Morning Habits : ಬೆಳಿಗ್ಗೆ ಬ್ರಶ್ ಮಾಡದೇ ನೀರು ಕುಡಿಯುವುದು ಒಳ್ಳೆಯದೋ? ಕೆಟ್ಟದೋ? ತಜ್ಞರು ಏನು ಹೇಳುತ್ತಾರೆ?

Share the Article

Morning Habits: ಕೆಲವರಿಗೆ ಬೆಳಿಗ್ಗೆ ಬ್ರಶ್ ಮಾಡದೇ ನೀರು ಕುಡಿಯುವ ಅಭ್ಯಾಸವಿರುತ್ತದೆ (Morning Habits). ಇನ್ನು ಕೆಲವರು ಮರೆತು ಬ್ರಶ್(brush) ಮಾಡದೇ ಬಾಯಾರಿಕೆ ಆಗಿ ನೀರು ಕುಡಿದುಬಿಡುತ್ತಾರೆ. ಆದರೆ, ಇದು ಒಳ್ಳೆಯದೋ? ಕೆಟ್ಟದೋ? ಈ ಬಗ್ಗೆ ಯೋಚಿಸಿದ್ದಿರಾ? ತಜ್ಞರು ಏನು ಹೇಳುತ್ತಾರೆ, ನೊಡೋಣ.

ತಜ್ಞರ ಪ್ರಕಾರ, ನಮ್ಮ ಬಾಯಿಯ ಲಾಲಾರಸವು ಐದು ಪದರಗಳನ್ನು ಹೊಂದಿರುತ್ತವೆಯಂತೆ. ಆ ಲಾಲಾರಸವು ತುಂಬಾ ಪರಿಣಾಮಕಾರಿಯಾಗಿದೆ ಎಂದು ಹೇಳಲಾಗಿದೆ. ನೀವು ಬೆಳಿಗ್ಗೆ ಹಲ್ಲುಜ್ಜದೇ ನೀರು(water) ಕುಡಿದರೆ ರಾತ್ರಿಯ ವೇಳೆಯಲ್ಲಿ ಬಾಯಲ್ಲಿ ಸಂಗ್ರಹವಾದ ಜೊಲ್ಲು ಅಥವಾ ಲಾಲಾರಸ ಹೊಟ್ಟೆಯೊಳಗೆ ಸೇರಿ ದೇಹಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ ಎನ್ನಲಾಗಿದೆ. ಲಾಲಾರಸ ಹಲವು ರೀತಿಯಲ್ಲಿ ದೇಹಕ್ಕೆ ಪ್ರಯೋಜನಕಾರಿಯಾಗಿದೆ.

ಬೆಳಗ್ಗಿನ ಲಾಲಾರಸವು ಅನ್ನನಾಳವನ್ನು ತೆರವುಗೊಳಿಸುತ್ತದೆ. ಇದರಿಂದ ತಕ್ಷಣವೇ ಹೊಟ್ಟೆ ತುಂಬಿದ ಅನುಭವವಾಗುತ್ತದೆ.
ಇದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ. ಅಲ್ಲದೆ, ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಕೆಮ್ಮು(caugh), ಶೀತ(cold), ಜ್ವರ(fever), ಅಜೀರ್ಣದಂತಹ ಸಮಸ್ಯೆ, ಅಧಿಕ ರಕ್ತದೊತ್ತಡ ಇವೆಲ್ಲಾ ಈ ಲಾಲಾರಸದ ಕಾರಣ ನಿಮ್ಮಿಂದ ದೂರ ಹೋಗುತ್ತದೆ. ಹಾಗಾಗಿ ಬೆಳಿಗ್ಗೆ ಬ್ರಶ್ ಮಾಡದೇ ನೀರು ಕುಡಿಯುವುದು ಒಳ್ಳೆಯದು.

ಆದರೆ, ರಾತ್ರಿ ಮಲಗುವ ಮುನ್ನ ಬ್ರಶ್ ಮಾಡಬೇಕು ಅಥವಾ ಬಾಯಿಯನ್ನು ಚೆನ್ನಾಗಿ ತೊಳೆಯಬೇಕು. ಆಗ ಮಾತ್ರ ಮರುದಿನ ಬ್ರಶ್ ಮಾಡದೇ ನೀರು ಕುಡಿಯಬಹುದು. ಆಗ ಮಾತ್ರ ಒಳ್ಳೆಯದು, ಪ್ರಯೋಜನಕಾರಿ ಎಂದು ತಜ್ಞರು ಹೇಳುತ್ತಾರೆ.

Leave A Reply