Arts: ಆರ್ಟ್ಸ್ ಬಳಿಕ ಮುಂದೇನು ಎಂಬ ಯೋಚನೆಯೇ? ಹೆಚ್ಚು ವೇತನದ ಬೆಸ್ಟ್ ಜಾಬ್ಗಳ ಲಿಸ್ಟ್ ಇಲ್ಲಿದೆ
Arts: ಇದೀಗ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗಿದೆ. ಸಾಕಷ್ಟು ಜನರು ಉದ್ಯೋಗದ ಹುಡುಕಾಟದಲ್ಲಿದ್ದಾರೆ. ಇನ್ನು ಕೆಲವರು ಪಿಯುಸಿ ಮುಗಿಸಿ, ಆರ್ಥಿಕ ಸಮಸ್ಯೆಯಿಂದಲೋ, ಮುಂದೆ ಓದಲು ಆಸಕ್ತಿ ಇಲ್ಲದೆಯೋ ತಮ್ಮ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿ ಉದ್ಯೋಗ ಹುಡುಕಲು ಆರಂಭಿಸುತ್ತಾರೆ. ಅಂತಹವರಲ್ಲಿ ಆರ್ಟ್ಸ್(arts) ಓದಿದ ವಿದ್ಯಾರ್ಥಿಗಳಿಗೆ ಹೆಚ್ಚು ವೇತನದ ಬೆಸ್ಟ್ ಜಾಬ್(best jobs) ಗಳು ಇಲ್ಲಿವೆ.
ಪಿಯುಸಿ(puc)ಯಲ್ಲಿ ಕಲಾ ವಿಭಾಗ ಆಯ್ಕೆ ಮಾಡಿ, ವ್ಯಾಸಾಂಗ ಪೂರ್ಣಗೊಳಿಸಿದ ವಿದ್ಯಾರ್ಥಿಗಳು(students) ಮುಂದೇನು? ಎಂಬ ಯೋಚನೆಯಲ್ಲಿದ್ದರೆ ಅಥವಾ ಪಿಯುಸಿ ಬಳಿಕ ಬೇಗನೆ ಉದ್ಯೋಗ ಬಯಸುವ ವಿದ್ಯಾರ್ಥಿಗಳಿಗೆ, ಹಾಗೆಯೇ ಆರ್ಟ್ಸ್ ಮಾಡಿ ಏನೂ ಉದ್ಯೋಗ ಸಿಗಬಹುದು ಎಂದು ಚಿಂತಿತರಾದವರಿಗೆ ಉತ್ತಮ ಜಾಬ್ ಲಿಸ್ಟ್ ಇಲ್ಲಿದೆ. ಬನ್ನಿ ಮಾಹಿತಿ ತಿಳಿಯೋಣ.
ಮೀಡಿಯಾ ಮತ್ತು ಜರ್ನಲಿಸಮ್(media and gernalism) : ಮೀಡಿಯಾ ವರ್ಗಕ್ಕೆ ಹೋಗಲು ಬಯಸುವವರು ಆರ್ಟ್ಸ್ (arts) ಆಯ್ಕೆ ಮಾಡುತ್ತಾರೆ. ಸದ್ಯ ಹೆಚ್ಚು ಬೇಡಿಕೆಯಲ್ಲಿರುವ ವೃತ್ತಿಯಲ್ಲಿ ಇದೂ ಒಂದು. ಬರವಣಿಗೆಯಲ್ಲಿ ಆಸಕ್ತಿ ಇರುವವರಿಗೆ ಉತ್ತಮ ಜಾಬ್ ಆಗಿದೆ. ದಿನಪತ್ರಿಕೆ(news paper), ನಿಯತಕಾಲಿಕೆ, ನ್ಯೂಸ್ ಚಾನೆಲ್ಗಳು(news channel), ಆನ್ಲೈನ್ ಮೀಡಿಯಾ, ರೇಡಿಯೋ(radio) ಸೇರಿದಂತೆ ಹಲವು ಮಾಧ್ಯಮಗಳಲ್ಲಿ ಕೆಲಸಗಳು ಮಾಡಬಹುದು. ಈ ಹುದ್ದೆಗೆ ವಾರ್ಷಿಕ ವೇತನ 2-4 ಲಕ್ಷವರೆಗೆ ಇರುತ್ತದೆ. ಅಲ್ಲದೆ, ಡಿಜಿಟಲ್ ಮಾರ್ಕೆಟಿಂಗ್(digital marketing) ಕೂಡ ಉತ್ತಮ ಉದ್ಯೋಗವಾಗಿದ್ದು, ಇದರಲ್ಲಿ ವಾರ್ಷಿಕ 3.5 ಲಕ್ಷ ವರೆಗೆ ವೇತನ ಪಡೆಯಬಹುದು.
