Starbucks : ಸ್ಟಾರ್‌ಬಕ್ಸ್ ಲೋಗೋದಲ್ಲಿರುವ ‘ಆ’ ಹುಡುಗಿ ಯಾರು? ಕಂಪನಿ ನೀಡಿದೆ ಸ್ಪಷ್ಟನೆ!
StarBucks : ದೇಶ ವಿದೇಶಗಳಲ್ಲಿ ಭಾರೀ ಪ್ರಖ್ಯಾತಿಯನ್ನು ಪಡೆದ ಪಾನೀಯ ಬ್ರಾಂಡ್ ಸ್ಟಾರ್‌ಬಕ್ಸ್. ಹೌದು ಈ ಕಂಪನಿಯ ಪಾನೀಯಗಳಿಗೆ ಮಾರು ಹೋದವರಿಲ್ಲ. ಜಗತ್ತಿನ ಅತ್ಯುತ್ತಮ ಕಾಫಿ ಅಥವಾ ಕಾಸ್ಟ್ರಿಯೆಸ್ಟ್ ಕಾಫಿ ಸಂಸ್ಥೆ ಇದು. ಅಂದ ಹಾಗೆ ಇದು ಬಡವರ ಕೈಗೆಟುಕದ ಪಾನೀಯ. ಯಾಕೆಂದರೆ ಇದೊಂದು ಕಾಸ್ಟ್ಲಿಯೆಸ್ಟ್ ಬ್ರಾಂಡ್. ನೀವು ಎಲ್ಲಾದರೂ ಶ್ರೀಮಂತರು, ಸೆಲೆಬ್ರೆಟಿಗಳ ಕೈಯಲ್ಲಿ ಅಲ್ಲೊಮ್ಮೆ ಇಲ್ಲೊಮ್ಮೆ ಈ ಬ್ರಾಂಡ್‌ನ ಬಾಟಲ್‌ನ್ನು ಹಿಡಿದುಕೊಂಡು, ಸಿಪ್ ಏರಿಸಿಕೊಂಡು ಹೋಗುವ ದೃಶ್ಯವನ್ನು ನೀವು ಗಮನಿಸಿರಬಹುದು.
ಸ್ಟಾರ್‌ಬಕ್ಸ್ (Starbucks) ವಿಶ್ವದ ಪ್ರಸಿದ್ಧ ಐಷಾರಾಮಿ ಪಾನೀಯ ಬ್ರಾಂಡ್ (Branded Drink) ಆಗಿದೆ. ಪ್ರಪಂಚದ 84 ದೇಶಗಳಲ್ಲಿ 34,630 ಮಳಿಗೆಗಳಿವೆ. ಭಾರತದಲ್ಲಿ (India) ಈ ಬ್ರಾಂಡ್‌ನ ಪ್ರವೇಶವು 2012 ರಲ್ಲಿ ಆಗಿತ್ತು. ಕಳೆದ ಹತ್ತು ವರ್ಷಗಳಲ್ಲಿ ಭಾರತದಲ್ಲಿ 252 ಫ್ರಾಂಚೈಸಿಗಳಿವೆ. ಈ ಕಂಪನಿಯ ಲೋಗೋದಲ್ಲಿ (Logo) ಓರ್ವ ಯುವತಿ ಇರುವುದು ನಿಮಗೆ ಗೊತ್ತಿರಬಹುದು. ಈ ಯುವತಿ ಯಾರು ಎನ್ನುವ ಕುತೂಹಲಕ್ಕೆ ಈಗ, ಈ ಲೋಗೋ ಬಗ್ಗೆ ಕಂಪನಿ ವಿವರಣೆ ನೀಡಿದೆ.
