BSNL ನೀಡಿದೆ 180 ದಿನಗಳ ಅದ್ಭುತ ಪ್ಲ್ಯಾನ್! Airtel-Jio ಸಪ್ಪೆ ಈ ಪ್ಲ್ಯಾನ್ ಮುಂದೆ!!!

BSNL 180 Validity: ಟೆಲಿಕಾಮ್ ಕಂಪನಿಗಳಲ್ಲಿ (Telicom Company)ತನ್ನ ಮುನ್ನಡೆ ಕಾಯ್ದುಕೊಂಡು ದೇಶದ ನಂಬರ್‌ ಒನ್‌ ಸಂಸ್ಥೆಯಾಗಿರುವ ರಿಲಯನ್ಸ್‌ ಜಿಯೋ (Reliance Jio) ಹೊಸ ಹೊಸ ಆಫರ್ ಮೂಲಕ ಗ್ರಾಹಕರ ಮನ ಸೆಳೆಯುತ್ತಿರುವುದು ಗೊತ್ತಿರುವ ವಿಚಾರವೇ! ಈ ನಡುವೆ ಏರ್ಟೆಲ್( Airtel)ಕೂಡ ಜಿಯೋ ಗೆ ಟಕ್ಕರ್ ನೀಡಲು ಮುಂದಾಗಿ ರೀಚಾರ್ಜ್ ಪ್ಲಾನ್ಗಳಲ್ಲಿ ಬದಲಾವಣೆ ಮಾಡಿದ್ದು, ಈ ನಡುವೆ ಬಿಎಸ್ಎನ್ಎಲ್ ಕೂಡ ಹೊಸ ಪ್ಲಾನ್ ಪರಿಚಯಿಸಿ ಪೈಪೋಟಿ ನೀಡಲು ಅಣಿಯಾಗಿದೆ.

ಸರ್ಕಾರಿ ಟೆಲಿಕಾಂ ಕಂಪನಿ ಬಿಎಸ್ಎನ್ಎಲ್ ( BSNL) ತನ್ನ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ. ಅತ್ಯಂತ ಕಡಿಮೆ ಬೆಲೆಗೆ ರೀಚಾರ್ಜ್ ಮಾಡುವ ಗ್ರಾಹಕರಿಗೆ ಬಂಪರ್ ಆಫರ್ ನೀಡುತ್ತಿದೆ. ಹೌದು!!.. ಬಿಎಸ್ಎನ್ಎಲ್ ತನ್ನ ಗ್ರಾಹಕರಿಗೆ ಕೈಗೆ ಎಟಕುವ ಕಡಿಮೆ ದರದಲ್ಲಿ ಭರ್ಜರಿ ಆಫರ್ ನೀಡಲು ಅಣಿಯಾಗಿದೆ. ಬಿಎಸ್ಎನ್ಎಲ್ ಹೊಸ ಯೋಜನೆ ಜನರಿಗೆ ಮೆಚ್ಚುಗೆಯಾಗೋದು ಪಕ್ಕಾ ಎನ್ನಲಾಗುತ್ತಿದೆ. BSNL ಯೋಜನೆಗಳು ಅಗ್ಗದ ಬೆಲೆಯಲ್ಲಿ ಹೆಚ್ಚಿನ ಪ್ರಯೋಜನ ನೀಡಲಿವೆ. ಹೀಗಾಗಿ, ರಿಲಯನ್ಸ್ ಜಿಯೋ, ಏರ್ಟೆಲ್ ಮತ್ತು ವೊಡಾಫೋನ್ ಟೆಲಿಕಾಮ್ ಕಂಪನಿಗಳು ಚಿಂತೆಗೆ ಬಿದ್ದಿವೆ ಎನ್ನಲಾಗಿದೆ.

BSNL 180 ದಿನಗಳ ಯೋಜನೆ-( BSNL 180 Validity)
BSNL ಟೆಲಿಕಾಂ ಕಂಪನಿಯು 397 ರೂಗಳ ಯೋಜನೆಯನ್ನು ಪರಿಚಯಿಸಿದೆ. ಸರ್ಕಾರಿ ಟೆಲಿಕಾಂ ಕಂಪನಿ BSNL ಕಡಿಮೆ ಬೆಲೆಯ ಯೋಜನೆಯಾಗಿದ್ದು BSNL 397 ರೂಗಳ ಯೋಜನೆಯು ದೀರ್ಘಾವಧಿಯ ಪ್ಲಾನ್ ಆಗಿದೆ. BSNL ನ ಯೋಜನೆಗಳಅನಿಯಮಿತ ಧ್ವನಿ ಕರೆಗಳ ಜೊತೆಗೆ 180 ದಿನಗಳ ಮಾನ್ಯತೆ ಹೊಂದಿದ್ದು, BSNL ನ ಈ ಯೋಜನೆ ಮೂಲಕ ಪ್ರತಿದಿನ 2GB ಡೇಟಾ, ಪ್ರತಿದಿನ 100 SMS ಸೌಲಭ್ಯವನ್ನು ಸಹ ನೀಡಲಾಗುತ್ತಿದೆ. BSNL 180 ದಿನಗಳ ಯೋಜನೆ-( BSNL 180 Validity)ಆಗಿದ್ದು ಅಗ್ಗದ ಬೆಲೆಯಲ್ಲಿ ಹೆಚ್ಚಿನ ಪ್ರಯೋಜನ ನೀಡುವ ಯೋಜನೆಯಾಗಿದೆ.

ಒಂದು ವೇಳೆ, ನೀವು ದೈನಂದಿನ 2GB ಡೇಟಾವನ್ನು ಬಳಕೆ ಮಾಡಿದರೆ ನಿಮ್ಮ ಇಂಟರ್ನೆಟ್ ವೇಗವು 40Kbps ಗೆ ಕಡಿಮೆಯಾಗಲಿದೆ. ನಿಮ್ಮ ಸಂಖ್ಯೆಯಲ್ಲಿ ಈ ರೀಚಾರ್ಜ್ ಅನ್ನು ಸಕ್ರಿಯಗೊಳಿಸಿದ ನಂತರ ನೀವು ಯಾವುದೇ ಟೆಲಿಕಾಂ ಕಂಪನಿಯ ಸಿಮ್ನಲ್ಲಿ ಪ್ರತಿದಿನ 100 SMS ಮಾಡಬಹುದು. ನೀವು ಕಡಿಮೆ ಹಣದಲ್ಲಿ ದೀರ್ಘಾವಧಿಯ ಯೋಜನೆಯನ್ನು ಬಯಸಿದರೆ ಈ ರೀಚಾರ್ಜ್ ನಿಮಗೆ ಉತ್ತಮ ಆಯ್ಕೆಯಾಗಿದೆ. ಈ ಯೋಜನೆಯು ಡ್ಯುಯಲ್ ಸಿಮ್ ಬಳಕೆ ಮಾಡುವವರಿಗೆ ಹೆಚ್ಚಿನ ಪ್ರಯೋಜನ ನೀಡುತ್ತದೆ.

Leave A Reply

Your email address will not be published.