Roopesh Shetty : ಕಿರುತೆರೆಗೆ ಕಾಲಿಟ್ಟ ಬಿಗ್‌ಬಾಸ್‌ ವಿನ್ನರ್‌, ಎವರ್‌ ಚಾರ್ಮಿಂಗ್‌ ರೂಪೇಶ್‌ ಶೆಟ್ಟಿ! ಯಾವ ಸೀರಿಯಲ್‌? ಯಾವ ಪಾತ್ರ? ಇಲ್ಲಿದೆ ಕಂಪ್ಲೀಟ್‌ ವಿವರ

Share the Article

Roopesh shetty: ಕುಡ್ಲದ ಕುವರ ರೂಪೇಶ್ ಶೆಟ್ಟಿ(Roopesh shetty) ಬಿಗ್‌ಬಾಸ್ ಸೀಸನ್ 9ರಲ್ಲಿ ಸಾಕಷ್ಟು ಮೋಜು, ಮಸ್ತಿ ಮೂಲಕ ಜನರಿಗೆ ಮನರಂಜನೆ ನೀಡುತ್ತಾ ಜನಮನಗೆದ್ದು, ಬಿಗ್ ಬಾಸ್ ಸೀಸನ್ 9(bigg boss season9)ರ ಟ್ರೋಫಿಯನ್ನು ಗೆದ್ದು, ಎಲ್ಲರ ಫೆವರೇಟ್‌ ಆಗಿಬಿಟ್ಟಿದ್ದರು. ಬಿಗ್ ಬಾಸ್ ಬಳಿಕ ರೂಪೇಶ್ ಶೆಟ್ಟಿ ಏನು ಮಾಡುತ್ತಿದ್ದಾರೆ? ಎಂಬ ಪ್ರಶ್ನೆಗಳು ಹರಿದಾಡುತ್ತಿದ್ದವು. ಈ ಮಧ್ಯೆ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ದುಬೈ(Dubai)ಗೆ ಹೋಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಾಗಿತ್ತು. ಇದೀಗ ಮತ್ತೆ ರೂಪೇಶ್ ಸುದ್ದಿಯಾಗಿದ್ದಾರೆ. ಯಾಕೆ? ಏನು ಸುದ್ದಿ ಗೊತ್ತಾ? ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ಕಿರುತೆರೆಗೆ ಮರಳಿದ್ದಾರೆ. ಇದೇನಪ್ಪ ಸೀರಿಯಲ್‌ ಅಂದ್ಕೊಂಡ್ರಾ? ಹಾಗಾದರೆ ಏನಿದು ವಿಷಯ? ಬನ್ನಿ ತಿಳಿಯೋಣ!

ಬಿಗ್ ಬಾಸ್ ಸೀಸನ್ 9ರಲ್ಲಿ ಘಟಾನುಘಟಿ ಸ್ಪರ್ಧಿಗಳೊಡನೆ ಪೈಪೋಟಿ ನಡೆಸಿ, ವಿನ್ನರ್ ಪಟ್ಟ ಮುಡಿಗೇರಿಸಿಕೊಂಡ ರೂಪೇಶ್ ಶೆಟ್ಟಿ ಇದೀಗ ಮತ್ತೆ ಕಿರುತೆರೆಗೆ ಕಾಲಿಟ್ಟಿದ್ದಾರೆ. ದೊಡ್ಮನೆಯಲ್ಲಿ ಹಾಡು, ಡ್ಯಾನ್ಸ್ ಮೂಲಕ ಜನಮನಗೆದ್ದ ರೂಪೇಶ್ ಶೆಟ್ಟಿ, ಇದೀಗ ‘ಒಲವಿನ ನಿಲ್ದಾಣ'(Olavina Nildana) ಸೀರಿಯಲ್ ಮೂಲಕ ಕಿರುತೆರೆಗೆ ಮರಳಿದ್ದಾರೆ.

ದೊಡ್ಮನೆಯಿಂದ ಹೊರಬಂದ ಬಳಿಕ ಶೆಟ್ರು ಫುಲ್ ಬ್ಯುಸಿಯಾಗಿದ್ದಾರೆ. ಬಿಗ್‌ಬಾಸ್‌ ಮನೆಯಿಂದ ಹೊರಬಂದ ನಂತರ ಇವರು ನಟಿಸಿದ `ಮಂಕು ಭಾಯಿ ಫಾಕ್ಸಿ ರಾಣಿ’ ಚಿತ್ರದ ಮೂಲಕ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಬಿಗ್ ಬಾಸ್‌ಗೆ ಹೋಗುವ ಮೊದಲೇ ಚಿತ್ರೀಕರಣವಾಗಿತ್ತು ಎನ್ನಲಾಗಿದೆ. ಈಗ ರೂಪೇಶ್ ಶೆಟ್ಟಿ ಅವರು ಕಿರುತೆರೆಯಲ್ಲಿ ಕಾಣಸಿಗಲಿದ್ದಾರೆ.

ರೂಪೇಶ್ `ಒಲವಿನ ನಿಲ್ದಾಣ’ ಸೀರಿಯಲ್ ಮೂಲಕ ಕಿರುತೆರೆಗೆ ಮರಳಿದ್ದಾರೆ. ಕಥಾನಾಯಕಿ ತಾರಿಣಿಯ ಸಮಸ್ಯೆಯನ್ನು ಬಗೆಹರಿಸುವುದಕ್ಕೆಂದು ಅತಿಥಿಯ ಪಾತ್ರಧಾರಿಯಾಗಿ ರೂಪೇಶ್ ಶೆಟ್ಟಿ ಸಿರಿಯಲ್ ಗೆ ಎಂಟ್ರಿ ಕೊಡಲಿದ್ದಾರೆ. ನಾಯಕಿಯು ಧೀರಜ್ ಮತ್ತು ಸಿದ್ಧಾಂತ್ ಇವರಿಬ್ಬರಲ್ಲಿ ಯಾರನ್ನು ಮದುವೆಯಾಗಲಿ, ಒಬ್ಬ ತನಗಿಷ್ಟ, ಇನ್ನೊಬ್ಬ ಮನೆಯವರಿಗಿಷ್ಟ ಹಾಗಾಗಿ ತಾರಿಣಿಗೆ ಏನೂ ತೋಚದೆ, ಗೊಂದಲದಲ್ಲಿರಬೇಕಾದರೆ ಅದನ್ನು ಪರಿಹರಿಸಲು ರೂಪೇಶ್ ಶೆಟ್ಟಿ ಕಿರುತೆರೆಗೆ ಎಂಟ್ರಿ ಕೊಡಲಿದ್ದಾರೆ.

ಇದರ ಪ್ರೋಮೋ ಕೂಡ ರಿಲೀಸ್ ಆಗಿದ್ದು, ಸೀರಿಯಲ್ ನಲ್ಲಿ ರೂಪೇಶ್ ಶೆಟ್ಟಿ ಆರ್‌ಜೆ ಆಗಿ ಕಾಣಿಸಿಕೊಂಡಿದ್ದಾರೆ. ಶೆಟ್ರ ಆರ್‌ಜೆ(RJ) ಗೆಟಪ್ ಸಖತ್ ಆಗಿದ್ದು, ತೆರೆ ಮೇಲೆ ಅವರ ಪಾತ್ರ ನೋಡಲು ಜನರು ಕಾದು ಕುಳಿತಿದ್ದಾರೆ ಎಂದರೆ ತಪ್ಪೇನಿಲ್ಲ.

Leave A Reply