Train Tips: ರೈಲು ಪ್ರಯಾಣ ಮಾಡುವಾಗ ಮೊಬೈಲ್​ ಜಾರಿ ಹೊರ ಬಿತ್ತಾ? ಈ ರೀತಿ ಮಾಡಿ, ಮೊಬೈಲ್‌ ನಿಮ್ಮದಾಗಿಸಿ!

Share the Article

Train Tips: ದೂರದ ಪ್ರಯಾಣ ಮಾಡಬೇಕಾದರೆ ಜನರು ಹೆಚ್ಚಾಗಿ ರೈಲನ್ನೇ ಅವಲಂಬಿಸುತ್ತಾರೆ. ರೈಲಿನಲ್ಲಿ ತುಂಬಾ ಜನರಿರುತ್ತಾರೆ. ಅವರ ಮಧ್ಯೇ ಕಳ್ಳನೂ ಇರಬಹುದು. ನಿಮ್ಮ ಮೊಬೈಲ್(mobile) ಕದ್ದುಕೊಂಡು ಹೋಗಬಹುದು. ಅಥವಾ ನಿಮ್ಮ ಮೊಬೈಲ್ ಕೈ ಜಾರಿ ಹೊರಗೆ ಬೀಳಬಹುದು. ಆಗ ಟೆನ್ಶನ್ ಆಗೋದು ಸಹಜ. ಆದರೆ ರೈಲು ಪ್ರಯಾಣದಲ್ಲಿ ಮೊಬೈಲ್​ ಕೈಜಾರಿ ಜಾರಿ ಹೊರಗೆ ಬಿದ್ದರೆ ಟೆನ್ಶನ್ ಆಗ್ಬೇಡಿ, ಈ ರೀತಿ ಮಾಡಿ(Train Tips) ನಿಮ್ಮ ಮೊಬೈಲ್ ರಿರ್ಟನ್ ಸಿಗುತ್ತೆ!!. ಹೇಗೆ? ಇಲ್ಲಿದೆ ಮಾಹಿತಿ.

ರೈಲಿ(train)ನಲ್ಲಿ ಕಿಟಕಿ ಪಕ್ಕದಲ್ಲಿ ಕುರೋದು ಯಾರಿಗಿಷ್ಟ ಇಲ್ಲ ಹೇಳಿ. ಹಾಗೇ ಕುಳಿತಿರುವಾಗ ಮೊಬೈಲ್ ಕೈ ಜಾರಿ ಹೊರಗೆ ಬಿದ್ದರೆ ಏನು ಮಾಡುತ್ತೀರಾ? ಕೆಲವರು ಚೈನ್‌ ಎಳೆದು ರೈಲು ನಿಲ್ಲಿಸಲು ಪ್ರಯತ್ನಿಸುತ್ತಾರೆ. ಆದರೆ, ಚೈನ್‌ ಎಳೆದು ರೈಲು ನಿಲ್ಲಿಸುವುದರಿಂದ ಹಲವಾರು ಪ್ರಯಾಣಿಕರಿಗೆ ತೊಂದರೆಯಾಗುತ್ತದೆ. ಪ್ರಯಾಣಿಕರು ಯಾವುದೋ ಕೆಲಸದ ನಿಮಿತ್ತ ಹೊರಟಿರುತ್ತಾರೆ. ಅಥವಾ ಊರಿಗೆ ಹೊರಟಿದ್ದರೆ, ತಲುಪುವುದು ತಡವಾಗಬಹುದು. ಹಾಗೆಯೇ ರೈಲು ಇಲಾಖೆಯ ಸಮಯವೂ ವ್ಯರ್ಥವಾಗುತ್ತದೆ. ಹಾಗಾಗಿ ಈ ರೀತಿ ಮಾಡಬೇಡಿ.

ರೈಲಿನಿಂದ ಜಿಗಿದು ಫೋನ್‌ ಬಿದ್ದ ಜಾಗವನ್ನು ಹುಡುಕಲು ಹೋದರೆ, ಅಥವಾ ರೈಲಿನಿಂದ ಜಿಗಿದು ಕಳ್ಳನನ್ನು ಬೆನ್ನಟ್ಟಿದರೆ, ಇದು ಭಾರತೀಯ ರೈಲ್ವೇ ಕಾಯಿದೆ 1989 ರ ಸೆಕ್ಷನ್ 141 ರ ಪ್ರಕಾರ ಅಪರಾಧವಾಗಿದೆ. ನೀವು ಒಂದು ವರ್ಷ ಜೈಲು ಶಿಕ್ಷೆಗೆ ಗುರಿಯಾಗಬಹುದು. ದಂಡ ಕಟ್ಟಬೇಕಾಗಿ ಬರಬಹುದು. ಹಾಗಾಗಿ ಈ ರೀತಿಯೂ ಮಾಡಬೇಡಿ.

ಹಾಗಾದ್ರೆ ಮೊಬೈಲ್​ ಕೈಜಾರಿ ಜಾರಿ ಹೊರಗೆ ಬಿದ್ದರೆ ಏನು ಮಾಡಬೇಕು? ಮೊದಲು ಫೋನ್‌ ಬಿದ್ದ ಸ್ಥಳವನ್ನು ಸರಿಯಾಗಿ ನೋಡಿಕೊಳ್ಳಬೇಕು. ಸ್ಥಳವನ್ನು ನೆನಪಿಟ್ಟುಕೊಳ್ಳಿ. ರೈಲ್ವೇ ಕಂಬದ ಮೇಲೆ ಬರೆಯಲಾದ ನಂಬರ್, ಸೈಡ್‌ ಟ್ರ್ಯಾಕ್‌ ನಂಬರ್‌ ಅನ್ನು ನೋಟ್‌ ಮಾಡಿಕೊಳ್ಳಿ. ನಂತರ ನಿಮ್ಮ ಸಹ ಪ್ರಯಾಣಿಕರ ಫೋನ್‌ ಪಡೆದು ರೈಲ್ವೆ ರಕ್ಷಣಾ ಪಡೆಯ ಸಂಖ್ಯೆ 182 ಗೆ ಕರೆ ಮಾಡಿ ಈ ಬಗ್ಗೆ ಮಾಹಿತಿ ನೀಡಿ. ಮೊಬೈಲ್ ಬಗೆಗಿನ ಸಂಪೂರ್ಣ ಮಾಹಿತಿ ನೀಡಿರಿ. ಇದರಿಂದ ನಿಮ್ಮ ಮೊಬೈಲ್ ಬೇಗನೆ ನಿಮಗೆ ಸಿಗುತ್ತದೆ.

ನಿಮ್ಮ ಫೋನ್‌ ಅನ್ನು ಕಳ್ಳರು ಕಿತ್ತುಕೊಂಡು ಹೋದರೆ, ಸರ್ಕಾರಿ ರೈಲ್ಬೇ ಪೊಲೀಸ್‌ ಸಹಾಯವಾಣಿ 1512 ಗೆ ಕರೆ ಮಾಡಿರಿ. ಹಾಗೇ ರೈಲ್ವೇ ಪ್ಯಾಸೆಂಜರ್ ಹೆಲ್ಪ್ ಲೈನ್ ಸಂಖ್ಯೆ 138 ಗೂ ಕರೆ ಮಾಡಬಹುದು. ಗಾಬರಿ ಪಡದೆ ಈ ರೀತಿ ಮಾಡಿದರೆ ನಿಮ್ಮ ಮೊಬೈಲ್ ಮರಳಿ ನಿಮಗೆ ಸಿಗುತ್ತದೆ.

Leave A Reply