Bank Holiday List : ಎಪ್ರಿಲ್‌ನಲ್ಲಿ ಭರ್ಜರಿ ಬ್ಯಾಂಕ್‌ ರಜೆ ! ಇಲ್ಲಿದೆ ನೋಡಿ ಕಂಪ್ಲೀಟ್‌ ಲಿಸ್ಟ್‌̆̆̆!!!

Bank Holidays List: ಇಂದಿನ ಡಿಜಿಟಲ್( Digital) ಯುಗದಲ್ಲಿ ಮನೆಯಲ್ಲೇ ಕುಳಿತು ಎಲ್ಲ ಬ್ಯಾಂಕ್ ವ್ಯವಹಾರಗಳನ್ನು ಮಾಡಲು ಹೆಚ್ಚಿನ ಬ್ಯಾಂಕ್ಗಳು ಅನುವು ಮಾಡಿಕೊಟ್ಟಿದೆ. ಈಗ ಮುಂಚಿನಂತೆ ಗಂಟೆಗಟ್ಟಲೆ ಬ್ಯಾಂಕ್ ನಲ್ಲಿ ಕ್ಯೂ(Que) ನಿಂತು ಹಣ ಪಡೆಯಬೇಕಾಗಿಲ್ಲ ಆದರೂ ಕೂಡಾ ಕೆಲವೊಮ್ಮೆ ಬ್ಯಾಂಕ್ ಗಳಿಗೆ ಹೋಗಬೇಕಾದ ಅನಿವಾರ್ಯತೆ ಎದುರಾದಾಗ ರಜೆಯ ಬಗ್ಗೆ ಮಾಹಿತಿ ತಿಳಿಯದೆ ಭೇಟಿ ಕೊಟ್ಟರೆ ಕಾಲಹರಣ ಆಗುವ ಜೊತೆಗೆ ಅಂದು ಕೊಂಡ ಕೆಲಸ ಕೂಡ ಆಗುವುದಿಲ್ಲ. ಹೀಗಿದ್ದಾಗ ಬ್ಯಾಂಕ್ ರಜೆಯ ಬಗ್ಗೆ ತಿಳಿದಿದ್ದರೆ ಒಳ್ಳೆಯದು. ಏಪ್ರಿಲ್ನಲ್ಲಿ ಬ್ಯಾಂಕ್ಗೆ ಸಂಬಂಧಿಸಿದ ಯಾವುದೇ ಕೆಲಸಗಳು ಮಾಡಲು ಬಾಕಿ ಉಳಿದಿದ್ದರೆ ಈಗಲೇ ಮಾಡಿಕೊಳ್ಳುವುದು ಉತ್ತಮ. ಯಾಕೆ ಗೊತ್ತಾ? ಏಪ್ರಿಲ್ ನಲ್ಲಿ ಬರೋಬ್ಬರಿ 15 ದಿನ ಬ್ಯಾಂಕ್ ರಜೆ (Bank Holiday) ಇರುವ ಹಿನ್ನೆಲೆ ಮುಚ್ಚಿರುತ್ತದೆ.

ದೇಶದ ಹೆಚ್ಚಿನ ಬ್ಯಾಂಕ್ಗಳ ಕೆಲಸವನ್ನು ಭಾರತೀಯ ರಿಸರ್ವ್ ಬ್ಯಾಂಕ್ ನಿಯಂತ್ರಿಸುವುದು ಗೊತ್ತಿರುವ ವಿಚಾರವೇ!! ಬ್ಯಾಂಕ್ ರಜೆಯ ಕುರಿತಾಗಿ, ಆರ್ ಬಿಐ(RBI) ಪ್ರತಿ ತಿಂಗಳ ಬಿಐ ಪ್ರತಿ ತಿಂಗಳು ರಜಾಪಟ್ಟಿ( Bank Holidays List)ಬಿಡುಗಡೆ ಮಾಡಲಿದ್ದು, ರಿಸರ್ವ್ ಬ್ಯಾಂಕ್ ಒಪ್ಪಿಗೆಯ ಬಳಿಕ ಬ್ಯಾಂಕ್ ರಜಾದಿನಗಳ ತೀರ್ಮಾನ ಕೈಗೊಳ್ಳಲಾಗುತ್ತದೆ. ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್ಗಳು(Private Banks )ತಿಂಗಳ ಎರಡನೇ ಸೆಮತ್ತು ನಾಲ್ಕನೇ ಶನಿವಾರಗಳನ್ನು ಹೊರತುಪಡಿಸಿ ಭಾನುವಾರದಂದು ಕಾರ್ಯನಿರ್ವಹಿಸುವುದಿಲ್ಲ. ಅದರ ಅನ್ವಯ, ಹೊಸ ತಿಂಗಳು ಪ್ರಾರಂಭವಾಗುವ ಮುನ್ನ ಬ್ಯಾಂಕ್ ಗಳ ರಜಾ ಪಟ್ಟಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ಬಿಡುಗಡೆ ಮಾಡಲಿದ್ದು, ಇದೀಗ ಮುಂದಿನ ತಿಂಗಳು ಏಪ್ರಿಲ್ (April) ರಜಾ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ತಿಂಗಳು 15 ದಿನಗಳ ಕಾಲ ಬ್ಯಾಂಕ್ ರಜೆ ಇರಲಿದೆ.

