Home Karnataka State Politics Updates Bangalore-Mysore Highways : ಬೆಂಗ್ಳೂರು- ಮೈಸೂರು ಹೆದ್ದಾರಿ ಕ್ರೆಡಿಟ್ ‘ಸಿಂಹಕ್ಕೆ ಸಲ್ಲಬೇಕು ಹೊರತು ನರಿಗಲ್ಲ’! ಅಭಿಮಾನಿಗಳ...

Bangalore-Mysore Highways : ಬೆಂಗ್ಳೂರು- ಮೈಸೂರು ಹೆದ್ದಾರಿ ಕ್ರೆಡಿಟ್ ‘ಸಿಂಹಕ್ಕೆ ಸಲ್ಲಬೇಕು ಹೊರತು ನರಿಗಲ್ಲ’! ಅಭಿಮಾನಿಗಳ ಪೋಸ್ಟರ್ ಈಗ ವೈರಲ್!

Hindu neighbor gifts plot of land

Hindu neighbour gifts land to Muslim journalist

Bangalore-Mysore Highways : ಕರ್ನಾಟಕದಲ್ಲಿ(Karnataka) ವಿಧಾನಸಭೆ ಚುನಾವಣೆ(Assembly Election) ನಿಮಿತ್ತ ಪ್ರಚಾರ ನಡೆಸುವ ಪಕ್ಷಗಳು, ರಾಜ್ಯದಲ್ಲಾದ ಪ್ರಮುಖ ಅಭಿವೃದ್ಧಿಗಳನ್ನು ನಾವು ಮಾಡಿದ್ದು, ನಾವು ಮಾಡಿದ್ದು ಎಂದು ಬಡಾಯಿ ಕೊಚ್ಚಿಕೊಳ್ಳುತ್ತಾ ಮತಭೇಟೆ ಶರುಮಾಡಿವೆ. ಇದರ ನಡುವೆ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ(Bangalore-Mysore Highways) ನಿರ್ಮಾಣದ ಶ್ರೇಯಸ್ಸು ಯಾರಿಗೆ ಸಲ್ಲಬೇಕು ಎಂಬ ವಿಚಾರವೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಹೌದು, ಮೈಸೂರು ಸಂಸದ(Mysore MP) ಪ್ರತಾಪ್‌ ಸಿಂಹ(Prathap Simha) ಹೆಜ್ಜೆ ಹೆಜ್ಜೆಗೂ ಟೀಕೆಗಳನ್ನು ಎದುರಿಸಿ ಈ ಹೆದ್ದಾರಿ ಕಾಮಗಾರಿಯನ್ನು ಯಶಸ್ವಿಯಾಗಿ ಮುಗಿಸಿದ ಸಮಾಧಾನದಲ್ಲಿದ್ದಾರೆ. ದಶಪಥ ಹೆದ್ದಾರಿಯ ಕ್ರೆಡಿಟ್‌ ಪಾಲಿಟಿಕ್ಸ್‌ ವಿಚಾರ ಜೋರಾಗುತ್ತಿರುವ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿರುವ ಅವರು, ‘ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ನಿರ್ಮಾಣದ ಶ್ರೇಯಸ್ಸು ಒಬ್ಬರಿಗೆ ಸಲ್ಲಬೇಕು, ಅದು ಪ್ರಧಾನಿ ನರೇಂದ್ರ ಮೋದಿ(PM Modi)ಯವರಿಗೆ, ಅವರಿಲ್ಲದಿದ್ದರೆ ನಾನು ಎಂಪಿನೂ ಆಗುತ್ತಿರಲಿಲ್ಲ. ಗಡ್ಕರಿ ಸರ್ ಮಂತ್ರಿನೂ ಆಗ್ತಿರಲಿಲ್ಲ’ ಎಂದು ಬರೆದುಕೊಂಡಿದ್ದಾರೆ.

ಇದಕ್ಕೆ ಸಂಬಂಧಿಸಿ ಗುರುವಾರ ಫೇಸ್‌ಬುಕ್‌ನಲ್ಲಿ ಅವರು ಈ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ‘ಬೆಂಗಳೂರು ಮೈಸೂರು ಹೈವೇ ಕ್ರೆಡಿಟ್‌ ಯಾರಿಗೆ ಸಲ್ಲಬೇಕು ಎಂಬ ಪ್ರಶ್ನೆಗೇ ಜನರೇ ಕೊಟ್ಟ ಉತ್ತರ. ‘ಸಿಂಹಕ್ಕೆ ಸಲ್ಲಬೇಕೇ ಹೊರತು ನರಿಗಲ್ಲ.’ ಎಪ್ಪತ್ತು ವರ್ಷದ ಹಿಂದೆ ಕಲ್ಲು ನೆಟ್ಟ ಎಲ್ಲಾ ಯೋಜನೆಗಳು ನೆಟ್ಟ ಕಲ್ಲಿನ ಜೊತೆಯೇ ಮಲಗಿತ್ತು. ಮುಕ್ತಿಯನ್ನು ಕಾಣಿಸಿದ ವ್ಯಕ್ತಿಗೆ ಸರ್ಕಾರಕ್ಕೆ ಕ್ರೆಡಿಟ್‌ ಸಲ್ಲಬೇಕು’ ಅದಕ್ಕೆ ಕಾರಣ ಮೋದೀಜೀ ಗಡ್ಕರಿ ಮತ್ತು ಪ್ರತಾಪ್‌ ಸಿಂಹ’ ಎನ್ನುವಂಥ ಪೋಸ್ಟರ್‌ ಹರಿದಾಡುತ್ತಿದೆ. ಜನರೇ ಕೊಟ್ಟ ಉತ್ತರವನ್ನು ನೀವು ಒಪ್ಪುವುದಾದರೆ ಈ ಪೋಸ್ಟ್‌ಅನ್ನು ಹೆಚ್ಚಿನ ಜನಕ್ಕೆ ತಲುಪಿಸಿ ಎನ್ನುವಂಥ ವಿಜ್ಞಾಪನೆ ಇರುವ ಪೋಸ್ಟ್‌ ವೈರಲ್‌ ಆಗಿತ್ತಿದೆ.

ಈ ನಡುವೆಸ ಕಾಂಗ್ರೆಸ್‌(Congress) ಹಾಗೂ ಜೆಡಿಎಸ್‌(JDS) ಪಕ್ಷಗಳು ಹೆದ್ದಾರಿ ನಿರ್ಮಿಸಿದ ಕ್ರೆಡಿಟ್‌ ತಮ್ಮ ಪಕ್ಷಕ್ಕೆ ಸೇರಿದ್ದು ಎಂದು ಮಾತನಾಡುತ್ತಿವೆ. ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಬೆಂಗಳೂರು-ಮೈಸೂರು ಹೆದ್ದಾರಿ ಲೋಕಾರ್ಪಣೆಗೊಳ್ಳುವ ಮೂಲಕ ಅದರ ವೀಕ್ಷಣೆ ನಡೆಸಿದ್ದಲ್ಲದೆ, ತಮ್ಮ ಪಕ್ಷ ಅಧಿಕಾರದಲ್ಲಿದ್ದ ಸಮಯದಲ್ಲಿ ಈ ಎಕ್ಸ್‌ಪ್ರೆಸ್‌ ವೇಗೆ ಅನುಮೋದನೆ ನೀಡಲಾಗಿತ್ತು ಎಂದಿದ್ದಾರೆ.