Home National Amazon holi festival sale 2023 : ಅಮೆಜಾನ್ ನಲ್ಲಿ ರಿಯಾಯಿತಿಯೊಂದಿಗೆ ಸಿಗಲಿದೆ ಈ ಇಯರ್‌ಬಡ್ಸ್‌

Amazon holi festival sale 2023 : ಅಮೆಜಾನ್ ನಲ್ಲಿ ರಿಯಾಯಿತಿಯೊಂದಿಗೆ ಸಿಗಲಿದೆ ಈ ಇಯರ್‌ಬಡ್ಸ್‌

Amazon holi festival sale 2023

Hindu neighbor gifts plot of land

Hindu neighbour gifts land to Muslim journalist

Amazon holi festival sale :ಇ-ಕಾಮರ್ಸ್‌ ದೈತ್ಯ ಅಮೆಜಾನ್‌ ಗ್ರಾಹಕರಿಗೆ ಹೊಸ ಆಫರ್ ಗಳನ್ನು ನೀಡುತ್ತಲೇ ಬಂದಿದ್ದು, ಈ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಲೇ ಬಂದಿದೆ. ಅದರಲ್ಲೂ ವಿಶೇಷ ದಿನಕ್ಕೆ ಬಂಪರ್ ಆಫರ್ ನೀಡುವ ಮೂಲಕ ಮತ್ತಷ್ಟು ಗಮನಸೆಳೆಯುತ್ತಿದೆ. ಅದರಂತೆ ಇದೀಗ ಹೋಳಿ ಸೇಲ್‌ 2023 ನಡೆಸುತ್ತಿದೆ.

ಈ ಫೆಸ್ಟಿವಲ್ ಸೇಲ್ ನಲ್ಲಿ (Amazon holi festival sale) ಹೆಚ್ಚಿನ ರಿಯಾಯಿತಿಯೊಂದಿಗೆ ಸ್ಮಾರ್ಟ್‌ಡಿವೈಸ್‌ಗನ್ನು ಸೇಲ್‌ ಮಾಡುತ್ತಿವೆ. ಹೌದು. ಉಡುಗೊರೆಗಳನ್ನು ನೀಡಲು ಇದು ಉತ್ತಮ ಸಮಯವಾಗಿದ್ದು, ಕೈಗೆಟಕುವ ದರದಲ್ಲಿ ಇಯರ್‌ಬಡ್ಸ್‌ ಖರೀದಿ ಮಾಡಬಹುದಾಗಿದೆ.

ಅಮೆಜಾನ್‌ನಲ್ಲಿ ಪ್ರಮುಖವಾಗಿ ಇಯರ್‌ಬಡ್ಸ್‌ಗೆ ಹೆಚ್ಚಿನ ಡಿಸ್ಕೌಂಟ್‌ ನೀಡಲಾಗಿದ್ದು, ಇದರಲ್ಲಿ ಆಪಲ್, ಒಪ್ಪೋ, ಜಬ್ರಾ, ಸ್ಯಾಮ್‌ಸಂಗ್‌ನ ಪ್ರಮುಖ ಬ್ರ್ಯಾಂಡ್‌ಗಳ ಇಯರ್‌ಫೋನ್‌ಗಳು ಸಹ ಇವೆ. ಆಪಲ್‌ ಇಯರ್‌ಬಡ್ಸ್‌ ಮೂಲ ದರ 14,900 ರೂ. ಗಳ ಬೆಲೆ ಹೊಂದಿದ್ದು, ಈ ಆಫರ್‌ ನಲ್ಲಿ 11,990 ರೂ. ಗಳಿಗೆ ಖರೀದಿ ಮಾಡಬಹುದು. ಈ ಮೂಲಕ ಈ ಬಡ್ಸ್‌ಗೆ 2,910 ರೂ. ಗಳ ರಿಯಾಯಿತಿ ಲಭ್ಯವಾಗಲಿದೆ.

ಒಪ್ಪೋ ಕಂಪೆನಿಯ ಒಪ್ಪೋ ಎನ್ಕೋ X2 ಅನ್ನು ಸಹ ಕೈಗೆಟಕುವ ದರದಲ್ಲಿ ಖರೀದಿ ಮಾಡಬಹುದಾಗಿದ್ದು. ಇದರ ಮೂಲ ದರ 10,999 ರೂ. ಗಳಾಗಿದೆ, ನೀವು 9,999 ರೂ. ಗಳಿಗೆ ಇದನ್ನು ಖರೀದಿ ಮಾಡಬಹುದಾಗಿದ್ದು, ಈ ಬಡ್ಸ್‌ ಮೇಲೆ ಒಂದು ಸಾವಿರ ರೂ. ಗಳ ರಿಯಾಯಿತಿಯಲ್ಲಿ ಲಭ್ಯವಾಗಲಿದೆ.

ಹಾಗೆಯೇ ಜಬ್ರಾ ಎಲೈಟ್ 5 ಅನ್ನು ನೀವು ಈಗ 10,999 ರೂ.ಗಳಿಗೆ ಖರೀದಿ ಮಾಡಬಹುದಾಗಿದ್ದು, ಈ ಮೂಲಕ 4,000 ರೂ. ಗಳ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಈ ಬಡ್ಸ್‌ ಉತ್ತಮ ಬ್ಯಾಟರಿ ಬಾಳಿಕೆಗೆ ಹೆಸರಾಗಿದ್ದು, ಅತ್ಯುತ್ತಮ ಸೌಂಡ್‌ ಗುಣಮಟ್ಟದ ಆಯ್ಕೆ ಹಾಗೂ ಹೆಚ್ಚಿನ ಬೇಸ್‌ ಆಯ್ಕೆಯನ್ನು ಹೊಂದಿದೆ.

ಒನ್‌ಪ್ಲಸ್ ಬಡ್ಸ್‌ ಪ್ರೊ 2 ಇಯರ್‌ಬಡ್ಸ್ ಅನ್ನು ಖರೀದಿ ಮಾಡಬಹುದು. ಈ ಸೇಲ್‌ನಲ್ಲಿ ಇದಕ್ಕೆ ಯಾವುದೇ ರಿಯಾಯಿತಿ ನೀಡಿಲ್ಲ. ಆದರೆ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ ಬಳಕೆ ಮಾಡಿಕೊಂಡು 1,000 ರೂ. ಗಳ ವರೆಗೆ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಹಾಗೆಯೇ, ಸ್ಯಾಮ್‌ಸಂಗ್‌ ಇಯರ್‌ಬಡ್ಸ್ ಮೂಲ ದರ 10,999 ರೂ. ಗಳಾಗಿದೆ. ಆದರೆ,ಈ ಆಫರ್‌ನಲ್ಲಿ ನೀವು 5,999 ರೂ. ಗಳ ಆಫರ್‌ ಬೆಲೆಗೆ ಖರೀದಿ ಮಾಡಬಹುದಾಗಿದೆ.