SSLC ಪಾಸಾದವರಿಗೆ ಉದ್ಯೋಗವಕಾಶ : ಮಾಸಿಕ ರೂ.52ಸಾವಿರ ಸಂಬಳ, ಟೈಪಿಸ್ಟ್‌ ಹುದ್ದೆಗಳೂ ಇವೆ, ಈಗಲೇ ಅರ್ಜಿ ಸಲ್ಲಿಸಿ

Kalaburagi District Court Recruitment 2023: ಕಲಬುರಗಿ ಜಿಲ್ಲಾ ನ್ಯಾಯಾಲಯವು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ನೇಮಕ ಪ್ರಕ್ರಿಯೆ(Kalaburagi District Court Recruitment 2023) ಆರಂಭಿಸಿದೆ. ಆಸಕ್ತ, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಒಟ್ಟು 60 ಹುದ್ದೆ(job)ಗಳು ಖಾಲಿಯಿದ್ದು, ಆನ್​ಲೈನ್ (Online) ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ನಿರುದ್ಯೋಗಿಗಳಿಗೆ ಇದು ಉತ್ತಮ ಅವಕಾಶವಾಗಿದ್ದು, ಇಂತಹ ಅವಕಾಶವನ್ನು ಮಿಸ್ ಮಾಡ್ಕೋಬೇಡಿ. ಈ ಕೂಡಲೇ ಅರ್ಜಿ ಸಲ್ಲಿಸಿ.

ಹುದ್ದೆಯ ವಿವರ:
ಸ್ಟೆನೋಗ್ರಾಫರ್(Stenographer) (ಗ್ರೇಡ್ III)- 8
ಟೈಪಿಸ್ಟ್​- 9
ಟೈಪಿಸ್ಟ್​- ಕಾಪಿಯಿಸ್ಟ್​- 1
ಪಿಯೋನ್(Peon)- 29
ಪ್ರೊಸೆಸ್ ಸರ್ವರ್(Process Server)- 13

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಆರಂಭ ದಿನಾಂಕ- 24/02/2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ-​ 25/3/ 2023
ಚಲನ್ ಮೂಲಕ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 27/3/2023

ವಿದ್ಯಾರ್ಹತೆ:
ಸ್ಟೆನೋಗ್ರಾಫರ್ (ಗ್ರೇಡ್ III)- ಪಿಯುಸಿ(puc), ಡಿಪ್ಲೊಮಾ
ಟೈಪಿಸ್ಟ್​- ಪಿಯುಸಿ, ಡಿಪ್ಲೊಮಾ(diploma)
ಟೈಪಿಸ್ಟ್​- ಕಾಪಿಯಿಸ್ಟ್​- ಪಿಯುಸಿ, ಡಿಪ್ಲೊಮಾ
ಪಿಯೋನ್- ಎಸ್​ಎಸ್​ಎಲ್​ಸಿ(SSLC)
ಪ್ರೊಸೆಸ್ ಸರ್ವರ್- ಎಸ್​ಎಸ್​ಎಲ್​ಸಿ

ವಯೋಮಿತಿ: ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ.

ವಯೋಮಿತಿ ಸಡಿಲಿಕೆ:
SC/ST/ಪ್ರವರ್ಗ-1 ಅಭ್ಯರ್ಥಿಗಳು- 5 ವರ್ಷ
ಪ್ರವರ್ಗ- 2ಎ/2ಬಿ/3ಎ/3ಬಿ ಅಭ್ಯರ್ಥಿಗಳು- 3 ವರ್ಷ

ಮಾಸಿಕ ವೇತನ:
ಸ್ಟೆನೋಗ್ರಾಫರ್ (ಗ್ರೇಡ್ III)- ₹ 27,650-52,650
ಟೈಪಿಸ್ಟ್​- ₹ 21,400-42,000
ಟೈಪಿಸ್ಟ್​- ಕಾಪಿಯಿಸ್ಟ್​- ₹ 21,400-42,000
ಪಿಯೋನ್- ₹ 17,000- 28,950
ಪ್ರೊಸೆಸ್ ಸರ್ವರ್- ₹ 19,950- 37,900

ಅರ್ಜಿ ಶುಲ್ಕ: SC/ST/ಪ್ರವರ್ಗ-1/ PH ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ. ಆದರೆ, ಸಾಮಾನ್ಯ/ ಪ್ರವರ್ಗ- 2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ 200 ರೂ. ಅರ್ಜಿ ಶುಲ್ಕ ಇರಲಿದೆ. ಈ ಶುಲ್ಕವನ್ನು
ಆನ್ಲೈನ್ ಅಥವಾ ಚಲನ್ ಮೂಲಕ ಪಾವತಿಸಬೇಕು.

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಮೆರಿಟ್ ಲಿಸ್ಟ್​(merit list), ಟೈಪಿಂಗ್ ಟೆಸ್ಟ್ ಕಂಪ್ಯೂಟರ್ (computer) ಪ್ರಾವೀಣ್ಯತೆ ಪರೀಕ್ಷೆ ಹಾಗೂ ಸಂದರ್ಶನ(interview) ದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಕೆ: ಆಸಕ್ತ, ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್​ಸೈಟ್ districts.ecourts.gov.in ಗೆ ಭೇಟಿ ನೀಡಿ.

Leave A Reply

Your email address will not be published.