Home Breaking Entertainment News Kannada Actress Khushboo: ಎಂಟು ವರ್ಷದವಳಿದ್ದಾಗ ತಂದೆಯಿಂದಲೇ ಲೈಂಗಿಕ ಶೋಷಣೆಗೆ ಒಳಗಾಗಿದ್ದೆ ಎಂದ ನಾಯಕಿ ನಟಿ

Actress Khushboo: ಎಂಟು ವರ್ಷದವಳಿದ್ದಾಗ ತಂದೆಯಿಂದಲೇ ಲೈಂಗಿಕ ಶೋಷಣೆಗೆ ಒಳಗಾಗಿದ್ದೆ ಎಂದ ನಾಯಕಿ ನಟಿ

Hindu neighbor gifts plot of land

Hindu neighbour gifts land to Muslim journalist

Actress Khushboo: ನಟಿ, ರಸಿಕ ರವಿಚಂದ್ರನ್ (Ravichandran) ಅವರ ರಣಧೀರ ಚಿತ್ರದ ನಾಯಕಿ ಹಾಗೂ ತಮಿಳುನಾಡು ಬಿಜೆಪಿ ನಾಯಕಿ ಖುಷ್ಬೂ ಸುಂದರ್ (Actress Khushboo) ಅವರು ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಯೊಂದನ್ನು ಬಹಿರಂಗ ಮಾಡಿದ್ದಾರೆ.

‘ನಾನು ಎಂಟು ವರ್ಷದವಳಿದ್ದಾಗ ನನ್ನ ತಂದೆ ನನ್ನ ಮೇಲೆ ಲೈಂಗಿಕ ‘…’ ಮಾಡುತ್ತಿದ್ದರು’ ಎಂದು ಆಕೆ ಹೇಳಿದ್ದಾರೆ. ದಿ ಮೋಜೊ ಸ್ಟೋರಿಯ ‘ವಿ ದಿ ವುಮನ್’ (we the woman) ಸಂದರ್ಶನದಲ್ಲಿ ಖುಷ್ಬೂ ಈ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.ಪತ್ರಕರ್ತೆ ಬರ್ಕಾ ದತ್ ಅವರ ಈ ಶೋನಲ್ಲಿ ಕಟು ಸತ್ಯ ಹೊರಕ್ಕೆ ಬಂದಿದೆ.

‘ಆಗ ನನ್ನ ತಂದೆ, ನನ್ನ ತಾಯಿಯನ್ನು ತುಂಬಾ ಹೊಡೆಯುವುದು, ಮತ್ತಿತರ ಹಿಂಸೆ ನೀಡುವುದು ಮಾಡುತ್ತಿದ್ದರು. ಹೆಂಡತಿ–ಮಕ್ಕಳನ್ನು ಹೊಡೆಯುವುದು ತನ್ನ ಜನ್ಮಸಿದ್ಧ ಹಕ್ಕು ಎಂದು ಆತ ಭಾವಿಸಿದ್ದ. ಕ್ರಮೇಣ ನಾನು 8 ವರ್ಷದವಳಿದ್ದಾಗ ನನ್ನ ಮೇಲೆ ಲೈಂಗಿಕ ಶೋಷಣೆ (sexually abused) ಮಾಡಲು ಪ್ರಯತ್ನಿಸುತ್ತಿದ್ದ. ಆದರೆ, ಅದನ್ನು ನಾನು ಬಲವಾಗಿ ವಿರೋಧಿಸುತ್ತಿದ್ದೆ. ನಾನು 15 ವರ್ಷವಳಾದಾಗ ತಂದೆಯ ವಿರುದ್ಧ ಮಾತನಾಡಲು ಆರಂಭಿಸಿದ್ದೆ’ ಎಂದು ಖುಷ್ಬೂ ಹೇಳಿದ್ದಾರೆ.

