Twitter Boss Elan Musk | ಪುರುಷರ ಹಕ್ಕುಗಳ ಕಾರ್ಯಕರ್ತರಿಂದ ಟ್ವಿಟ್ಟರ್ ಬಾಸ್ ಎಲೋನ್ ಮಸ್ಕ್‌ಗೆ ವಿಶೇಷ ಪೂಜೆ : ‘ಟ್ವಿಟ್ಟರ್ ಡಿಫೆಮಿನಿಸ್ಟರಾಯ ನಮಃ, ಓಂ ಫೆಮಿನಿಸ್ಟ್ ಎವಿಕ್ಟೋರಾಯ ನಮಃ ‘ ಎಂದು ಅಗರಬತ್ತಿಯೂ ಹತ್ತಿಸಿ ಪೂಜೆ
Twitter Boss Elan Musk :ಬೆಂಗಳೂರಿನ ಫ್ರೀಡಂ ಪಾರ್ಕ್ ದಿನಂಪ್ರತಿ ಹಲವಾರು ವಿಭಿನ್ನ ರೀತಿಯ ಪ್ರತಿಭಟನೆಗಳಿಗೆ ಆತಿಥ್ಯ ನೀಡುತ್ತದೆ. ಫ್ರೀಡಂ ಪಾರ್ಕ್ ಎನ್ನುವುದು ಎಲ್ಲಾ ರೀತಿಯ- ಒಳ್ಳೆಯ, ಕೆಟ್ಟ, ನೋವಿನ ಮತ್ತು ತಮಾಷೆಯ ಸಂಗತಿಗಳಿಗೆ ಕೂಡಾ ಸಾಂಗತ್ಯವನ್ನು ಒದಗಿಸುತ್ತದೆ. ಅದೇ ರೀತಿ ಮೊನ್ನೆ ಸೋಮವಾರ, ಬಿಲಿಯನೇರ್ ಮತ್ತು ಟ್ವಿಟರ್ ಮಾಲೀಕ ಎಲೋನ್ ಮಸ್ಕ್ ಅವರಿಗೆ ‘ ವಿಶೇಷ ಪೂಜೆ’ ಮಾಡಲು ಅದೊಂದು ಗುಂಪು ಈ ಸ್ಥಳವನ್ನು ಆಯ್ಕೆ ಮಾಡಿದೆ. ‘ಸೇವ್ ಇಂಡಿಯನ್ ಫ್ಯಾಮಿಲಿ ಫೌಂಡೇಶನ್ (SIFF)’ ಬ್ಯಾನರ್ ಅಡಿಯಲ್ಲಿ ಈ ಗುಂಪು, ಎಲಾನ್ ಮಸ್ಕ್ ಅನ್ನು ಹೊಗಳುತ್ತಾ ಮಂತ್ರಗಳನ್ನು ಪಠಿಸಿದೆ. ದೇವರ ಸ್ಥಾನದಲ್ಲಿ ನಿಂತು ವಿಶ್ವದ ನಂಬರ್ ಒನ್ ಶ್ರೀಮಂತ ಎಲಾನ್ ಮಸ್ಕ್ ಅವರು ಪೂಜೆ ಮಾಡಿಸಿಕೊಂಡಿದ್ದಾರೆ.
ಎಲಾನ್ ಮಸ್ಕ್ ಗೆ ಪೂಜೆ ಮಾಡಿದ್ದು ಯಾಕೆ ಎಂಬ ಅನುಮಾನವೇ ? ಏಕೆಂದರೆ ಅವರು MRA ಗಳು (Man rights association) ಅಂದರೆ ‘ಪುರುಷರ ಹಕ್ಕುಗಳ ಕಾರ್ಯಕರ್ತ’ ರಿಗೆ ಮಸ್ಕ್ ಅವರು ಹೊಸ ಜೀವನವನ್ನು ನೀಡಿದ್ದಾರೆ. ಈ ಟ್ವಿಟ್ಟರ್ ಬಾಸ್ (Twitter Boss Elan Musk) ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಅವರಿಗೆ ಅವಕಾಶ ಮಾಡಿ ಕೊಟ್ಟಿದ್ದಾರೆ. ಅದಕ್ಕಾಗಿ ಮಸ್ಕ್ ಅವರಿಗೆ ವಿಶೇಷ ಪೂಜೆಯ ವ್ಯವಸ್ಥೆ ಆಗಿದೆ.
