Home latest Robbers : ಈ ಕ್ರಿಕೆಟಿಗನ ಮನೆಗೆ ನುಗ್ಗಿ ಲಕ್ಷ ಲಕ್ಷ ದೋಚಿದ ಕಳ್ಳರು !

Robbers : ಈ ಕ್ರಿಕೆಟಿಗನ ಮನೆಗೆ ನುಗ್ಗಿ ಲಕ್ಷ ಲಕ್ಷ ದೋಚಿದ ಕಳ್ಳರು !

Hindu neighbor gifts plot of land

Hindu neighbour gifts land to Muslim journalist

Robbers: ಪಾಕಿಸ್ತಾನದ ದಿಗ್ಗಜ ಕ್ರಿಕೆಟಿಗ ಮೊಹಮ್ಮದ್ ಹಫೀಜ್ (Mohammad Hafeez) ಮನೆಯಲ್ಲಿ ಕಳ್ಳರು ತಮ್ಮ ಕೈ ಚಳಕ ಪ್ರದರ್ಶನ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.

ಸದ್ಯ, ಕ್ರಿಕೆಟರ್ ಮೊಹಮ್ಮದ್ ಹಫೀಜ್ ಪಾಕಿಸ್ತಾನ ಸೂಪರ್ ಲೀಗ್ನಲ್ಲಿ (Pakistan Super League) ಆಡುತ್ತಿದ್ದು ಕ್ವೆಟ್ಟಾ ಗ್ಲಾಡಿಯೇಟರ್ಸ್ ( Quetta Gladiators) ಪರ ಕ್ರೀಡಾಂಗಣದಲ್ಲಿ ತಮ್ಮ ಜಾದು ಪ್ರದರ್ಶಿಸಲಿದ್ದಾರೆ. ಮೊಹಮ್ಮದ್ ಹಫೀಜ್ ಮನೆಗೆ ಬೀಗ ಹಾಕಿದ್ದನ್ನ ಗಮನಿಸಿದ ಲೂಟಿಕೋರರು ಮನೆಯಲ್ಲಿ ಯಾರು ಇಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಂಡಿದ್ದು ಕಳ್ಳರು ಮಧ್ಯರಾತ್ರಿ ಮನೆಗೆ ನುಗ್ಗಿ ಸುಮಾರು 56 ಲಕ್ಷ ರೂಪಾಯಿ ಕನ್ನ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ವರದಿ (ಎಫ್‌ಐಆರ್) ಪ್ರಕಾರ ದರೋಡೆಕೋರರು $20,000, £4,000, €3,000, AED 5,000 ಕದ್ದಿದ್ದಾರೆ.

ಈ ಘಟನೆ ವೇಳೆ, ಹಫೀಜ್ ಪಾಕಿಸ್ತಾನ್ ಸೂಪರ್ ಲೀಗ್ (ಪಿಎಸ್‌ಎಲ್) ನಲ್ಲಿ ನಿರತರಾಗಿದ್ದರೆ, ಅವರ ಪತ್ನಿ ಕೆಲಸದ ನಿಮಿತ್ತ ಇಸ್ಲಾಮಾಬಾದ್‌ನಲ್ಲಿದ್ದರು ಎನ್ನಲಾಗಿದೆ. ಪೊಲೀಸರ ವರದಿ ಅನುಸಾರ, ಕಳ್ಳರು( Robbers) ಮಧ್ಯರಾತ್ರಿ ಮೊಹಮ್ಮದ್ ಹಫೀಜ್ ಮನೆಗೆ ನುಗ್ಗಿ ಲಕ್ಷಗಟ್ಟಲೆ ಲೂಟಿ ಮಾಡಿ ಪರಾರಿಯಾಗಿದ್ದಾರೆ. ಆದರೆ ಹಫೀಜ್ ಅನುಪಸ್ಥಿತಿಯಲ್ಲಿ ಮನೆಯಲ್ಲಿ ನಡೆದ ಈ ಘಟನೆಯ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕಳ್ಳರ ಜಾಡು ಪತ್ತೆ ಮಾಡಲು ಈ ದೃಶ್ಯಾವಳಿಗಳು ನೆರವಾಗುವ ಕುರಿತು ಪೋಲೀಸರು ( Police) ಮಾಹಿತಿ ನೀಡಿದ್ದಾರೆ. ವರದಿಗಳ ಪ್ರಕಾರ, ಕಳ್ಳರು ಹಫೀಜ್ ಅವರ ಮನೆಯಲ್ಲಿದ್ದ 20000 ಯುಎಸ್ ಡಾಲರ್ ಅಂದರೆ ಸುಮಾರು 56 ಲಕ್ಷ ಪಾಕಿಸ್ತಾನಿ ರೂಪಾಯಿಗಳು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಲೂಟಿ ಮಾಡಿ ಎಸ್ಕೇಪ್ ಆಗಿದ್ದಾರೆ. ಸದ್ಯ, ಹಫೀಜ್ ಅವರು ಪಾಕಿಸ್ತಾನ ಸೂಪರ್​ ಲೀಗ್​ನಲ್ಲಿ ನಿರತರಾಗಿರುವ ಹಿನ್ನೆಲೆ ಅವರ ಪತ್ನಿಯ ಚಿಕ್ಕಪ್ಪ ಶಾಹಿದ್ ಇಕ್ಬಾಲ್ ಮನೆಯಲ್ಲಿ ಕಳ್ಳತನವಾಗಿರುವ (Robbery)ಬಗ್ಗೆ ದೂರು (complaint)ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.