ಫ್ಯಾಷನ್ ಡಿಸೈನರ್ : ಫ್ಯಾಷನ್ ಡಿಸೈನರ್(fashion designer) ಹೆಚ್ಚು ಬೇಡಿಕೆಯಲ್ಲಿರುವ ಹುದ್ದೆಯಾಗಿದೆ. ಇತ್ತೀಚೆಗೆ ಈ ಹುದ್ದೆಗೆ ಎಲ್ಲರೂ ಮುನ್ನುಗ್ಗುತ್ತಿದ್ದಾರೆ. ಫ್ಯಾಷನ್ ಡಿಸೈನರ್ ಕೋರ್ಸ್ ಮಾಡಿ, ಬಹುಬೇಗನೆ ಹುದ್ದೆ ಗಿಟ್ಟಿಸಿಕೊಳ್ಳುತ್ತಾರೆ. ಈ ಹುದ್ದೆಗೆ ಆರಂಭದಲ್ಲೇ ಕನಿಷ್ಠ 3 ಲಕ್ಷ ವಾರ್ಷಿಕ ವೇತನ ಪಡೆಯಬಹುದು. ಪಿಯುಸಿ ಬಳಿಕದ ಬೆಸ್ಟ್ ಹುದ್ದೆಯಲ್ಲಿ ಇದೂ ಒಂದು.
ಗ್ರಾಫಿಕ್ ಡಿಸೈನರ್ : ಕೆಲವರಿಗೆ ಈ ಸ್ಕಿಲ್ ಮೊದಲಿನಿಂದಲೂ ಇರುತ್ತದೆ. ಹಾಗಾಗಿ ಬೇಗನೆ ಹುದ್ದೆಗೆ ಹೊಂದಿಕೊಳ್ಳುತ್ತಾರೆ. ಈ ಹುದ್ದೆ ಸದ್ಯ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯಲ್ಲಿರುವ ಹುದ್ದೆಯಲ್ಲಿ ಒಂದಾಗಿದೆ. NID, IIAD, Pearl Academy Entrance ಪ್ರವೇಶ ಪರೀಕ್ಷೆಯನ್ನು ಬರೆದು ಪದವಿ ಓದಿ, ನಂತರ ಮಾರ್ಕೆಟಿಂಗ್ ಹಾಗೂ ಜಾಹಿರಾತು ಗ್ರಾಫಿಕ್ ಡಿಸೈನಿಂಗ್(graphic designer), ಯೂಸರ್ ಇಂಟರ್ಫೇಸ್ ಗ್ರಾಫಿಕ್ ಡಿಸೈನ್, ಮೋಷನ್ ಗ್ರಾಫಿಕ್ ಡಿಸೈನ್ ಹೀಗೆ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸಬಹುದು. ಈ ಹುದ್ದೆಗೆ ವಾರ್ಷಿಕ ವೇತನ 2 ಲಕ್ಷ ಸಿಗಲಿದೆ. ಹಾಗೆಯೇ ಯೂಸರ್ ಎಕ್ಸ್ಪೀರಿಯನ್ಸ್ ಡಿಸೈನರ್(UX designer) ಹುದ್ದೆ ಕೂಡ ಬೇಡಿಕೆಯಲ್ಲಿದ್ದು, ಇದರ ವಾರ್ಷಿಕ ವೇತನ 5 ಲಕ್ಷ ಆಗಿದೆ.
ಅನಿಮೇಷನ್ : ಕಂಟೆಂಟ್ ಕ್ರಿಯೆಟರ್(content creater) ಗಳಿಗೆ ಇತ್ತಿಚೆಗೆ ಹೆಚ್ಚು ಬೇಡಿಕೆ ಇದೆ. ಅದರಲ್ಲೂ ವಿಷುವಲ್ ಕಂಟೆಂಟ್ ಕ್ರಿಯೇಟರ್ಗಳಿಗೆ ಬೇಡಿಕೆ ಹೆಚ್ಚಿದೆ. ಗೇಮಿಂಗ್ ಇಂಡಸ್ಟ್ರಿ, ವಿಎಫ್ಎಕ್ಸ್, ಅನಿಮೇಟರ್ಸ್, ಇಲ್ಲುಸ್ಟ್ರೇಟರ್ ಗಳೆಲ್ಲವೂ ಕೂಡ ಅನಿಮೇಟರ್ ಜಾಬ್ಗಳೇ. ಅನಿಮೇಟರ್ ಆಗಲು ಬಿಎ ಅಥವಾ ಡಿಪ್ಲೊಮ(diploma) ದಲ್ಲಿ ಅನಿಮೇಷನ್ ಮತ್ತು ಮಲ್ಟಿಮೀಡಿಯಾ ಕೋರ್ಸ್ ಓದಬೇಕು. ಇಲ್ಲವೇ ಬಿಎಸ್ಸಿ ಇನ್ಅನಿಮೇಷನ್ (animation) ಕೋರ್ಸ್ ಮಾಡಬೇಕು. ಈ ಜಾಬ್ ಗೆ ಸಂಬಳ ಎಷ್ಟು ಗೊತ್ತಾ? ವಾರ್ಷಿಕ ವೇತನ 5.7 ಲಕ್ಷವರೆಗೆ ಇರಲಿದೆ.
