CBI ಅಧಿಕಾರಿಯ ಮಗಳಾದರೂ ಬಸ್‌ ಚಾಲಕಿ ವೃತ್ತಿ ಮಾಡುತ್ತಿರುವ ಮಗಳು! ಇದಕ್ಕೆ ಕಾರಣ ತಿಳಿದರೆ ನಿಮಗೆ ಖಂಡಿತ ಖುಷಿಯಾಗುತ್ತೆ!

Kerala CBI officer’s daughter : ಬಡವರ ಮಕ್ಕಳಿಗಿಂತ ಶ್ರೀಮಂತರ ಮಕ್ಕಳೇ ಹೆಚ್ಚು ಮೋಜು, ಮಸ್ತಿ ಮಾಡುತ್ತಾರೆ. ಅವರಲ್ಲಿ ಬೇಕಾದಷ್ಟು ಹಣ ಇರುತ್ತದೆ. ಹೆತ್ತವರು ಮಕ್ಕಳಿಗೆ ಕೇಳಿದಷ್ಟು ಹಣ ಕೊಡುತ್ತಾರೆ. ಇದು ಹೆಚ್ಚಾಗಿ ಎಲ್ಲರಿಗೂ ಗೊತ್ತಿರುವಂತದ್ದೆ. ಆದರೆ ಇಲ್ಲಿ ನಡೆದಿರುವ ಘಟನೆ ಇದಕ್ಕೆ ತದ್ವಿರುದ್ಧ. CBI ಅಧಿಕಾರಿಯ ಮಗಳೊಬ್ಬಳು ಸಾಮಾನ್ಯ ಜನರಂತೆ, ತಾನು ಅಧಿಕಾರಿಯ ಮಗಳು ಎನ್ನುವ ಅಹಂ ಇಲ್ಲದೆ, ಬಸ್‌ ಚಾಲಕಿಯಾಗಿ (bus driver) ಕೆಲಸ ಮಾಡುತ್ತಿದ್ದಾರೆ. ಇವರ ಬಗ್ಗೆ ಮಾಹಿತಿ ತಿಳಿದ್ರೆ, ಬಹುಶಃ ನಿಮಗೂ ಸ್ಫೂರ್ತಿಯಾಗಬಹುದು. ನೀವು ಈಕೆ ಬಗ್ಗೆ ತಿಳಿದ್ರೆ ಶಹಬ್ಬಾಸ್​ ಅಂತೀರಾ!!!.

ಈಕೆ ಕೇರಳದ (Kerala) ಚವಾರಾ ಮೂಲದ ನಿವಾಸಿ. ಕೊಲ್ಲಂ ಕೇರಳಪುರಂ ತೆಕೆವಿಲ್ಲಾ ಮೂಲದ ಸಿಬಿಐ ಅಧಿಕಾರಿ ಪ್ರದೀಪ್ ಮತ್ತು ಸುಮಾ ಅವರ ಹಿರಿಯ ಪುತ್ರಿ. ಯುವತಿಯ ಹೆಸರು ರೂಪಾ (25) (Kerala CBI officer’s daughter). ತಂದೆ CBI ಅಧಿಕಾರಿ ಅಂದ್ರೆ ಕೇಳಬೇಕಾ? ಹಣಕ್ಕೇನು ಕೊರತೆ ಇರಲ್ಲ. ಗೆಳತಿಯರ ಜೊತೆ ಸುತ್ತಾಡುತ್ತಾ, ಬೇಕೆನಿಸಿದ್ದನ್ನು ಕೊಂಡುಕೊಳ್ಳುತ್ತಾ ಖುಷಿಯಾಗಿರಬಹುದು. ಆದರೆ ಈಕೆ ಹಾಗೆ ಮಾಡಲಿಲ್ಲ ಬದಲಾಗಿ, ಕೊಲ್ಲಂನ ಮಾನವ ಸಂಪನ್ಮೂಲ ಕೇಂದ್ರದಲ್ಲಿ ಪಿಜಿ ಡಿಪ್ಲೊಮಾ ಇನ್ ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್ ವ್ಯಾಸಾಂಗ ಮಾಡುತ್ತಿರುವ ರೂಪಾ, ಪ್ರತಿದಿನ ತಂದೆ ಬೈಕ್ ನಲ್ಲಿ ಕಾಲೇಜಿಗೆ ಹೋಗುತ್ತಾರೆ. ರಜಾದಿನದಲ್ಲಿ ಈಕೆ ಚಾಲಕಿಯಾಗಿ ಪಾರ್ಟ್​ ಟೈಂ ಕೆಲಸ ಮಾಡುತ್ತಾರೆ. ಕಾರಣ ಏನು ಗೊತ್ತಾ?

