ಸಾವು ನಮಗೆ ಬರೋ ಮೊದಲೇ ದೊರೆಯುತ್ತೆ ಈ ʼಮುನ್ಸೂಚನೆʼ ! ಗರುಡ ಪುರಾಣದಲ್ಲಿ ಅಡಗಿದೆ ʼಮರಣ ರಹಸ್ಯʼ

Garuda Purana: ಗರುಡ ಪುರಾಣವು ಹಿಂದೂ ಧರ್ಮದಲ್ಲಿನ 18 ಮಹಾಪುರಾಣ ಗ್ರಂಥಗಳಲ್ಲಿ ಒಂದಾಗಿದೆ. ಗರುಡ ಪುರಾಣಕ್ಕೆ ವಿಶೇಷವಾದ ಮಹತ್ವವಿದೆ. ಇದು ಹಿಂದೂ ಧರ್ಮದ (Hinduism) ಮತ್ತು ವೈಷ್ಣವ ಪಂಥದ ಪವಿತ್ರ ಪುಸ್ತಕವಾಗಿದ್ದು, ಇದರಲ್ಲಿ ಮರಣ (death), ಪಾಪ – ಪುಣ್ಯ ಮತ್ತು ಸ್ವರ್ಗ (Heaven) – ನರಕಗಳ ಕುರಿತು ಸಂಪೂರ್ಣವಾಗಿ ಹೇಳಲಾಗಿದೆ. ಗರುಡ ಪುರಾಣದ ಪ್ರಕಾರ, ಒಬ್ಬ ವ್ಯಕ್ತಿಯು ಸಾವಿನ ಸಮೀಪದಲ್ಲಿದ್ದಾಗ, ಕೆಲವು ಮುನ್ಸೂಚನೆಗಳು ಸಿಗುತ್ತವೆಯಂತೆ. ಒಂದು ಚಿಹ್ನೆ ಸಾವಿನ ಬಗ್ಗೆ ಮುನ್ಸೂಚನೆ ನೀಡುತ್ತದೆ ಎಂದು ಹೇಳಲಾಗಿದೆ. ಹಾಗಿದ್ದರೆ, ಯಾವುದು ಆ ಚಿಹ್ನೆ? ಗರುಡ ಪುರಾಣ (Garuda Purana) ಏನು ಹೇಳುತ್ತೇ?

ಪೂರ್ವಜರನ್ನ ಕನಸಿನಲ್ಲಿ ಕಾಣುವುದು : ಸಾವನ್ನಪ್ಪಲು ಇನ್ನೇನು ಕೆಲವೇ ದಿನಗಳು ಇದೆ ಎಂದೆನ್ನುವಾಗ ವ್ಯಕ್ತಿ ತನ್ನ ಪೂರ್ವಜರನ್ನು ಕನಸಿನಲ್ಲಿ ಕಾಣುತ್ತಾನೆ. ಸತ್ತಿರುವ ಪೂರ್ವಜರು ಕನಸಿನಲ್ಲಿ ಬರುತ್ತಾರೆ, ಅವರು ತುಂಬಾನೆ ಅಳುತ್ತಿದ್ದಾರೆ ಎನ್ನುವ ಅನುಭವ ಆಗುತ್ತದೆ. ಹಾಗೇ ಕನಸಿನಲ್ಲಿ (dream) ಅವರು ಓಡಿ ಹೋಗುವುದು ಕಂಡರೆ ನೀವು ಸಾವಿಗೆ ಸಮೀಪಿಸಿದ್ದೀರಿ ಎಂದರ್ಥ.

