Vastu Tips: ಮನೆಯಲ್ಲಿನ ನಲ್ಲಿಯನ್ನು ಯಾವ ದಿಕ್ಕಿನಲ್ಲಿ ಇರಿಸಿದ್ದೀರಿ? ವಾಸ್ತು ಶಾಸ್ತ್ರ ಏನು ಹೇಳುತ್ತೆ?
Vastu Tips: ಹಿಂದೂ ಸಂಸ್ಕೃತಿಯಲ್ಲಿ ವಾಸ್ತುಶಾಸ್ತ್ರಕ್ಕೆ ಸಾಕಷ್ಟು ಮಹತ್ವ ನೀಡಲಾಗುತ್ತದೆ. ಮನೆಕಟ್ಟಬೇಕಾದರೆ ಬಾಗಿಲು, ಕಿಟಕಿ ಸೇರಿದಂತೆ ಯಾವುದು ಯಾವ ದಿಕ್ಕಿನಲ್ಲಿ ಇರಬೇಕು ಎಂಬುದನ್ನು ತಿಳಿದುಕೊಂಡು ಮುಂದಿನ ಹೆಜ್ಜೆಯಿಡುತ್ತಾರೆ. ವಾಸ್ತು ಶಾಸ್ತ್ರ (Vastu Shastra)ದ ಪ್ರಕಾರ, ಕೆಲವೊಂದು ಕೆಲವು ದಿಕ್ಕಿನಲ್ಲಿ ಮಾತ್ರವೇ ಇಡಬೇಕು. ಆಗ ಮಾತ್ರ ಮನೆ, ಮನೆಯವರಿಗೆ ಶ್ರೇಯಸ್ಸು. ಹಾಗಾದ್ರೆ ನಿಮ್ಮ ಮನೆಯಲ್ಲಿನ ನಲ್ಲಿಗಳು ಯಾವ ದಿಕ್ಕಿನಲ್ಲಿವೆ? ವಾಸ್ತು ಶಾಸ್ತ್ರದ ಪ್ರಕಾರ ಯಾವ ದಿಕ್ಕಿನಲ್ಲಿರಬೇಕು (Vastu Tips) ಎಂಬುದನ್ನು ನೋಡೋಣ.
ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿನ ನೀರಿನ ನಲ್ಲಿ ಮನೆಯ ದಕ್ಷಿಣ ಮತ್ತು ಪಶ್ಚಿಮ ದಿಕ್ಕಿನಲ್ಲಿ ಇರಬಾರದು. ಇದ್ದರೆ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ನೀರಿನ ವ್ಯವಸ್ಥೆ ಕಡಿಮೆಯಾಗಬಹುದು. ಹಾಗಾಗಿ ಉತ್ತರ ಮತ್ತು ಪೂರ್ವ ದಿಕ್ಕುಗಳಲ್ಲಿ ನಲ್ಲಿಯನ್ನು ಸ್ಥಾಪಿಸಬೇಕು. ಇದರಿಂದ ಬೇಕಾಗುವಷ್ಟು ನೀರು, ಮನಸ್ಸಿಗೆ ನೆಮ್ಮದಿ ದೊರಕುತ್ತದೆ. ಮನೆಯಲ್ಲಿ ಸಂತೋಷ ನೆಲೆಸುತ್ತದೆ.
ಹಾಗೆಯೇ ಕೈ ತೊಳೆಯುವ ಸಿಂಕ್ ಎಲ್ಲಾ ಮನೆಯಲ್ಲೂ ಇರುತ್ತದೆ.
ನಲ್ಲಿಯ ಹಾಗೇ ಕೈ ತೊಳೆಯುವ ಸಿಂಕ್ ಅನ್ನು ಇರಿಸುವಾಗಲೂ ದಿಕ್ಕುಗಳನ್ನು ನೋಡಬೇಕು. ವಾಸ್ತು ಶಾಸ್ತ್ರದ ಪ್ರಕಾರ, ಅಡುಗೆಮನೆಯಲ್ಲಿ ನಲ್ಲಿ ಮತ್ತು ಸಿಂಕ್ ಗಳನ್ನು ಉತ್ತರ ಮತ್ತು ಈಶಾನ್ಯ ದಿಕ್ಕಿನ ನಡುವೆ ಇರಿಸಬೇಕು. ಅಡುಗೆ ಮನೆ ಅನ್ನಪೂರ್ಣ ದೇವಿ ಹಾಗೂ ಅಗ್ನಿ ದೇವನ ನೆಲೆಸುವ ಸ್ಥಳವಾಗಿದೆ. ಇಲ್ಲವಾದರೆ ಆರ್ಥಿಕ ಅಥವಾ ಹಣ ಸಂಬಂಧಿತ ಸಮಸ್ಯೆಗಳು ಎದುರಾಗಬಹುದು.
ಮನೆಯಲ್ಲಿ ಪ್ರತಿಯೊಂದು ವಸ್ತುಗಳನ್ನು ವಾಸ್ತು ಶಾಸ್ತ್ರದ ಪ್ರಕಾರ ಅಳವಡಿಸೋದು ಒಳ್ಳೆಯದು. ಯಾಕಂದ್ರೆ ಇದು ಮನೆಯ ಸಮೃದ್ಧಿ ಉಂಟುಮಾಡುತ್ತದೆ. ಆರ್ಥಿಕವಾಗಿ ಸಬಲರಾಗಲು ಸಹಕಾರಿಯಾಗಿದೆ. ಹೂವಿನ ಗಿಡಗಳು, ಕಿಟಕಿ, ಬಾಗಿಲು, ದೇವರ ಫೋಟೋ ಇವೆಲ್ಲದ್ದಕ್ಕೂ ವಾಸ್ತು ಅಂತ ಇರುತ್ತದೆ. ಈ ದಿಕ್ಕಿನಲ್ಲೇ ಇರಿಸಬೇಕು ಎಂದಿರುತ್ತದೆ. ಆ ದಿಕ್ಕಿನಲ್ಲೇ ಇಟ್ಟರೆ ಒಳಿತು ಲಭಿಸುತ್ತದೆ.