https://twitter.com/i/status/1629894830737489921
ಈ ಗುಂಪು ಮಸ್ಕ್ ಅನ್ನು ‘ವೋಕಾಶೂರ ವಿಧ್ವಂಸಕ’ ಎಂದು ಉಲ್ಲೇಖಿಸಿದೆ, ಅಂದರೆ ಅನ್ಯಾಯದ ವಿರುದ್ಧ ಹೋರಾಡುವವ ಅಂತ ಅರ್ಥ. ಮತ್ತು “ಓಂ ಫೆಮಿನಿಸ್ಟ್ ಎವಿಕ್ಟೋರಾಯ ನಮಃ, ಓಂ ಟ್ವಿಟರ್ ಕ್ಲೀನರಾಯ ನಮಃ, ಮತ್ತು ಓಮ್ ಟ್ವಿಟರ್ ಡೆಮಿನಿಸ್ತರಾಯ ನಮಃ” ಮುಂತಾದ ಮಂತ್ರಗಳನ್ನು ಪಠಿಸಿ ಪೂಜೆ ಮಾಡಿದೆ. ಅಗರಬತ್ತಿ ಹೊತ್ತಿಸಿ ಟ್ವಿಟ್ಟರ್ ಬಾಸ್ ಎಲಾನ್ ಮಸ್ಕ್ ಅನ್ನು ಪೂಜೆ ಮಾಡಿದ್ದು, ತುಂಬಾ ವಿಲಕ್ಷಣವಾಗಿ ಕಂಡುಬಂತು.
Full video of the actual puja (worship) of Elon Musk at Bangalore, India.
Men's Activists of SIFF used to be often shadow banned from twitter by previous woke admins of the company.
After Elon Musk fired them, the MRAs have got back their right to free speech.
Elon Musk Puja pic.twitter.com/zzBoTiTuOV
— Save Indian Family Foundation (@realsiff) February 27, 2023
ಅಲ್ಲಿನ ವೀಡಿಯೊದಲ್ಲಿ ಕೆಲವು ಪುರುಷರ ಸಂಘದ ವೀರ ಕಲಿಗಳು ಮಂತ್ರಗಳನ್ನು ಪಠಿಸುತ್ತಾ ಎಲಾನ್ ಮಸ್ಕ್ ಅನ್ನು ಪೂಜಿಸಿದ್ದಾರೆ. ಆ ಈವೆಂಟ್‌ನಲ್ಲಿ ಬಳಸಿದ ಬ್ಯಾನರ್‌ಗಳಲ್ಲಿ, ‘ನಕಲಿ ಕೇಸ್ ಸಂಸ್ಕೃತಿ’ಯನ್ನು ಕೊನೆಗೊಳಿಸುವಲ್ಲಿ ನಾವು ಕೆಲಸ ಮಾಡುತ್ತೇವೆ ಮತ್ತು ‘ಗೃಹ ಹಿಂಸೆ ಮತ್ತು ಲೈಂಗಿಕ ಕಿರುಕುಳದಿಂದ ಪುರುಷರಿಗೆ ರಕ್ಷಣೆ’ ಕೊಡಲು ನಾವು ಬಯಸುತ್ತೇವೆ ಎಂದು ಹೇಳಿದ್ದಾರೆ. ಈ ಗುಂಪು ಭಾರತದ ಅತಿದೊಡ್ಡ ಪುರುಷರ ಹಕ್ಕುಗಳ NGO ಎಂದು ಹೇಳಿಕೊಳ್ಳುತ್ತಿದೆ.
