UPI ಬಳಕೆದಾರರಿಗೆ RBI ನೀಡಿದೆ ಬಿಗ್‌ ನ್ಯೂಸ್‌

Digital Payments Awareness : ಇಂದಿನ ಯುಗದಲ್ಲಿ ಎಲ್ಲವೂ ಡಿಜಿಟಲ್ ಮಯವಾಗಿ ಬಿಟ್ಟಿದೆ. ಇತ್ತೀಚೆಗೆ ಡಿಜಿಟಲ್ ಪೇಮೆಂಟ್ ಹೆಚ್ಚಿನ ಬಳಕೆಯಲ್ಲಿದ್ದು, ಈ ಯುಪಿಐ ಮೂಲಕ ಮನೆಯಲ್ಲಿಯೇ ಕುಳಿತು ಯಾವುದೇ ಬ್ಯಾಂಕಿನ ಹಣಕಾಸು ವ್ಯವಹಾರವನ್ನು ನಿರ್ವಹಿಸಬಹುದಾಗಿದೆ. ಸದ್ಯ ಭಾರತದಲ್ಲಿ ಯುಪಿಐ ಪಾವತಿ ಸೇವೆಯನ್ನು ಫೋನ್ ಪೇ ಗೂಗಲ್ ಪೇ (Google Pay), (Paytm) ನಂತಹ ಆ್ಯಪ್‌ಗಳು ನೀಡುತ್ತಿವೆ.

ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್( Governor of the Reserve Bank of India)ಶಕ್ತಿಕಾಂತ ದಾಸ್ (Shaktikanta Das) ಅವರು ಯುಪಿಐ ಪೇಮೆಂಟ್ ವ್ಯವಹಾರದ ಕುರಿತಂತೆ ಬಿಗ್ ಅಪ್ಡೇಟ್ ನೀಡಿದ್ದಾರೆ.ಯುಪಿಐ ಮೂಲಕ ನಡೆಸಿರುವ ಒಂದು ವರ್ಷದ ವಹಿವಾಟನ್ನು ಗಮನಿಸಿದರೆ ಶೇ.50ರಷ್ಟು ಏರಿಕೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಕಳೆದ ಮೂರು ತಿಂಗಳಿನಿಂದ ಮಾಸಿಕ ಡಿಜಿಟಲ್ ಪಾವತಿ ವಹಿವಾಟು ಪ್ರತಿ ಬಾರಿ 1,000 ಕೋಟಿ ರೂಪಾಯಿಗಳ ಗಡಿ ದಾಟಿರುವ ಬಗ್ಗೆ ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಮಾಹಿತಿ ನೀಡಿದ್ದಾರೆ.

ಫೆಬ್ರವರಿ 2022 ರಲ್ಲಿ ದಾಖಲಾದ ಅಂಕಿ ಅಂಶಗಳ ಗಮನಿಸಿದರೆ 5.36 ಲಕ್ಷ ಕೋಟಿಗಿಂತ ಇದೀಗ ನಡೆದಿರುವ ವಹಿವಾಟು 17 ಶೇಕಡಾದಷ್ಟು ಏರಿಕೆ ಕಂಡಿದೆ. ಕಳೆದ ಮೂರು ತಿಂಗಳಿನಿಂದ ಮಾಸಿಕ ಡಿಜಿಟಲ್ ಪಾವತಿ ವಹಿವಾಟು( Digital Payments Awareness)ಪ್ರತಿ ಬಾರಿ 1,000 ಕೋಟಿ ರೂಪಾಯಿಗಳ ಗಡಿ ದಾಟುತ್ತಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ. ಫೆಬ್ರವರಿ 2022 ರಲ್ಲಿ ನಡೆದ ವಹಿವಾಟು ಸಂಖ್ಯೆ 24 ಕೋಟಿ ಆಗಿದ್ದು, ಇದೀಗ ಈ ಸಂಖ್ಯೆ 36 ಕೋಟಿ ದಾಟಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.ಆರ್‌ಬಿಐ (RBI) ಗವರ್ನರ್, ಯುಪಿಐ ಮತ್ತು ಸಿಂಗಾಪುರದ ಪೆನೌ ನಡುವಿನ ಒಪ್ಪಂದದ ಬಳಿಕ, ಇತರ ಹಲವು ದೇಶಗಳು ಪಾವತಿಯ ಅನ್ವಯ ಈ ರೀತಿಯ ಒಪ್ಪಂದವನ್ನು ಮಾಡಿಕೊಳ್ಳುವ ಯೋಜನೆ ಹಾಕಿರುವ ಕುರಿತು ಮಾಹಿತಿ ನೀಡಿದ್ದಾರೆ.

ಯುಪಿಐ-ಪೆನೌ ಒಪ್ಪಂದಕ್ಕೆ ಸಹಿ ಹಾಕಿ 10 ದಿನಗಳಾಗಿದೆ. ಈ ಅವಧಿಯಲ್ಲಿ ಸಿಂಗಾಪುರದಿಂದ ಹಣ ಕಳುಹಿಸಲು 120 ಮತ್ತು ಸಿಂಗಾಪುರಕ್ಕೆ ಹಣ ಕಳುಹಿಸಲು 22 ವಹಿವಾಟು ನಡೆದಿರುವ ಬಗ್ಗೆ ಗವರ್ನರ್ ಮಾಹಿತಿ ನೀಡಿದ್ದಾರೆ.ಯುಪಿಐ-ಪೆನೌ ಒಪ್ಪಂದಕ್ಕೆ ಸಹಿ ಹಾಕಿದ 10 ದಿನಗಳ ಬಳಿಕ, ಕನಿಷ್ಠ ಅರ್ಧ ಡಜನ್ ದೇಶಗಳು ಈ ಒಪ್ಪಂದವನ್ನು ಮಾಡಿಕೊಳ್ಳುವತ್ತ ಗಮನ ಹರಿಸಿದೆ.

Leave A Reply

Your email address will not be published.