ಆರ್ ಬಿಐ ಆದೇಶದ ಅನುಸಾರ, ಏಪ್ರಿಲ್ 2023 (April 2023)ರಲ್ಲಿ, ಎರಡನೇ ಮತ್ತು ನಾಲ್ಕನೇ ಶನಿವಾರಗಳೊಂದಿಗೆ ಭಾನುವಾರ ಸೇರಿದಂತೆ ಒಟ್ಟು 15 ದಿನಗಳವರೆಗೆ ಬ್ಯಾಂಕ್ ರಜೆ ಇರಲಿದೆ. ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ (Negotiable Instruments Act) ಅಡಿಯಲ್ಲಿ, ಆರ್ಬಿಐ ಏಪ್ರಿಲ್ 1, 4, 5, 7, 14, 15, 18, 21 ಮತ್ತು 22 ರಂದು ಬ್ಯಾಂಕ್ ರಜಾದಿನಗಳಾಗಿವೆ. ಇದಲ್ಲದೆ, ಏಪ್ರಿಲ್ನಲ್ಲಿ ಏಪ್ರಿಲ್ 2, 9, 16 ರಂದು 5 ಭಾನುವಾರಗಳು ಇರಲಿದೆ. ಏಪ್ರಿಲ್ 8 ಮತ್ತು 22 ಎರಡನೇ ಮತ್ತು ನಾಲ್ಕನೇ ಶನಿವಾರ ಬ್ಯಾಂಕ್ ಮುಚ್ಚಿರುತ್ತದೆ. ಪ್ರಸಕ್ತ ಹಣಕಾಸು ವರ್ಷ 2022-23 ಕೊನೆಗೊಳ್ಳಲಿದ್ದು, ಏಪ್ರಿಲ್ 1 ರಿಂದ ಪ್ರಾರಂಭವಾಗುವ ವೇಳೆಗೆ ಕೆಲವು ಪ್ರಮುಖ ಬದಲಾವಣೆಗಳು ಹೊಸ ಹಣಕಾಸು ವರ್ಷ 2023-24 ರಲ್ಲಿ ಕಂಡುಬರುತ್ತವೆ. ಈ ಬದಲಾವಣೆಗಳು ನೇರವಾಗಿ ಹಣ ಮತ್ತು ಬ್ಯಾಂಕುಗಳಿಗೆ ಸಂಬಂಧಪಟ್ಟಿರುತ್ತದೆ.

