India Weather Updates : ಕರ್ನಾಟಕದಲ್ಲಿ ಚಳಿ, ಹಲವು ರಾಜ್ಯಗಳಲ್ಲಿ ಮಳೆ ಸಾಧ್ಯತೆ!

India Weather Updates :ಸದ್ಯ ದೆಹಲಿ-ಎನ್‌ಸಿಆರ್‌ನಲ್ಲಿ ಮೋಡ ಕವಿದ ವಾತಾವರಣವಿದ್ದರೂ ಮಳೆ ದೂರವಾಗಿದ್ದು, ಅದಲ್ಲದೆ ಹವಾಮಾನ ಇಲಾಖೆ (IMD) ಪಶ್ಚಿಮ ಮತ್ತು ಮಧ್ಯ ಭಾರತದಲ್ಲಿ ಮಳೆ ಮತ್ತು ಆಲಿಕಲ್ಲು ಮಳೆಯ ಮುನ್ಸೂಚನೆ (India Weather Updates) ನೀಡಿದೆ. ಆದರೆ ದೆಹಲಿಯ ವಾತಾವರಣ ಹಿತಕರವಾಗಿದ್ದು, ಭಾನುವಾರವೂ (Sunday ) ಭಾಗಶಃ ಮೋಡ ಕವಿದ ವಾತಾವರಣವಿದ್ದು, ಗರಿಷ್ಠ ತಾಪಮಾನವು ಸುಮಾರು 31 ಡಿಗ್ರಿ ಮತ್ತು ಕನಿಷ್ಠ ತಾಪಮಾನವು 15 ಡಿಗ್ರಿಗಳಷ್ಟು ಇರಬಹುದು ತಿಳಿಸಿದೆ.

ಶನಿವಾರ ಮಾರ್ಚ್ 4ರಂದು ದಿನವಿಡೀ ಜೋರಾಗಿ ಬೀಸುತ್ತಿದ್ದ ಚಳಿಗಾಳಿ ಬಿಸಿಲಿನ ತಾಪಕ್ಕೆ ಹಿತ ನೀಡಿದೆ. ಆದರೆ ಗಾಳಿಯ ಹೊರತಾಗಿಯೂ, ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚಿತ್ತು. ಶನಿವಾರ (Saturday ) ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿರುವ ಕಾರಣ ಜನರು ಬಿಸಿಲಿನ ತಾಪದಿಂದ ಕೊಂಚ ಸಮಾಧಾನ ಗೊಂಡಿದ್ದಾರೆ. ಗಾಳಿಯಿಂದಾಗಿ, ಸುಮಾರು ಆರು ದಿನಗಳ ನಂತರ ತಾಪಮಾನವು 30 ಡಿಗ್ರಿಗಿಂತ ಕಡಿಮೆಯಾಗಿದೆ.

ಸದ್ಯ ಮಾರ್ಚ್ 6 ರಂದು ತಾಪಮಾನದಲ್ಲಿ ಸ್ವಲ್ಪ ಇಳಿಕೆಯಾಗಲಿದ್ದು, ಈ ದಿನದ ಗರಿಷ್ಠ ತಾಪಮಾನವು ಸುಮಾರು 30 ಡಿಗ್ರಿ ಮತ್ತು ಕನಿಷ್ಠ ತಾಪಮಾನವು ಸುಮಾರು 16 ಡಿಗ್ರಿ ಆಗಿರಬಹುದು. ಮತ್ತೊಂದೆಡೆ, ಮಾರ್ಚ್ 7 ರಿಂದ 10 ರವರೆಗೆ ಗರಿಷ್ಠ ತಾಪಮಾನವು 32 ರಿಂದ 33 ಡಿಗ್ರಿ ಮತ್ತು ಕನಿಷ್ಠ ತಾಪಮಾನವು 15 ಡಿಗ್ರಿಗಳಷ್ಟು ಇರಬಹುದು ಎಂದು ಹವಾಮಾನ ಇಲಾಖೆಯು ವರದಿ ನೀಡಿದೆ.

ಇನ್ನು ಭಾರತೀಯ (India ) ಹವಾಮಾನ ಇಲಾಖೆಯು (IMD) ಹೋಳಿಗೆ ಮುನ್ನ ರಾಜಸ್ಥಾನ ಸೇರಿದಂತೆ ಪಶ್ಚಿಮ ಮತ್ತು ಮಧ್ಯ ಭಾರತದ ಹೆಚ್ಚಿನ ಭಾಗಗಳಲ್ಲಿ ಭಾರೀ ಮಳೆ ಮತ್ತು ಆಲಿಕಲ್ಲು ಮಳೆಯ ಮುನ್ಸೂಚನೆ ನೀಡಿದೆ. ಅಲ್ಲದೆ ಮಾರ್ಚ್(March ) 4-8 ರವರೆಗೆ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ, ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ ಸಾಧಾರಣ ಮಳೆಯಾಗಬಹುದು ಎನ್ನಲಾಗಿದೆ.

ಸದ್ಯ ಎಚ್​ಎಎಲ್​ನಲ್ಲಿ 30.8 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 17.4 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ನಗರದಲ್ಲಿ 31.4 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 16.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್​ನಲ್ಲಿ 30.5 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 16.9 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಒಟ್ಟಿನಲ್ಲಿ ಹವಾಮಾನ ಇಲಾಖೆ ಪ್ರಕಾರ, ಮಾರ್ಚ್ 8 ರವರೆಗೆ ಪೂರ್ವ ರಾಜಸ್ಥಾನ, ಪಶ್ಚಿಮ ಮಧ್ಯಪ್ರದೇಶ, ಗುಜರಾತ್, ಮರಾಠವಾಡ ಮತ್ತು ಮಧ್ಯ ಮಹಾರಾಷ್ಟ್ರದಲ್ಲಿ ಇದೇ ರೀತಿಯ ಹವಾಮಾನದ ಸಾಧ್ಯತೆಯಿದೆ.
ಕರ್ನಾಟಕದಲ್ಲಿ ಸ್ವಲ್ಪ ಚಳಿ ಮುಂದುವರೆಯಲಿದೆ ಎಂದು ವರದಿ ನೀಡಿದೆ.

Leave A Reply

Your email address will not be published.