‘ ತನ್ನ ಮಗಳ ಮೇಲೆ ಶೋಷಣೆ ನಡೆಯುತ್ತಿರುವುದು ನನ್ನ ತಾಯಿ ಗಮನಕ್ಕೆ ಬಂದಿತ್ತು. ಆದರೆ, ಏನೇ ಆಗಲಿ ಪತಿಯೇ ಪರದೈವ ಎಂಬ ಮನೋಭಾವದ ಮಹಿಳೆ ಅವರಾಗಿದ್ದ ಕಾರಣ ಆಕೆ ಸುಮ್ಮನಿದ್ದಳು. ಆಮೇಲೆ ನಾನು 16 ವರ್ಷದವಳಿದ್ದಾಗ ತಂದೆ ನಮ್ಮನ್ನು ಬಿಟ್ಟು ಹೋದರು, ಮುಂದೆ ಅವರು ಏನಾದರು ಎಂಬ ಬಗ್ಗೆ ನನಗೆ ಗೊತ್ತಿಲ್ಲ’ ಎಂದು ಖುಷ್ಬೂ ತನ್ನ ಜೀವನದ ಖಾಸಗಿ ವಿಷಯವನ್ನು ಹೇಳಿಕೊಂಡಿದ್ದಾರೆ.

ಇದೀಗ ಮಧ್ಯವಯಸ್ಸಿನ 52 ವರ್ಷ ದಾಟಿದ ಖುಷ್ಬೂ ಸುಂದರ್ ಅವರ ಬಾಲ್ಯದ ಹೆಸರು ನಖತ್ ಖಾನ್. ಮುಂಬೈನಲ್ಲಿ ಜನಿಸಿದ್ದ ಅವರು ಭಾರತೀಯ ಚಿತ್ರರಂಗದಲ್ಲಿ 100 ಕ್ಕೂ ಹೆಚ್ಚು ಚಿತ್ರಗಳಲ್ಲಿ ಮತ್ತು ಬಹುತೇಕ ಎಲ್ಲ ಸೂಪರ್‌ಸ್ಟಾರ್ ನಟರ ಜೊತೆ ಅಭಿನಯಿಸಿದ ಗಟ್ಟಿಗಿತ್ತಿ ಮತ್ತು ಪ್ರತಿಭಾವಂತೆ.

90ರ ದಶಕದಲ್ಲಿ, ಸರಿಯಾಗಿ ಹೇಳಬೇಕೆಂದರೆ 1993 ರಲ್ಲಿ ಖುಷ್ಬೂ ಅವರು ತಮಿಳು ಚಿತ್ರರಂಗದ ದಂತಕಥೆ ಶಿವಾಜಿ ಗಣೇಶನ್ ಅವರ ಮಗ ತಮಿಳು ನಟ ಪ್ರಭು ಅವರ ಜೊತೆ ಮದುವೆಯಾಗಿದ್ದರು. ಆದರೆ, ಮಗನ ಮದುವೆಗೆ ಶಿವಾಜಿ ಗಣೇಶನ್ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆಗ ಪ್ರಭು ಅವರು ಬೇರೆ ದಾರಿ ಕಾಣದೆ ಖುಷ್ಬೂವಿಗೆ ವಿಚ್ಛೇದನ ನೀಡಿದ್ದರು. ಆ ನಂತ್ರ 2001ರಲ್ಲಿ ನಿರ್ಮಾಪಕ ಸುಂದರ್ ಸಿ ಅವರನ್ನು ಮದುವೆಯಾಗಿದ್ದರು. ಇದೀಗ ಖುಷ್ಬೂ ಗೆ ಆವಂತಿಕಾ ಹಾಗೂ ಆನಂದಿತಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ಖುಷ್ಬೂ ಅವರನ್ನು ಕನ್ನಡಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಕರೆದುಕೊಂಡು ಬಂದಿದ್ದರು. ಆಗ ಸಣ್ಣ ಪ್ರಾಯದ ಹುಡುಗಿಯಾಗಿದ್ದ ಸುಂದರ ಮುಖದ ಖುಷ್ಬು ಕನ್ನಡದಲ್ಲಿ ಶಾಂತಿ–ಕ್ರಾಂತಿ, ರಣಧೀರದಂತಹ ಸೂಪರ್ ಡೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿ ಸ್ಟಾರ್ ಪಟ್ಟವನ್ನು ಗಟ್ಟಿ ಮಾಡಿಕೊಂಡಿದ್ದಳು. ಅಲ್ಲದೇ ಆಕೆ ಅನೇಕ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.