ಕಾಲೇಜು ವಿದ್ಯಾರ್ಥಿಗಳ ವರ್ಗಾವಣೆ ಪ್ರಕ್ರಿಯೆ ಸರಳ
Transfer process : ವಿದ್ಯಾರ್ಥಿಗಳು(students) ವ್ಯಾಸಂಗದ ನಡುವೆ ಬೇರೆ ಕಾಲೇಜಿಗೆ ವರ್ಗಾವಣೆ(transfer) ಆಗಲು ಇರುವಂತಹ ಪ್ರಕ್ರಿಯೆ (Transfer process) ಇನ್ನಷ್ಟು ಸರಳವಾಗಲಿದೆ. ಮೊದಲಿಗಿಂತ ಸುಲಭವಾಗಿ ಬೇರೆ ಕಾಲೇಜಿಗೆ ವರ್ಗಾವಣೆ ಆಗಿ ಅಲ್ಲಿ ವ್ಯಾಸಾಂಗ ಮುಂದುವರೆಸಬಹುದಾಗಿದೆ.
ಇನ್ನು ಮುಂದೆ ರಾಜ್ಯದ ಯಾವುದೇ ಸಾರ್ವಜನಿಕ ವಿಶ್ವವಿದ್ಯಾಲಯ ಹಾಗೂ ಅವುಗಳ ಸಂಯೋಜಿತ ಕಾಲೇಜುಗಳಲ್ಲಿ ಪದವಿ, ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳು, ವ್ಯಾಸಂಗದ ನಡುವೆ ರಾಜ್ಯದ ಯಾವುದೇ ಕಾಲೇಜುಗಳಿಗೆ ವರ್ಗಾವಣೆ ಪಡೆದು ಅಲ್ಲಿ ಓದು ಮುಂದುವರೆಸಬಹುದು. ಈ ಬಗ್ಗೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿ 2020ರಡಿ (National Education Policy 2020) ಅವಕಾಶ ನೀಡಿದ್ದು, ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಇದಿಷ್ಟೇ ಅಲ್ಲದೆ, ವರ್ಗ ಪ್ರಕ್ರಿಯೆಯೂ ಇನ್ನಷ್ಟು ಸರಳವಾಗಲಿದೆ.
ವಿದ್ಯಾರ್ಥಿಯು ಹಾಲಿ ವಿಶ್ವವಿದ್ಯಾಲಯದ(University) ಒಂದು ಸಂಯೋಜಿತ ಕಾಲೇಜಿನಿಂದ ಅದೇ ವಿಶ್ವವಿದ್ಯಾಲಯದ ಅಡಿಯಲ್ಲಿನ ಇನ್ನೊಂದು ಸಂಯೋಜಿತ ಕಾಲೇಜಿಗೆ ವರ್ಗಾವಣೆ ಆಗಬಹುದು. ಅಥವಾ ರಾಜ್ಯದ ಬೇರೆ ಯಾವುದೇ ವಿವಿಯ ಸಂಯೋಜಿತ ಕಾಲೇಜಿಗೆ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿಯೇ ಬೆಸ ಸಂಖ್ಯೆಯ ಸೆಮಿಸ್ಟರ್(odd semester) ಗಳಿಗೆ ಮಾತ್ರ ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ನಿರ್ವಹಣಾ ವ್ಯವಸ್ಥೆಯ (ಯುಯುಸಿಎಂಎಸ್) ತಂತ್ರಾಂಶ ಬಳಸಿಕೊಂಡು ಕಾಲೇಜು(college) ಗಳು ವರ್ಗಾವಣೆಗೆ ಅವಕಾಶ ಕಲ್ಪಿಸಬೇಕು.
ಹಾಗೆಯೇ ಹಿಂದಿನ ಸೆಮಿಸ್ಟರ್ಗಳಲ್ಲಿ ಪಾಸಾಗದೆ ಇರುವ ವಿಷಯಗಳನ್ನು, ಅಂದ್ರೆ ಈ ಹಿಂದೆ ಸೆಮಿಸ್ಟರ್ ಪರೀಕ್ಷೆ(semester exam) ಯಲ್ಲಿ ಫೇಲ್ ಆಗಿದ್ದರೆ, ಆ ವಿಷಯಗಳನ್ನು ವರ್ಗಾವಣೆ ಪಡೆದ ಕಾಲೇಜಿನಲ್ಲೇ ಮುಂದುವರೆಸಬಹುದು ಎಂದು ಇಲಾಖೆ ಸೂಚಿಸಿದೆ.
ಎನ್ಇಪಿ (NEP) ಅಡಿಯಲ್ಲಿ ಇರುವ ಬಹು ಆಗಮನ ಮತ್ತು ನಿರ್ಗಮನ (ಮಲ್ಟಿಎಂಟ್ರಿ ಅಂಡ್ ಎಗ್ಸಿಟ್) ಅವಕಾಶದ ಅಡಿಯಲ್ಲಿ ಪದವಿ, ಸ್ನಾತಕೋತ್ತರ ಪದವಿ ವ್ಯಾಸಂಗದ ಸಮಯದಲ್ಲಿ ಯಾವುದೇ ವರ್ಷ ವಿದ್ಯಾರ್ಥಿ ಓದು ನಿಲ್ಲಿಸಿದರೆ ಆಯಾ ವರ್ಷ ಅಥವಾ ಸೆಮಿಸ್ಟರ್ ಅವಧಿಗೆ ನಿಗದಿತ ಕ್ರೆಡಿಟ್ ಅಂಕಗಳನ್ನು ಪಡೆದಿದ್ದರೆ ಪ್ರಥಮ ವರ್ಷಕ್ಕೆ ಸರ್ಟಿಫಿಕೇಟ್(certificate), ದ್ವಿತೀಯ ವರ್ಷಕ್ಕೆ ಡಿಪ್ಲೊಮಾ(diploma), ಮೂರನೇ ವರ್ಷಕ್ಕೆ ಪದವಿ ಪ್ರಮಾಣ ಪತ್ರ(degree certificate), ನಾಲ್ಕನೇ ವರ್ಷಕ್ಕೆ ಹಾನರ್ಸ್ ಪದವಿ ಪತ್ರ ನೀಡಬೇಕು. ಆ ವಿದ್ಯಾರ್ಥಿ ನಂತರ ಓದು ಮುಂದುವರೆಸಲು ಬಯಸಿದರೆ ಪ್ರಥಮ ಸೆಮಿಸ್ಟರ್ಗೆ ಪ್ರವೇಶಾತಿ ಪಡೆದ 7 ವರ್ಷದೊಳಗೆ ಪುನಃ ಪ್ರವೇಶ ಪಡೆಯಬಹುದು ಎಂದು ಇಲಾಖೆ ತಿಳಿಸಿದೆ.
ಯುಜಿಸಿ(UGC) ನಿಯಮಾವಳಿಗಳ ಪ್ರಕಾರ, ಒಬ್ಬ ವಿದ್ಯಾರ್ಥಿಯು ಏಕಕಾಲದಲ್ಲಿ ಬಹು ಪದವಿಗಳನ್ನು ಪಡೆಯಲು ಅವಕಾಶವಿದೆ. ವಿದ್ಯಾರ್ಥಿಯು ಹಾಜರಾತಿಯನ್ನು ಖಚಿತಪಡಿಸಿಕೊಂಡು ಎರಡು ಪದವಿಗಳಲ್ಲಿ ಅಧ್ಯಯನ ಮಾಡಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.