Marriage: ಮದುವೆ ಬಳಿಕ ಗಂಡಸರು ಈ ಗುಟ್ಟುಗಳನ್ನು ಹೆಂಡತಿಯ ಬಳಿ ಹೇಳಿಕೊಳ್ಳಬಾರದು; ಯಾಕೆ ಗೊತ್ತಾ?

Married men secrets : ಮದುವೆ(marriage)ಯ ಮುಂಚೆ ಹಾಗೂ ಮದುವೆಯ ನಂತರದ ಜೀವನ ಒಂದೇ ರೀತಿ ಇರೋದಿಲ್ಲ. ಎಷ್ಟೋ ವಿಷಯಗಳು ಬದಲಾಗುತ್ತದೆ. ಮದುವೆಗಿಂತ ಮೊದಲು ತನ್ನ ಹುಡುಗಿಯ ಜೊತೆ ಎಲ್ಲಾ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದ ಪ್ರಿಯಕರ(boyfriend) ಮದುವೆಯ ನಂತರ ಏನೂ ಹೇಳಿಕೊಳ್ಳದೇ ಇರಬಹುದು. ಇದಕ್ಕೆ ಕಾರಣ ಏನು ಗೊತ್ತಾ? ಹಾಗೇ ಮದುವೆಯ ನಂತರದಲ್ಲಿ ಗಂಡಸರು ಕೆಲವೊಂದು ಗುಟ್ಟು (Married men secrets) ಗಳನ್ನು ಹೆಂಡತಿ(wife)ಯ ಜೊತೆ ಹೇಳಿಕೊಳ್ಳಬಾರದಂತೆ. ಯಾಕೆ? ಇದಕ್ಕೆ ಉತ್ತರ ಇಲ್ಲಿದೆ.

ಮದುವೆಯಾದ ಮೇಲೆ ಕೆಲವು ಗಂಡಸರಿಗೆ ಪೋರ್ನ್ ವಿಡಿಯೋ (porn video)ಗಳು ನೋಡಲು ತುಂಬಾ ಇಷ್ಟವಿರುತ್ತದೆ. ಆದರೆ ಮಕ್ಕಳಾದ ನಂತರದಲ್ಲಿ ಲೈಂಗಿಕ ಜೀವನದ ಕಡೆಗೆ ಗಮನ ಇರೋದಿಲ್ಲ. ಅಥವಾ ಮದುವೆಯಾದ ನಂತರ ಲೈಂಗಿಕತೆಯ ಬಗ್ಗೆ ಹೆಂಡತಿಗೆ ಆಸಕ್ತಿ ಕಡಿಮೆಯಾಗಿದ್ದರೆ, ಆಗ ಗಂಡ ಪೋರ್ನ್ ವಿಡಿಯೋಗಳ ಕಡೆಗೆ ಹೆಚ್ಚು ಆಸಕ್ತಿ ವಹಿಸುತ್ತಾನೆ. ಇದನ್ನು ಹೆಂಡತಿಯ ಜೊತೆ ಹೇಳಿದರೆ, ಆಕೆ ತಪ್ಪಾಗಿ ಅರ್ಥೈಸಿಕೊಂಡರೆ, ಅಥವಾ ಜೊತೆಗೆ ಕುಳಿತು ನೋಡುವ ಎಂದರೆ ಮುಂದೆ ಈ ವಿಷಯ ತಿರುಗಿಬಿದ್ದರೆ, ಇದು ಕೆಲವು ಗಂಡಸರ ಭಯ. ಹಾಗಾಗಿ ಈ ವಿಚಾರ ಹೆಂಡತಿಯರ ಜೊತೆ ಹಂಚಿಕೊಳ್ಳಬಾರದು ಎನ್ನುತ್ತಾರೆ.

