DA, DR, ವೇತನ ಇತ್ಯಾದಿ ಬಗ್ಗೆ ಬಿಗ್ ಸುದ್ದಿ ನಿಮಗಾಗಿ!
7th Pay Commission updates : ಕೇಂದ್ರ ನೌಕರರು ಮತ್ತು ಪಿಂಚಣಿದಾರಿಗೆ ಸರಕಾರದಿಂದ ಸಿಹಿ ಸುದ್ದಿಯೊಂದು ಅತಿ ಶೀಘ್ರದಲ್ಲಿಯೆ ಬರಲಿದೆ. ಸುಮಾರು 62 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 48 ಲಕ್ಷ ಪಿಂಚಣಿದಾರರು ತುಟ್ಟಿ ಭತ್ಯೆ ಮತ್ತು ತುಟ್ಟಿಭತ್ಯೆ ಹೆಚ್ಚಳಕ್ಕಾಗಿ ಎದುರು ನೋಡುತ್ತಿದ್ದಾರೆ.
ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ 7ನೇ ವೇತನ ಆಯೋಗದ(7th pay commission updates) ಕೇಂದ್ರ ನೌಕರರಿಗೆ ವೇತನ ದರದಲ್ಲಿ ಪರಿಷ್ಕರಣೆ ಮಾಡಿದ್ದು ತಿಳಿದಿರುವ ವಿಚಾರ. ದೀಪಾವಳಿಗೆ ಮುಂಚಿತವಾಗಿ, ಕೇಂದ್ರವು ಕೇಂದ್ರ ಸರಕಾರಿ ನೌಕರರ ತುಟ್ಟಿಭತ್ಯೆ (DA) ಶೇಕಡಾ 4 ರಷ್ಟು ಅಂದರೆ 34 ರಿಂದ 38 ಕ್ಕೆ ಹೆಚ್ಚಿಸಿದೆ. ಇದಕ್ಕೂ ಮೊದಲು ಮಾರ್ಚ್ 2022 ರಲ್ಲಿ ಡಿಎಯನ್ನು ಶೇಕಡಾ 3 ರಷ್ಟು ಹೆಚ್ಚಿಸಲಾಗಿತ್ತು. ಕೇಂದ್ರ ಸರ್ಕಾರವು ಮಾರ್ಚ್‌ನಲ್ಲಿ ವೇತನ ಆಯೋಗದಲ್ಲಿ ಫಿಟ್‌ಮೆಂಟ್ ಅಂಶವನ್ನು ಪರಿಷ್ಕರಿಸುವ ನಿರೀಕ್ಷೆಯಿರುವ ಹಿನ್ನೆಲೆ ಕೇಂದ್ರ ಸರ್ಕಾರಿ ನೌಕರರಿಗೆ ಹೋಳಿ ಹಬ್ಬದ ಬಳಿಕ ಸಿಹಿ ಸುದ್ದಿ ಲಭ್ಯವಾಗುವ ಸಾಧ್ಯತೆ ದಟ್ಟವಾಗಿದೆ. ವೇತನ ಆಯೋಗದಲ್ಲಿ ಫಿಟ್ ಮೆಂಟ್ ಅಂಶದ ಪರಿಷ್ಕರಣೆಯ ಬಳಿಕ ಕೇಂದ್ರ ನೌಕರರ ಕನಿಷ್ಟ ವೇತನ 18,000 ರೂ. ಯಿಂದ 26,000 ರೂ ಗೆ ಏರುವ ನಿರೀಕ್ಷೆ ಹೆಚ್ಚಿದೆ.
7ನೇ ವೇತನ ಆಯೋಗದಡಿಯಲ್ಲಿ ( 7th pay commission)ಕೇಂದ್ರ ಸರ್ಕಾರದ ನೌಕರರ ತುಟ್ಟಿಭತ್ಯೆ(ಡಿಎ)ಯು ಜನವರಿ 1ರಿಂದ 2023 ಅನ್ವಯವಾಗುವ ಹಾಗೆ ಮಾರ್ಚ್ ನಲ್ಲಿ ಹೆಚ್ಚಳವಾಗುವ ಬಗ್ಗೆ ಈ ಹಿಂದೆಯೇ ಹೇಳಲಾಗಿದೆ. ಇದರ ಜೊತೆಗೆ ಕೇಂದ್ರ ಸರ್ಕಾರವು ಪಿಂಚಣಿದಾರರ ತುಟ್ಟಿಭತ್ಯೆ (ಡಿಆರ್) ಅನ್ನು ಕೂಡಾ ಹೆಚ್ಚಳ ಮಾಡುವ ನಿರೀಕ್ಷೆಯಿದೆ. ಹೀಗಾಗಿ, ಕೆಲ ಬಲ್ಲ ಮೂಲಗಳ ಪ್ರಕಾರ, ಕೇಂದ್ರ ನೌಕರರು 18 ತಿಂಗಳ ಡಿಎ ಬಾಕಿ ಮೊತ್ತ ಪಡೆಯಲಿದ್ದಾರೆ.
ಜನವರಿಯಲ್ಲಿ ಮನೆ ಬಾಡಿಗೆ ಭತ್ಯೆ(ಎಚ್‌ಆರ್‌ಎ) ನಿಯಮವನ್ನು ಹಣಕಾಸು ಸಚಿವಾಲಯವು ಪರಿಷ್ಕರಣೆ ಮಾಡಿದ್ದು, ಕೇಂದ್ರ ಸರ್ಕಾರಿ ಉದ್ಯೋಗಿಗಳು ಕೆಲವು ಸಂದರ್ಭಗಳಲ್ಲಿ ಎಚ್‌ಆರ್‌ಎ ಪಡೆಯಲು ಅರ್ಹರಲ್ಲ ಎಂದು ಸಚಿವಾಲಯ ಮಾಹಿತಿ ನೀಡಿದೆ.