ವಕೀಲ ವೃತ್ತಿ : ಏನೇ ಕೋರ್ಟ್ ಸಮಸ್ಯೆಗಳಿದ್ದರೂ ವಕೀಲ(lawyer) ರು ಬೇಕೇ ಬೇಕು. ವಕೀಲ ವೃತ್ತಿ ಯಾವತ್ತಿಗೂ ಬೇಡಿಕೆ ಕಳೆದುಕೊಳ್ಳದ ವೃತ್ತಿ. ಹೆಚ್ಚಿನವರು ಆರ್ಟ್ಸ್ ಆಯ್ಕೆ ಮಾಡುವುದೇ ವಕೀಲರಾಗಲು. ಲಾಯರ್ ಆಗಲು ಮೊದಲು CLAT, LSAT ಪ್ರವೇಶ ಪರೀಕ್ಷೆ ಬರೆದು ಅರ್ಹತೆ ಪಡೆಯಬೇಕು. ನಂತರ ಕಾನೂನು ಪದವಿ ಓದಬೇಕು. ನಂತರ ನಿಮಗಿಷ್ಟದ ಕಾನೂನು ವಿಭಾಗಗಳನ್ನು ಆಯ್ಕೆ ಮಾಡಿ, ಅಭ್ಯಾಸ ಮಾಡಬಹುದು. ಈ ಹುದ್ದೆಗೆ ವೇತನ ಸಿಗಲಿದೆ.
ಹೋಟೆಲ್ ಮ್ಯಾನೇಜ್ಮೆಂಟ್(hotel management) : ಹೆಚ್ಚಿನ ಯುವಕರು ಈ ಹುದ್ದೆಗೆ ಸೇರಲು ಬಯಸುತ್ತಾರೆ. ಈ ಹುದ್ದೆಯಲ್ಲಿ ಕುಕ್ಕಿಂಗ್(cooking), ಹೋಟೆಲ್ ನಿರ್ವಹಣೆ, ಸಪ್ಲೇಯರ್ ಕೆಲಸಗಳಿರುತ್ತದೆ. ಅಡುಗೆ ವಿಷಯದಲ್ಲಿ ಆಸಕ್ತರು ಈ ಹುದ್ದೆಗೆ ಸೇರುತ್ತಾರೆ. ಇದರ ವಾರ್ಷಿಕ ವೇತನ 3-5 ಲಕ್ಷವರೆಗೆ ಆಗಿದೆ.
ಶಿಕ್ಷಕ(teacher) ವೃತ್ತಿ: ದ್ವಿತೀಯ ಪಿಯುಸಿಯಲ್ಲಿ ಆರ್ಟ್ಸ್ ಆಯ್ಕೆ ಮಾಡಿ, ಪಾಸಾದವರು ನಂತರ ಪದವಿ ಪಡೆದು ಬಿ.ಇಡಿ(b.ed) ಶಿಕ್ಷಣ ಪಡೆದು ಶಿಕ್ಷಕರಾಗಬಹುದು. ಈ ವೃತ್ತಿಯಲ್ಲಿ ಗೌರವದ ಜೊತೆಗೆ ಉತ್ತಮ ವೇತನ ಸಿಗುತ್ತದೆ. ಮಕ್ಕಳಿಗೆ ಶಿಕ್ಷಣ ನೀಡಿದ ಶ್ರೇಯಸ್ಸು ಲಭಿಸುತ್ತದೆ.
ಸರ್ಕಾರಿ ಸೇವಾ ಹುದ್ದೆಗಳು : ಪಿಯುಸಿ ನಂತರವೆ ಹೆಚ್ಚಿನ ಸರ್ಕಾರದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಇರೋದು. ಆ ನಂತರವೇ ರಾಜ್ಯ ಸರ್ಕಾರದ(state government), ಕೇಂದ್ರ ಸರ್ಕಾರದ(central government) ಹಲವು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಪಿಯುಸಿ ಯಲ್ಲಿ ಆರ್ಟ್ ಮಾಡಿದರವರು, ನಂತರ ಬಿಎ ಮಾಡಿ, ಗ್ರೇಡ್ ಎ, ಗ್ರೇಡ್ ಬಿ ಸೇವೆಗಳಿಗೆ ಸಿದ್ಧತೆ ನಡೆಸಿ ಪರೀಕ್ಷೆ ಪಾಸ್ ಮಾಡಿ, ಸಿವಿಲ್ ಸೇವೆ ಅಧಿಕಾರಿ ಆಗಬಹುದು. ಈ ಹುದ್ದೆಗೆ ವಾರ್ಷಿಕ 6 ಲಕ್ಷವರೆಗೆ ವೇತನ ಇರಲಿದೆ. ಅಷ್ಟೇ ಅಲ್ಲ,
ಸರ್ಕಾರದ ಹಲವು ಸೌಲಭ್ಯಗಳೂ ಸಿಗಲಿದೆ.