Online Course : ಈ ಕೋರ್ಸ್ ಮಾಡಿದರೆ ನಿಮಗೆ ಕೆಲಸ ಖಂಡಿತ ಸಿಗುತ್ತೆ!
Online Course: ಇಂದಿನ ದಿನದಲ್ಲಿ ಕೆಲಸ ಸಿಗೋದು ತುಂಬಾನೇ ಕಷ್ಟ. ಸಾವಿರಾರು ಜನ ವಿದ್ಯಾವಂತರಿದ್ದಾರೆ. ಆದರೆ ಇವರುಗಳು ನಿರುದ್ಯೋಗಿಗಳು, ಕೈಯಲ್ಲಿ ಪದವಿ ಹಿಡಿದು ಕೆಲಸಕ್ಕಾಗಿ ಅಲೆಯುತ್ತಾರೆ. ಹಾಗಾಗಿ ಸದ್ಯ ಉದ್ಯೋಗಕ್ಕೆ ಪೈಪೋಟಿ ಹೆಚ್ಚಾಗಿದೆ. ಆದರೆ ಉದ್ಯೋಗ ಪಡೆಯಲು ಕೆಲವೊಂದು ಸಲಹೆ(tips) ಇಲ್ಲಿದೆ. ನೀವು ಕೇವಲ ಈ ಒಂದು ಕೋರ್ಸ್(online course) ಮಾಡಿದರೆ ಸಾಕು, ಅದು ಕೂಡ ಉಚಿತ ಕೋರ್ಸ್ (Free Online Course) ಆಗಿದೆ. ಇದನ್ನು ಮಾಡಿದರೆ ಕೆಲಸ ನಿಮ್ಮನ್ನೇ ಹುಡುಕಿಕೊಂಡು ಬರುತ್ತೆ. ಇತ್ತೀಚೆಗೆ ಕೋರ್ಸ್ ಗಳು ಮಾಡಿದರೇನೇ ಉದ್ಯೋಗ ಬೇಗನೆ ಕೈಸೇರುತ್ತದೆ. ಅದೆಷ್ಟೋ ಜನರು ಉದ್ಯೋಗ(job) ಸಿಗದೆ, ನಂತರ ಕೋರ್ಸ್ ಮಾಡಿ, ಅದರ ಮೂಲಕ ಉದ್ಯೋಗ ಪಡೆದುಕೊಳ್ಳುತ್ತಾರೆ. ಹಾಗಿದ್ರೆ ಇದು ಯಾವ ಕೋರ್ಸ್? ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ನೀವೇನಾದದೂ ಉಚಿತ ಆನ್ಲೈನ್ ಕೋರ್ಸ್ ಹುಡುಕಾಟದಲ್ಲಿದ್ದರೆ ಅಥವಾ ಯಾವ ಕೋರ್ಸ್ ಮಾಡಬೇಕು ಎಂಬ ಗೊಂದಲದಲ್ಲಿದ್ದರೆ ಇದು ಉತ್ತಮ ಕೋರ್ಸ್ ಆಗಿದೆ. ಅದುವೇ UX ಡಿಸೈನಿಂಗ್ ಕೋರ್ಸ್ (ux design certificate free course) ಈ ಕೋರ್ಸ್ ಅನ್ನು ಆರು ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸಬಹುದು. ಇಲ್ಲವೇ ಬೇಗನೇ ಮುಗಿಸಬಹುದು. ನೀವು ಈ ಕೊರ್ಸ್ ಮಾಡಲು ಬಯಸುವುದಾದರೆ ಸಂಪೂರ್ಣ ಉಚಿತವಾಗಿ ಈ ಕೋರ್ಸ್ ಮಾಡುವ ಅವಕಾಶವಿದೆ. UX ವಿನ್ಯಾಸದಲ್ಲಿ ವೃತ್ತಿಜೀವನಕ್ಕೆ ಇದು ಸಹಕಾರಿಯಾಗಿದೆ.
ತಂತ್ರಜ್ಞಾನ ಯುಗದಲ್ಲಿ ಹೊಸ ವಿನ್ಯಾಸದ, ವಿಭಿನ್ನ ಕೌಶಲ್ಯಕ್ಕೆ ಬೇಡಿಕೆ ಹೆಚ್ಚಿರುತ್ತದೆ. ಹಾಗಾಗಿ ಇಂತಹ ಕೋರ್ಸ್ ಗಳು ಮುಂದೆ ವೃತ್ತಿ ಜೀವನದಲ್ಲಿ ತುಂಬಾ ಸಹಕಾರಿ ಆಗಲಿದೆ. Google ನಿಂದ ವೃತ್ತಿಪರ ಪ್ರಮಾಣಪತ್ರದೊಂದಿಗೆ ನೀವು ಈ ಕೋರ್ಸ್ ಪೂರ್ಣಗೊಳಿಸಬಹುದು. ಈ ಪ್ರಮಾಣ ಪತ್ರಕ್ಕೆ ಹೆಚ್ಚಿನ ಮೌಲ್ಯವಿದ್ದು, (UX) ವಿನ್ಯಾಸದ ಬೇಡಿಕೆಯ ಕ್ಷೇತ್ರದಲ್ಲಿ ನಿಮಗೆ ಹೆಚ್ಚು ಅವಕಾಶ ಸಿಗುತ್ತದೆ.
ಕೆಲವರಿಗೆ ಈ UX ಡಿಸೈನಿಂಗ್ ಏನು ಎಂದು ತಿಳಿದಿರಲಿಕ್ಕಿಲ್ಲ. ಇದರ ಮಾಹಿತಿ ಇಲ್ಲಿದೆ. UX ಎಂದರೆ ಯೂಸರ್ ಎಕ್ಸ್ಪೀರಿಯನ್ಸ್ ಎಂದರ್ಥ. ಬಳಕೆದಾರರ ಅನುಭವವನ್ನು ಉತ್ತಮವಾಗಿಸಲು ಬೇಕಾದ ಸೌಲಭ್ಯವನ್ನು ನೀವು ಈ ಕೋರ್ಸ್ನಲ್ಲಿ ಕಲಿಯುತ್ತೀರಿ.
ಹಾಗೆಯೇ ಈ ಕೋರ್ಸ್ ನಲ್ಲಿ ವೈರ್‌ಫ್ರೇಮ್‌ಗಳು ಮತ್ತು ಮೂಲಮಾದರಿಗಳನ್ನು ಹೇಗೆ ನಿರ್ಮಿಸುವುದು? ಜೊತೆಗೆ ಯುಎಕ್ಸ್ ಡಿಸೈನರ್ ಬ್ರ್ಯಾಂಡಿಂಗ್, ವಿನ್ಯಾಸ, ಉಪಯುಕ್ತತೆಗೆ ಸಂಬಂಧಿಸಿದ ಅಂಶಗಳನ್ನು ಕಲಿಯುತ್ತೀರಿ. ಹಲವು ಉಪಯುಕ್ತ ಮಾಹಿತಿ ಕಲಿಯುತ್ತೀರಿ. ಹಾಗೆಯೇ ಉದ್ಯೋಗವೂ ಬೇಗನೆ ಅರಸಿಬರುತ್ತದೆ.
ನೀವು ಈ ಕೋರ್ಸ್ ಅನ್ನು ಮನೆಯಲ್ಲಿಯೇ ಕುಳಿತು ಮಾಡಬಹುದು. ಈ ಉತ್ತಮ ಕೋರ್ಸ್(course) ಮಾಡಿ, ಕೆಲಸ ಪಡೆದುಕೊಳ್ಳಿ.