ರೂಪಾಗೆ (roopa) ತಾನು ಮನೆಯವರಿಗೆ ಡಿಪೆಂಡ್ ಆಗಿರಬಾರದು. ತನ್ನ ಓದಿನ ಖರ್ಚನ್ನು ತಾನೇ ದುಡಿದು ಸಂಪಾದಿಸಬೇಕು ಎಂಬ ಆಸೆ. ಹಾಗಾಗಿ ರಜಾದಿನಗಳಲ್ಲಿ ಚಾಲಕಿಯಾಗಿ ಕಾರ್ಯನಿರ್ವಹಿಸುತ್ತಾರೆ. ರೂಪಾಗೆ ಚಿಕ್ಕಂದಿನಿಂದಲೂ ಡ್ರೈವಿಂಗ್‌ ಮೇಲೆ ಹೆಚ್ಚಿನ ಆಸಕ್ತಿ
ಇತ್ತಂತೆ. ಈಕೆ ಕೊಲ್ಲಂನ ಎಸ್‌ಎನ್‌ ಮಹಿಳಾ ಕಾಲೇಜಿನಲ್ಲಿ ಪದವಿ ಓದುತ್ತಿರುವಾಗಲೇ ಡ್ರೈವಿಂಗ್‌ ಲೈಸೆನ್ಸ್‌ (driving licence) ಪಡೆದಿದ್ದರು. ಕಳೆದ ವರ್ಷ ಅವರಿಗೆ ಹೆವಿ ಲೈಸನ್ಸ್ ಸಿಕ್ಕಿದೆ. ಫೆಬ್ರವರಿ ಆರಂಭದಲ್ಲಿ ಅವರು ಪಾರ್ಟ್ ಟೈಮ್ ಡ್ರೈವಿಂಗ್ ಕೆಲಸಕ್ಕೆ (part time work) ಸೇರಿದ್ದಾರೆ. ಬೆಳಗ್ಗೆ 7 ರಿಂದ ಸಂಜೆ 7 ರವರೆಗೆ ಕೆಲಸ ಮಾಡುತ್ತಾರೆ.

ಈಕೆ ಒಂದು ವರ್ಷದ ಡಿಪ್ಲೊಮಾಗೆ (diploma) ಮಾತ್ರ ತಂದೆಯ ಹಣವನ್ನು ಬಳಸಿದ್ದರು. ನಂತರ ತನ್ನ ಕಾಲೇಜಿನ ಖರ್ಚಿಗೆ, ಶುಲ್ಕಕ್ಕೆ ತಾನೇ ದುಡಿದು, ತನ್ನ ಖರ್ಚಿನಲ್ಲೇ ಓದಬೇಕು ಎಂದು ನಿರ್ಧರಿಸಿದರು. ತನ್ನ ಇಂಗಿತವನ್ನು ಮನೆಯಲ್ಲಿ ತಿಳಿಸಿದ್ದಾರೆ. ಪೊಷಕರು ಕೂಡ ಮಗಳ ಈ ಕಾರ್ಯಕ್ಕೆ ಒಪ್ಪಿಗೆ ನೀಡಿ, ಬೆಂಬಲವಾಗಿ ನಿಂತರು. ಪ್ರದೀಪ್ ಅವರಿಗೆ ಬಸ್ ಮಾಲೀಕರೊಬ್ಬರು ಸ್ನೇಹಿತರಿದ್ದರು, ಅವರ ಮೂಲಕ ಮಗಳಿಗೆ ಕೆಲಸ ಕೊಡಿಸಿದರು.

ತನ್ನ ಓದಿಗೆ ಹಣ ಸಾಕಾಗುವಾಗ ಈಕೆ ಮನೆಗೆ ಬೇಕಾಗುವ ಅಗತ್ಯ ವಸ್ತುಗಳನ್ನು ಖರೀದಿಸಿ ತರುತ್ತಾರೆ. ಇನ್ನೂ ಹಣ ಉಳಿದರೆ ಹೆತ್ತವರಿಗೆ ನೀಡುತ್ತಾರೆ. ಸದ್ಯ ರೂಪಾ ಎಲ್ಲಾ ಹೆಣ್ಣು ಮಕ್ಕಳಿಗೂ ಮಾದರಿಯಾಗಿದ್ದಾರೆ. ಶ್ರೀಮಂತೆ ಎಂಬ ಅಹಂ ಇಲ್ಲದೆ, ಈಕೆಯ ಜೀವನ ಶೈಲಿ ಕಂಡು ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತನ್ನ ಕಾಲಮೇಲೆ ತಾನು ನಿಲ್ಲಬೇಕು, ಯಾರ ಮೇಲೂ ಅವಲಂಬಿತವಾಗದೇ ಜೀವನ ನಡೆಸಬೇಕು ಎಂಬ ಈಕೆಯ ನಿರ್ಧಾರಕ್ಕೆ ಶಹಬ್ಬಾಸ್!! ಎನ್ನಲೇಬೇಕು.

ಇದನ್ನೂ ಓದಿ :Cars: ಜನಪ್ರಿಯ ಕಂಪನಿಯ ಈ ಕಾರುಗಳಿಗೆ ವರ್ಷಗಟ್ಟಲೇ ಕಾಯಬೇಕು ; ಸಂಪೂರ್ಣ ಮಾಹಿತಿ ಇಲ್ಲಿದೆ

Leave A Reply

Your email address will not be published.