ಎಲೋನ್ ಮಸ್ಕ್ ಟ್ವಿಟರ್ ಅನ್ನು ವಹಿಸಿಕೊಂಡಾಗಿನಿಂದ, Twitter ವೇದಿಕೆಯು ಬಲಪಂತೀಯ ವೀಕ್ಷಣೆಗಳನ್ನು ಸೆನ್ಸಾರ್ ಮಾಡುವುದಿಲ್ಲ ಅಥವಾ ‘ಎಚ್ಚರದ ದೃಷ್ಟಿಕೋನ’ದಿಂದ ನಿರ್ಬಂಧಿಸಲ್ಪಡುವುದಿಲ್ಲ ಎಂದು ಅವರು ಹೇಳಿದ್ದಾರೆ. (Save Indian Family Foundation) SIFF ನ ವೆಬ್ ಸೈಟ್ ನಲ್ಲಿ, ಸರ್ಕಾರಿ ಪ್ರಾಯೋಜಿತ ‘ಪ್ರಜಾಪ್ರಭುತ್ವ ವಿರೋಧಿ ಸಾಮಾಜಿಕ ಪ್ರಯೋಗಗಳ’ ವಿರುದ್ಧ ನಾವು ಹೋರಾಡುತ್ತೇವೆ, ಮತ್ತು ಸೆಕ್ಷನ್ 498 A ಅಡಿಯಲ್ಲಿ ‘ಕೌಟುಂಬಿಕ ಹಿಂಸಾಚಾರ ಮತ್ತು ವರದಕ್ಷಿಣೆ ಕಿರುಕುಳದ ಸುಳ್ಳು ಪ್ರಕರಣಗಳನ್ನು’ ಎದುರಿಸುವ ಪುರುಷರನ್ನು ಬೆಂಬಲಿಸುವುದು ಮತ್ತು ಮಾರ್ಗದರ್ಶನ ಮಾಡುವುದು ನಮ್ಮ ಕಾರ್ಯಸೂಚಿಗಳಲ್ಲಿ ಒಂದಾಗಿದೆ ಎಂದು ಬರೆದಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498 A, ‘ಹೆಣ್ಣಿನ ಪತಿ ಅಥವಾ ಗಂಡನ ಸಂಬಂಧಿ ಅವಳನ್ನು ಕ್ರೌರ್ಯಕ್ಕೆ ಒಳಪಡಿಸುವ’ ಶಿಕ್ಷೆಯ ಕುರಿತು ವ್ಯವಹರಿಸುತ್ತದೆ. ಅದು ಸ್ತ್ರೀಯ ಪರವಾಗಿದೆ. ಗಂಡು ಮಕ್ಕಳು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ ಎಂದು Save Indian Family Foundation ಹೇಳಿದೆ.
SIFF ಸ್ಪಷ್ಟವಾಗಿ ಸ್ತ್ರೀವಾದಿಗಳ ಬಗ್ಗೆ ವಿರುದ್ಧ ಭಾವನೆಯನ್ನು ಹೊಂದಿದೆ. ಅದರ ವೆಬ್‌ಸೈಟ್ ಹೇಳುತ್ತದೆ : “ಹೆಚ್ಚಿನ ಸ್ತ್ರೀವಾದಿಗಳು ಬೌದ್ಧಿಕವಾಗಿ ಸವಾಲು ಹೊಂದಿರುವ ವ್ಯಕ್ತಿಗಳು. ಏನಂದ್ರೆ ಬುದ್ದಿ ಕಮ್ಮಿ ಉಳ್ಳವರು. ಅವರು ಕಡಿಮೆ ಶೈಕ್ಷಣಿಕ ಅರ್ಹತೆಯನ್ನು ಹೊಂದಿದ್ದಾರೆ. ಅವರು ಮೂಲತಃ ನಿರಾಶೆಗೊಂಡ ಮತ್ತು ಕೋಪಗೊಂಡ ವ್ಯಕ್ತಿಗಳು. ಅಸಹಿಷ್ಣುತೆ ಮತ್ತು