರಿ ನೌಕರರ (government employees) ನಿರೀಕ್ಷೆ ಕೈಗೂಡುತ್ತದೆ. ನೌಕರರಿಗೆ ಭರ್ಜರಿ ಸಿಹಿಸುದ್ಧಿ ದೊರಕುತ್ತದೆ.

Leave A Reply

Your email address will not be published.