ಏಪ್ರಿಲ್ 2023 ರಲ್ಲಿ ಬ್ಯಾಂಕ್ ರಜಾದಿನಗಳ ಪಟ್ಟಿ :
ಇಯರ್ ಎಂಡಿಂಗ್ : ಏಪ್ರಿಲ್ 1, 2023 (ಶನಿವಾರ) ರಜಾ ದಿನ
(ಭಾನುವಾರ): ಏಪ್ರಿಲ್ 2, 2023 , ರಜಾ ದಿನ
ಮಹಾವೀರ ಜಯಂತಿ: ಏಪ್ರಿಲ್ 4, 2023 (ಮಂಗಳವಾರ) ರಜಾ ದಿನ
ಬಾಬು ಜಗಜೀವನ್ ರಾಮ್ ಜನ್ಮದಿನ : ಏಪ್ರಿಲ್ 5, 2023 (ಬುಧವಾರ) )ರಜಾ ದಿನ
ಗುಡ್ ಫ್ರೈಡೆ : ಏಪ್ರಿಲ್ 7, 2023 (ಶುಕ್ರವಾರ) ರಜಾ ದಿನ
ತಿಂಗಳ ಎರಡನೇ ಶನಿವಾರ: ಏಪ್ರಿಲ್ 8, 2023 (ಶನಿವಾರ)ರಜಾ ದಿನ
(ಭಾನುವಾರ) : ಏಪ್ರಿಲ್ 9, 2023 – ರಜಾ ದಿನ
ಡಾ. ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿ / ಬೋಹಾಗ್ ಬಿಹು / ಚೀರಾಬಾ / ಬೈಸಾಖಿ / ಬೈಸಾಖಿ / ತಮಿಳು ಹೊಸ ವರ್ಷದ ದಿನ / ಮಹಾ ಬಿಸುಭಾ ಸಂಕ್ರಾಂತಿ / ಬಿಜು ಹಬ್ಬ / ಬಿಸು ಹಬ್ಬ : ಏಪ್ರಿಲ್ 14, 2023 (ಶುಕ್ರವಾರ) – ರಜಾ ದಿನ

ವಿಷು /ಬೋಹಾಗ್ ಬಿಹು / ಹಿಮಾಚಲ ದಿನ / ಬೆಂಗಾಲಿ ಹೊಸ ವರ್ಷದ ದಿನ : ಏಪ್ರಿಲ್ 15, 2023 (ಶನಿವಾರ) – ರಜಾ ದಿನ
(ಭಾನುವಾರ) : ಏಪ್ರಿಲ್ 16, 2023 – ರಜಾದಿನ
ಶಾಬ್-ಎ-ಖಾದರ್ : ಏಪ್ರಿಲ್ 18, 2023 (ಮಂಗಳವಾರ) – ರಜಾ ದಿನ
ಈದ್-ಉಲ್-ಫಿತರ್ (ರಂಜಾನ್ ಈದ್) / ಗರಿಯಾ ಪೂಜೆ / ಜುಮಾತ್-ಉಲ್-ವಿದಾ : ಏಪ್ರಿಲ್ 2023 (ಶುಕ್ರವಾರ) – ರಜಾ ದಿನ

ತಿಂಗಳ ನಾಲ್ಕನೇ ಶನಿವಾರ/ ರಂಜಾನ್ ಈದ್ (ಈದ್-ಉಲ್-ಫಿತರ್ ): 22 ಏಪ್ರಿಲ್ 2023 (ಶನಿವಾರ) – ರಜಾ ದಿನ
(ಭಾನುವಾರ) : 23 ಏಪ್ರಿಲ್ 2023 – ರಜಾ ದಿನ
(ಭಾನುವಾರ) : 30 ಏಪ್ರಿಲ್ 2023 – ರಜಾ ದಿನ

ಏಪ್ರಿಲ್ ನಲ್ಲಿ ಬ್ಯಾಂಕುಗಳಿಗೆ ರಜೆಯಿರುವ ದಿನ ಆನ್ ಲೈನ್ ವಹಿವಾಟಿಗೆ (Online transaction) ಹಾಗೂ ಎಟಿಎಂ ವ್ಯವಹಾರಗಳಿಗೆ (ATM transaction) ಯಾವುದೇ ಸಮಸ್ಯೆ ತಲೆದೋರದು. ಆದರೆ, (Bank) ಬ್ಯಾಂಕ್ ಗಳಿಗೆ ಭೇಟಿ ನೀಡ ಬೇಕಾದ ಅನಿವಾರ್ಯತೆ ಇದ್ದರೆ ರಜೆ ದಿನ ಹೊರತು ಪಡಿಸಿ ಇನ್ನುಳಿದ ದಿನಗಳಲ್ಲಿ ಮಾಡಿಕೊಳ್ಳಬಹುದು.

ಇದನ್ನೂ ಓದಿ :Grow Money : FD, Insurance ಗಿಂತ ರಿಸ್ಕ್ ಇಲ್ಲದ ಹೂಡಿಕೆಗಳು ಇವು!

Leave A Reply

Your email address will not be published.