ದ್ವೇಷವು ಪ್ರಪಂಚದ ಮಹಿಳೆಯರ ಸ್ಥಿತಿಯನ್ನು ಸುಧಾರಿಸುತ್ತದೆ ಎಂದು ಈ ಸ್ತ್ರೀವಾದಿಗಳು ಭಾವಿಸುತ್ತಾರೆ. ಇದು ಪುರುಷ ಪ್ರಧಾನ ಸಮಾಜವಲ್ಲ ಎಂದು ಅವರು ನಂಬುತ್ತಾರೆ. “1% ಆಲ್ಫಾ ಪುರುಷರು ಉಳಿದ 99% ಪುರುಷರು ಮತ್ತು 100% ಮಹಿಳೆಯರ ಮೇಲೆ ಪ್ರಾಬಲ್ಯ ಹೊಂದಿರುವ ಸಮಾಜವಾಗಿದೆ” ಎಂದು ಅವರು ಹೇಳುತ್ತಾರೆ. ಕೆಲವರ ತಪ್ಪುಗಳಿಗಾಗಿ ಎಲ್ಲಾ ಪುರುಷರು ದಂಡನೆಗೆ ಒಳಗಾಗುತ್ತಾರೆ ಎಂದು ಈ ಸ್ತ್ರೀ ಗುಂಪು ಹೇಳುತ್ತಾರೆ. ಅದಕ್ಕೆ ಒಂದು ಈ ಹಾಸ್ಯಾಭರಿತ ಸನ್ನಿವೇಶವನ್ನು ಉದಾಹರಣೆಯನ್ನು ಉಲ್ಲೇಖಿಸಿದೆ SIFF ಎಂಬ ಸಂಘಟನೆ. “ನೀವು ಬಿಲ್ ಗೇಟ್ಸ್‌ನೊಂದಿಗೆ ಲಿಫ್ಟ್‌ನಲ್ಲಿದ್ದರೆ, ಸರಾಸರಿ ಲೆಕ್ಕದಲ್ಲಿ ಲಿಫ್ಟ್‌ನಲ್ಲಿರುವ ಪ್ರತಿಯೊಬ್ಬರೂ ಕೋಟ್ಯಾಧಿಪತಿಗಳು ಮತ್ತು ಶ್ರೀಮಂತರು. ನೀವು ಅವನೊಂದಿಗೆ ಲಿಫ್ಟ್ ಹಂಚಿಕೊಂಡಿದ್ದಕ್ಕಾಗಿ ಸರ್ಕಾರವು ನಿಮ್ಮನ್ನು ಬಿಲಿಯನೇರ್ ಎಂದು ತೆರಿಗೆ ವಿಧಿಸಿದರೆ ಅದು ಅಸಂಬದ್ಧವಾಗಿರುತ್ತದೆಯಲ್ಲವೇ ? ”. ಎಂದು ತಾರ್ಕಿಕವಾಗಿ ಪುರುಷರ ಸಂಘ ಕೇಳಿದೆ.
ಇದೀಗ ಪುರುಷರ ಸಂಘ ಟ್ವಿಟ್ಟರ್ ಬಾಸ್ ಅನ್ನು ಹೋಗಲಿದೆ. ಸಮಾನತಾ ಭಾವ ಸೃಷ್ಟಿಸಿದ್ದಕ್ಕೆ ಎಲಾನ್ ಮಾಸ್ಕ ಅವರಿಗೆ ಪೂಜೆ ಮಾಡಿ ಅಗರಬತ್ತಿ ಆರತಿ ಎತ್ತಿ ನಕ್ಕು ಸಂಭ್ರಮಿಸಿದೆ. ಎಡಪಂತೀಯ ಭಾವನೆಗಳ ಟ್ವಿಟ್ಟರ್ ಈಗ ಸಮಾನತಾ ಭಾವದತ್ತ ಸಾಗಿದ್ದು, ಈ ಹಿಂದೆ ಟ್ವಿಟ್ಟರ್ ನಿಂದ ಬ್ಯಾನ್ ಮಾಡಲಾಗಿದ್ದ ಡೊನಾಲ್ಡ್ ಟ್ರಾಂಪ್ ಅವರನ್ನೂ ಕೂಡಾ ಟ್ವಿಟ್ಟರ್ ಮತ್ತೆ ಒಳಕ್ಕೆ ಕರೆದು ಅವರ ಬ್ಲಾಕ್ ಮಾಡಿದ್ದ ಅಕ್ಕೌಂಟ್ ಅನ್ನು ಡಿ- ಬ್ಲಾಕ್ ಮಾಡಿದೆ. ಪುರುಷರ ಸಂಘ ಒಟ್ಟಾರೆಯಾಗಿ ಖುಷಿಪಟ್ಟಿದೆ.