ಒಂದು ವೇಳೆ ಮತ್ತೊಬ್ಬ ಸರ್ಕಾರಿ ನೌಕರನಿಗೆ ಹಂಚಿಕೆಯಾದ ಸರ್ಕಾರಿ ವಸತಿಗಳನ್ನು ಅವನು/ಅವಳು ಹಂಚಿಕೊಂಡಲ್ಲಿ ಇಲ್ಲವೇ ಅವನು ಅಥವಾ ಅವಳು ತನ್ನ ತಂದೆ-ತಾಯಿ/ಮಗ/ಮಗಳಿಗೆ ಕೇಂದ್ರ, ರಾಜ್ಯ ಸರ್ಕಾರ, ಸಾರ್ವಜನಿಕ ಸ್ವಾಮ್ಯದ ಅಥವಾ ಅರೆ ಸರ್ಕಾರಿ ಸಂಸ್ಥೆಗಳಾದ ಮುನಿಸಿಪಾಲಿಟಿ, ಬಂದರು ಟ್ರಸ್ಟ್, ರಾಷ್ಟ್ರೀಕೃತ ಬ್ಯಾಂಕ್‌ಗಳು, ಭಾರತೀಯ ಜೀವ ವಿಮಾ ನಿಗಮ ಮುಂತಾದ ಸಂಸ್ಥೆಗಳಿಂದ ವಸತಿ ಹಂಚಿಕೆಯಾಗಿದಲ್ಲಿ ಈ ಎಚ್‌ಆರ್‌ಎ ಪಡೆಯಲು ಅರ್ಹರಲ್ಲ. ಇದರ ಜೊತೆಗೆ ಕೇಂದ್ರ ಸರ್ಕಾರ/ ರಾಜ್ಯ ಸರ್ಕಾರ, ಸ್ವಾಯತ್ತ ಸಾರ್ವಜನಿಕ ಉದ್ಯಮ/ಅರೆ ಸರ್ಕಾರಿ ಸಂಸ್ಥೆಗಳಾದ ಮುನಿಸಿಪಾಲಿಟಿ, ಬಂದರು ಟ್ರಸ್ಟ್ ಮುಂತಾದ ಸಂಸ್ಥೆಗಳಿಂದ ಅವನ/ಅವಳ ಸಂಗಾತಿಗೆ ವಸತಿ ಹಂಚಿಕೆಯಾಗಿ ಅವನು/ಅವಳು ಅದೇ ವಸತಿಯಲ್ಲಿ ನೆಲೆಸಿದ್ದು ಅಥವಾ ಅವನು/ಅವಳು ಪ್ರತ್ಯೇಕ ಬಾಡಿಗೆ ಪಡೆದ ಒಂದೇ ಸ್ಥಳದಲ್ಲಿ ವಸತಿಯಲ್ಲಿ ವಾಸವಾಗಿದ್ದರೆ ಈ ಸಂದರ್ಭದಲ್ಲಿ ಎಚ್‌ಆರ್‌ಎ ಪಡೆಯಲು ಅರ್ಹರಲ್ಲ ಎಂಬುದನ್ನು ಸಚಿವಾಲಯ ಸ್ಪಷ್ಟ ಪಡಿಸಿದೆ.
ವರದಿಗಳ ಅನುಸಾರ, ಕೇಂದ್ರ ಸರ್ಕಾರವು ಮಾರ್ಚ್ 8ರ ನಂತರ ಫಿಟ್ ಮೆಂಟ್ ಅಂಶ ಮತ್ತು ತುಟ್ಟಿಭತ್ಯೆ (ಡಿಎ)ಯನ್ನು ಪರಿಷ್ಕರಿಸಲು ಅಣಿಯಾಗಿದೆ. 6ನೇ ವೇತನ ಆಯೋಗ ( 6thPay commission) 1.86ಕ್ಕೆ ಶಿಫಾರಸ್ಸು ಮಾಡಲಾಗಿತ್ತು. ಹೀಗಾಗಿ ಕೇಂದ್ರ ನೌಕರರು ಈ ಬಾರಿ ಫಿಟ್ ಮೆಂಟ್ ಅಂಶವನ್ನು 3.68ಕ್ಕೆ ಹೆಚ್ಚಿಸಲು ಬೇಡಿಕೆ ಇಡುತ್ತಾ ಬರುತ್ತಿದ್ದು, ಒಂದು ವೇಳೆ ಇದೇ ರೀತಿ ಪರಿಷ್ಕರಣೆಯಾದಲ್ಲಿ ಕನಿಷ್ಟ ವೇತನ ರೂ. 18,000 ದಿಂದ 26,000 ರೂ.ಗಳಿಗೆ ಹೆಚ್ಚಳವಾಗುವ ಸಾಧ್ಯತೆ ದಟ್ಟವಾಗಿದೆ.7ನೇ ವೇತನ ಆಯೋಗದಡಿಯಲ್ಲಿ ( 7th pay commission) ಪ್ರಸ್ತುತ ಸಾಮಾನ್ಯ ಫಿಟ್ ಮೆಂಟ್ ಅಂಶವು 2.57% ರಷ್ಟಿದ್ದು, ಇದರಿಂದಾಗಿ 4200 ಗ್ರೇಡ್ ಪೇನಲ್ಲಿ ರೂ 15,000 ಮೂಲ ವೇತನ ಪಡೆಯುತ್ತಿದ್ದರೆ , ಅವರ ಒಟ್ಟು ವೇತನ ರೂ. 15,500×2.57 ಅಥವಾ 39,835 ರೂ. ಪಡೆಯುತ್ತಾರೆ.