ಕೆಲವು ಗಂಡಸರಿಗೆ ಹೆಂಡತಿ ಶಾರ್ಟ್ಸ್(shorts) ಹಾಕಿಕೊಳ್ಳುವುದು ಇಷ್ಟವಿರುವುದಿಲ್ಲ. ಹಾಗೇ ಶಾರ್ಟ್ಸ್ ಆಕೆಗೆ ಚೆನ್ನಾಗಿ ಕಾಣುವುದಿಲ್ಲ. ಇವೆಲ್ಲಾ ಹೇಳಬೇಕೆನಿಸಿದರೂ, ಗಂಡಸರಿಗೆ ಹೇಳಲು ಸಾಧ್ಯವಾಗೋದಿಲ್ಲ. ಹೇರ್ ಸ್ಟ್ಯೈಲ್(hair style) , ಡ್ರೆಸ್(dress) ಇವೆಲ್ಲಾ ಹೆಂಡತಿಗೆ ಚೆನ್ನಾಗಿ ಕಾಣಿಸುವುದಿಲ್ಲ ಎಂದು ಹೇಳಲು ಹೋದರೆ, ಇನ್ನೇನೋ ಆಗಬಹುದು. ಜಗಳ ಆಗಬಹುದು, ಸಂಬಂಧದಲ್ಲಿ ಬಿರುಕು ಮೂಡಬಹುದು. ಹಾಗೇ ಮೇಕಪ್(makeup) ವಸ್ತುಗಳು, ಬಟ್ಟೆ ಇವುಗಳಿಗೆ ಅನಗತ್ಯ ಖರ್ಚು ಮಾಡಬೇಡ ಎಂದು ಹೇಳಲು ಗಂಡಸರು ಹಿಂಜರಿಯುತ್ತಾರೆ. ಹಾಗಾಗಿ ಈ ವಿಷಯ ಹೇಳದೇ ಇರುವುದೇ ಒಳಿತು.

ಗಂಡ ಕೆಲಸದ ನಿಮಿತ್ತ ಕೆಲವು ತಿಂಗಳುಗಳು ಟ್ರಾವೆಲ್(travel) ಮಾಡಬೇಕಾಗುತ್ತದೆ. ಬೇರೆ ಕಡೆಗೆ ಸಾಗಬೇಕಾಗುತ್ತದೆ. ಆಗ ಹೆಂಡತಿಯಿಂದ ದೂರವಿರಬೇಕಾಗುತ್ತದೆ. ಆಗ ಗಂಡ ಹೆಂಡತಿಯಿಂದ ದೂರವಿದ್ದು, ಮಾಸ್ಟರ್ಬೇಟ್ ಮಾಡಿಕೊಳ್ಳುತ್ತಾನೆ. ಇದರಿಂದ ಅವಳು ಗಂಡನಿಗೆ ಲೈಂಗಿಕ ಆಸಕ್ತಿ ಜಾಸ್ತಿ ಇದೆ. ನಾನು ಆತನ ಜೊತೆ ಇಲ್ಲದೇ ಇರುವಾಗ ತನಗೆ ಗಂಡ(husband) ಮೋಸ ಮಾಡುತ್ತಾನೆ ಎಂದುಕೊಳ್ಳುತ್ತಾಳೆ. ಕೆಲವು ಹೆಂಡತಿಯರು ಗಂಡನ ಮೇಲೆ ನಂಬಿಕೆ ಇಟ್ಟಿರುತ್ತಾರೆ. ಹಾಗೇ ಗಂಡನ ಮಾತನ್ನು ಆಲಿಸಿ, ಅರ್ಥ ಮಾಡಿಕೊಳ್ಳುತ್ತಾರೆ. ಆದರೆ ಅರ್ಥ ಮಾಡಿಕೊಳ್ಳದೆ ಇರುವ ಹೆಂಡತಿಯಾದರೆ ಕಷ್ಟ ಅಲ್ವಾ?? ಹಾಗಾಗಿ ಹೆಂಡತಿಯ ಬಳಿ ಹೇಳಬಾರದು.

ತಾಯಿಯ ಕೈರುಚಿ ತುಂಬಾ ಚೆನ್ನಾಗಿರುತ್ತದೆ. ಮದುವೆಯಾದ ನಂತರ ಹೆಂಡತಿಯ ಕೈರುಚಿ ತಿನ್ನಬೇಕು, ಆದರೆ ಹೆಂಡತಿ ಮಾಡಿದ ಅಡುಗೆ ಚೆನ್ನಾಗಿರೋದಿಲ್ಲ. ಆಗ ಗಂಡಂದಿರು ಅಡುಗೆ ಚೆನ್ನಾಗಿಲ್ಲ, ತಾಯಿ ಮಾಡಿದ ಅಡುಗೆ ಚೆನ್ನಾಗಿದೆ ಎಂದರೆ ಮುಗಿತು. ಅಷ್ಟೇ!! ಸಂಬಂಧದಲ್ಲಿ ಬಿರುಕು ಮೂಡಬಹುದು. ಹಾಗಾಗಿ ಈ ವಿಚಾರ ಗುಟ್ಟಾಗಿರಲಿ. ಹೆಂಡತಿ ಮಾಡಿದ ಅಡುಗೆ ಚೆನ್ನಾಗಿದೆ ಎಂದು ಹೇಳಿ, ಎಂದೆನ್ನುತ್ತಾರೆ ತಿಳಿದವರು. ಇಲ್ಲವಾದರೆ ಸಂಸಾರದ ನೆಮ್ಮದಿ ಹಾಳಾಗುತ್ತದೆ.

Leave A Reply

Your email address will not be published.