ಕೆಟ್ಟ ಕೆಲಸಗಳನ್ನು ನೆನಪಿಸಿಕೊಳ್ಳುವುದು : ವ್ಯಕ್ತಿಗೆ ಪ್ರತಿಕ್ಷಣ ತಾನು ಮಾಡಿರುವ ಕೆಟ್ಟ ಕೆಲಸಗಳು ನೆನಪಿಗೆ ಬರುತ್ತಿದ್ದರೆ, ಎಷ್ಟೇ ಮರೆಯಲು ಪ್ರಯತ್ನಿಸಿದರೂ ಅದು ಕ್ಷಣದಲ್ಲಿ ಮರೆತು ಹೋಗದೇ ಇದ್ದರೆ ಆತ ಸಾವನ್ನಪ್ಪಲಿದ್ದಾನೆ ಎಂಬುದಾಗಿದೆ. ತಾನು ಮಾಡಿರುವ ಕೆಟ್ಟ ಕಾರ್ಯಗಳು ನೆನಪಲ್ಲಿ ಉಳಿದಾಗ ವ್ಯಕ್ತಿಯು ಪಶ್ಚಾತ್ತಾಪ ಪಡುತ್ತಾರೆ. ತಾನು ಮಾಡಿದ್ದಕ್ಕೆ ಪ್ರಾಯಶ್ಚಿತ್ತವಾಗಿ ಎಲ್ಲವನ್ನೂ ತ್ಯಜಿಸಬೇಕು ಎಂದು ಭಾವಿಸುತ್ತಾನೆ.

ಸುತ್ತಲೂ ನಕಾರಾತ್ಮಕ ಶಕ್ತಿಯ (negative energy) ಭಾವನೆ : ಅಲ್ಲದೆ, ಪುರಾಣದ ಪ್ರಕಾರ, ವ್ಯಕ್ತಿಯು ನಕಾರಾತ್ಮಕತೆಯನ್ನು ಅನುಭವಿಸಿದಾಗ, ಅಥವಾ ನಕಾರಾತ್ಮಕ ದೃಶ್ಯಗಳನ್ನು ಕಂಡರೆ ಆತ ಕೆಲವೇ ದಿನದಲ್ಲಿ ಮೃತನಾಗುತ್ತಾನೆ ಎಂದರ್ಥ. ಸಾವು ಹತ್ತಿರದಲ್ಲಿದ್ದಾಗ, ವ್ಯಕ್ತಿಗೆ ವಿಚಿತ್ರ, ನಿಗೂಢ ದೃಶ್ಯಗಳು ಕನಸಿನಲ್ಲಿ ಅಥವಾ ಅಂತಹ ಆಲೋಚನೆ ಬರಬಹುದು. ಅಂದ್ರೆ, ಪ್ರವಾಹ (flood), ಜ್ವಾಲಾಮುಖಿ, ಸಂಪೂರ್ಣ ನಾಶ, ಭೂಮಿ ಒಡೆಯುವಂತಹ ವಿಷಯಗಳು ವ್ಯಕ್ತಿಗೆ ಅಲೋಚನೆಯಲ್ಲಿ ಗೋಚರಿಸಿದರೆ ಆತ ಸಾವಿಗೆ ಸಮೀಪವಾಗಿದ್ದಾನೆ ಎಂದು ಗರುಡ ಪುರಾಣ ಹೇಳುತ್ತದೆ.

ಅಂಗೈಯ ಮೇಲಿನ ಗೆರೆಗಳು ಮಸುಕಾಗುವುದು : ಗರುಡ ಪುರಾಣದ ಪ್ರಕಾರ, ವ್ಯಕ್ತಿಯು ಸಾವಿನ ಸಮೀಪದಲ್ಲಿದ್ದಾಗ ಅಥವಾ ಸಾವು ಬರುವ ಕೆಲವು ಗಂಟೆಗಳ ಮುನ್ನ ಆತನಿಗೆ ಕೆಲವೊಂದು ಅನುಭವ ಆಗುತ್ತದೆ. ಸಾವಿಗೂ ಮುನ್ನ ವ್ಯಕ್ತಿಯ ಅಂಗೈ ಮೇಲಿನ ಗೆರೆಗಳು ಮಸುಕಾಗಲು ಪ್ರಾರಂಭಿಸುತ್ತವೆ ಎಂದು ಹೇಳಲಾಗಿದೆ. ಇವೆಲ್ಲಾ ಗರುಡ ಪುರಾಣದ ಪ್ರಕಾರ ವ್ಯಕ್ತಿಗೆ ಸಾವಿಗೂ ಮುನ್ನ ದೊರೆಯುವ ಸೂಚನೆ.

Leave A Reply

Your email address will not be published.