ಕಂಪನಿಯು ಕಳೆದ 50 ವರ್ಷಗಳಿಂದ ಬ್ರ್ಯಾಂಡಿಂಗ್ ಮತ್ತು ಗುಣಮಟ್ಟವನ್ನು ಕೇಂದ್ರೀಕರಿಸಿದೆ. ಕಂಪನಿಯು 5 ದಶಕಗಳಲ್ಲಿ 4 ಬಾರಿ ಲೋಗೋ ವಿನ್ಯಾಸವನ್ನು ಬದಲಾಯಿಸಿದೆ. ಈ ಲೋಗೋ ಒಂದು ಕಾಲದಲ್ಲಿ ಕಂದು ಬಣ್ಣದ್ದಾಗಿತ್ತು. ಈಗ ಈ ಲೋಗೋ ಹಸಿರು ಬಣ್ಣದಲ್ಲಿ ಮೂಡಿ ಬಂದಿದೆ. ಈ ಲೋಗೋದಲ್ಲಿ ಯುವತಿಯೊಬ್ಬಳು ಇರುವುದು, ನಿಜಕ್ಕೂ ಆ ಲೋಗೋದಲ್ಲಿ ಕಾಣಿಸಿಕೊಂಡ ಯುವತಿಯತ್ತ ಅನೇಕ ಗ್ರಾಹಕರು ಆಕರ್ಷಿತರಾಗಿರುವುದು ಸಹಜ.
ಸ್ಟಾರ್‌ಬಕ್ಸ್(Starbucks) ಅಧಿಕೃತ ವೆಬ್‌ಸೈಟ್ ಪ್ರಕಾರ, ಲೋಗೋದಲ್ಲಿರುವ ಯುವತಿ ಪೌರಾಣಿಕ ಪಾತ್ರ. ಆಕೆ ನಿಜವಾದ ಯುವತಿ ಅಲ್ಲ. ಪುರಾಣಗಳ ಪ್ರಕಾರ ಸೈರನ್‌ಗಳನ್ನು ಎರಡು ಬಾಲಗಳೊಂದಿಗೆ ತೋರಿಸಲಾಗಿದೆ. 1971 ರಲ್ಲಿ, ಕಂಪನಿಯ ಸಂಸ್ಥಾಪಕ ಹರ್ಮನ್ ಮೆಲ್ವಿಲ್ಲೆ ಮೊಬಿ-ಡಿಕ್ ಕಾದಂಬರಿಯಿಂದ ಸ್ಫೂರ್ತಿ ಪಡೆದು, ಇದರಿಂದ ಅವರು ಸ್ಟಾರ್‌ಬಕ್ಸ್ ಎಂಬ ಹೆಸರನ್ನು ಇಟ್ಟರು. ಬಳಿಕ ಲೋಗೋ ತಯಾರಿಸುವ ಪ್ರಕ್ರಿಯೆ ಆರಂಭವಾಯಿತು.
ಸಮುದ್ರದಲ್ಲಿನ ಮತ್ಸ್ಯಕನ್ಯೆಯರ ರೀತಿ ಈ ನಿಗೂಢ ಪಾತ್ರವನ್ನು ಸೈರನ್ ಎಂದು ಕರೆಯಲಾಗುತ್ತದೆ. ಕಂಪನಿಯ ಮೂವರು ಸಂಸ್ಥಾಪಕರು ಈ ಪಾತ್ರವನ್ನು ಇಷ್ಟಪಟ್ಟಿದ್ದು, ಈ ಪಾತ್ರದಿಂದ ಸ್ಫೂರ್ತಿ ಪಡೆದು ತರುಣಿಯ ಲೋಗೋ ರಚಿಸಲಾಗಿದೆ.
ಈ ಲಾಂಛನದ ಸಮುದ್ರ ಸಂಪರ್ಕಕ್ಕೆ ಒಂದು ಕಾರಣವೆಂದರೆ ಮೊದಲ ಸ್ಟಾರ್‌ಬಕ್ಸ್ ಅಂಗಡಿಯನ್ನು ಯುಎಸ್‌ಎಯ (USA) ಸಿಯಾಟಲ್‌ನಲ್ಲಿ ತೆರೆದಿತ್ತು. ಈ ಅಂಗಡಿಯು ಕಡಲತೀರದಲ್ಲಿದೆ. ಸಂಸ್ಥಾಪಕರ ಪ್ರಕಾರ, ನಮ್ಮ ನಗರವು ಯಾವಾಗಲೂ ನೀರಿನೊಂದಿಗೆ ಸಂಬಂಧವನ್ನು ಹೊಂದಿದೆ. ಆ ಸಮಯದಲ್ಲಿ ಸಿಯಾಟಲ್ ತಲುಪಲು ದೀರ್ಘ ಪ್ರಯಾಣವಾಗಿತ್ತು. ಆದ್ದರಿಂದ ಮತ್ಸ್ಯಕನ್ಯೆಯ ಲೋಗೋವನ್ನು ಸೇರಿಸಲಾಗಿದೆ.