PM Kisan: ಲಕ್ಷಾಂತರ ರೈತರ ಖಾತೆಗೆ ಸೇರಿಲ್ಲ ಪಿಎಂ ಕಿಸಾನ್ ಹಣ ; ಕಾರಣ ಏನು ಗೊತ್ತಾ? ಇಲ್ಲಿದೆ ಮಾಹಿತಿ

PM Kisan amount  : ಸರ್ಕಾರದ ಯೋಜನೆಗಳಲ್ಲಿ ಒಂದಾದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು (PM KISAN) ರೈತರಿಗೆ ಬಹಳ ಸಹಕಾರಿಯಾಗಿದೆ. ರೈತರ (farmers) ನೆರವಿಗೆ ಕೇಂದ್ರ ಸರ್ಕಾರ ಇಂತಹ ಅನೇಕ ಯೋಜನೆಗಳನ್ನು ರೂಪಿಸಿ, ಆರ್ಥಿಕ ನೆರವಿನ ಜೊತೆಗೆ ರಸಗೊಬ್ಬರ ಪೂರೈಕೆ ಮಾಡಿ ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ.

ಈ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರ ರೈತರಿಗೆ ವಾರ್ಷಿಕ 6 ಸಾವಿರ ರೂಪಾಯಿಗಳನ್ನು ನೀಡುತ್ತದೆ. ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೈತರ ಖಾತೆಗೆ 2 ಸಾವಿರ ರೂ. ವರ್ಗಾವಣೆ ಮಾಡಲಾಗುತ್ತದೆ. ಹಾಗೆಯೇ ಫೆಬ್ರವರಿ 27 ರಂದು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 13ನೇ ಕಂತಿನ ಮೊತ್ತವನ್ನು (PM KISAN 13th Installment) ಬಿಡುಗಡೆ ಮಾಡಲಾಗಿದೆ.

ಕರ್ನಾಟಕ ರಾಜ್ಯದ ಬೆಳಗಾವಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಪಿಎಂ ಕಿಸಾನ್ ನಿಧಿಯ 13ನೇ ಕಂತು ಬಿಡುಗಡೆ ಆಗಿರುವುದನ್ನು ಘೋಷಿಸಿದ್ದರು. ಪ್ರಧಾನಿ ಮೋದಿ ರೈತರ ಖಾತೆಗೆ ಬರೋಬ್ಬರಿ 16,800 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಿದ್ದಾರೆ. ಆದರೆ ಲಕ್ಷಾಂತರ ರೈತರ ಖಾತೆಗೆ ಹಣ ಜಮೆಯಾಗಿಲ್ಲ. ಪಿಎಂ ಕಿಸಾನ್ ಯೋಜನೆಯ 11ನೇ ಕಂತಿನ ಹಣ (PM KISAN 11th Installment) 21,000 ಕೋಟಿ ರೂ ಬಿಡುಗಡೆ ಆಗಿದ್ದು, 11.27 ಕೋಟಿ ಮಂದಿಗೆ ಸಿಕ್ಕಿತ್ತು. ಆದರೆ ಈಗ 13ನೇ ಕಂತಿನ ಹಣ ಕೇವಲ 8.54 ಕೋಟಿ ಜನರಿಗೆ ಮಾತ್ರ ಲಭಿಸಿದೆ. ಫಲಾನುಭವಿಗಳ ಸಂಖ್ಯೆ ಶೇ. 25ರಷ್ಟು ಕಡಿಮೆ ಆಗಿದೆ. ಇದಕ್ಕೆ ಕಾರಣ ಏನು? ಯಾಕೆ ಕಡಿಮೆ ಹಂಚಿಕೆಯಾಗಿದೆ? ತಿಳಿದಿದೆಯೇ? ಇದರ ಕಾರಣ ಇಲ್ಲಿದೆ. ಯಾಕೆ ಹಲವು ರೈತರ ಖಾತೆಗೆ ಹಣ (PM Kisan amount ) ಸೇರಿಲ್ಲ ಎಂಬುದರ ಕಾರಣ ಇಲ್ಲಿದೆ, ತಿಳಿದುಕೊಳ್ಳಿ.

ಕಾರಣ: ಈ ಬಾರಿಯ ಕಂತಿನ ಹಣ ಬಿಡುಗಡೆ ಆಗುವ ಮುನ್ನ ಎಲ್ಲಾ ಫಲಾಭವಿಗಳು ಕೆವೈಸಿ ಅಪ್​ಡೇಟ್ ಮಾಡಬೇಕು ಎಂದು ಸರ್ಕಾರ ನಿರ್ದೇಶಿಸಿತ್ತು. ಕೆವೈಸಿ ಸರಿಯಾಗಿ ಅಪ್​ಡೇಟ್ ಆಗಿಲ್ಲದೇ ರೈತರಿಗೆ 13ನೇ ಕಂತಿನ 2 ಸಾವಿರ ರೂ ಹಣ ಸಿಕ್ಕಿಲ್ಲ ಎಂದು ಹೇಳಲಾಗುತ್ತಿದೆ.

ಹಾಗೆಯೇ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ಫಲಾನುಭವಿ ರೈತರು ಕೆವೈಸಿ ಅಪ್​ಡೇಟ್ ಮಾಡಬೇಕು, ಅದರ ಜೊತೆಗೆ ಕೆಲವು ದಾಖಲೆಗಳನ್ನು ನೀಡಬೇಕು ಎಂದು ತಿಳಿಸಲಾಗಿತ್ತು. ಅವುಗಳು, ಫಲಾನುಭವಿಯ ಬ್ಯಾಂಕ್ (bank) ಖಾತೆಗೆ ಆಧಾರ್ (aadhaar) ಜೋಡಣೆ ಆಗಿರಬೇಕು. ಬ್ಯಾಂಕ್ ಖಾತೆಯು (bank account) ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಶನ್​ಗೂ ಲಿಂಕ್ ಆಗಿರಬೇಕು. ಜಮೀನು ದಾಖಲೆಯನ್ನು ಮಾರ್ಕ್ ಮಾಡಿರಬೇಕು. ಹಾಗೇ ಪಿಎಂ ಕಿಸಾನ್ ಪೋರ್ಟಲ್​ನಲ್ಲಿ ಇ–ಕೆವೈಸ್ (E-kYC) ಪೂರ್ಣಗೊಳಿಸಿರಬೇಕು. ಈ ನಾಲ್ಕನ್ನು ಸರಿಯಾದ ರೀತಿಯಲ್ಲಿ ಮಾಡಿದ ಫಲಾನುಭವಿ ರೈತರಿಗೆ ಮಾತ್ರ ಪಿಎಂ ಕಿಸಾನ್ ಯೋಜನೆಯ 13ನೇ ಕಂತಿನ ಹಣ ಲಭಿಸಿದೆ ಎಂದು ಅಂದಾಜಿಸಲಾಗಿದೆ.

Leave A Reply

Your email address will not be published.