Home National Rain Alert : ಬಿಸಿಲಿನ ತಾಪ ಏರಿಕೆ, ಭಾರೀ ಮಳೆಯ ಮುನ್ಸೂಚನೆ ಕೊಟ್ಟ ಹವಾಮಾನ ಇಲಾಖೆ!...

Rain Alert : ಬಿಸಿಲಿನ ತಾಪ ಏರಿಕೆ, ಭಾರೀ ಮಳೆಯ ಮುನ್ಸೂಚನೆ ಕೊಟ್ಟ ಹವಾಮಾನ ಇಲಾಖೆ! ಯಾವ ರಾಜ್ಯ ಅಲರ್ಟ್‌ ಆಗಿರಬೇಕು?

Rain Alert

Hindu neighbor gifts plot of land

Hindu neighbour gifts land to Muslim journalist

Rain alert : ದಿನದಿಂದ ದಿನಕ್ಕೆ ಗರಿಷ್ಠ ಉಷ್ಣಾಂಶದಲ್ಲಿ ಏರಿಕೆ ಕಾಣುತ್ತಿದೆ. ಸದ್ಯದ ಹವಾಮಾನ (weather )ಮುನ್ಸೂಚನೆಯಂತೆ ಕೆಲವು ದಿನಗಳವರೆಗೆ ಉಷ್ಣಾಂಶ ಹೆಚ್ಚಾಗಿ ಸೆಕೆ ಹೀಗೇ ಇರುವ ಸಾಧ್ಯತೆ ಇದೆ. ಇದರಿಂದಾಗಿ ಕೆಲವು ಕಡೆ ಮಳೆ ಮತ್ತಷ್ಟು ಕ್ಷೀಣಿಸಬಹುದು. ಆದರೂ ಈ ನಡುವೆ ಬೇಸಿಗೆಯ ಧಗೆ ಕಡಿಮೆ ಮಾಡುವ ಸುದ್ದಿಯೊಂದಿದೆ.

ಹೌದು ಕರ್ನಾಟಕದಲ್ಲಿ(karnataka )ಬೆಂಗಳೂರು (bengaluru )ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಉಷ್ಣಾಂಶದಲ್ಲಿ ಏರಿಕೆ ಕಂಡುಬಂದಿದೆ. ಸಾಮಾನ್ಯವಾಗಿ ರಾಜ್ಯದಲ್ಲಿ ಮಾರ್ಚ್(march )ಬಳಿಕ ಬಿಸಿಲಿನ ತಾಪ ಏರಿಕೆಯಾಗುತ್ತಿತ್ತು. ಆದರೆ ಈ ಬಾರಿ ಫೆಬ್ರವರಿ 20ರ ಬಳಿಕ ಬಿಸಿಲಿನ ಬೇಗೆಗೆ ಜನರು ಚಿಂತಿಸುತ್ತಿದ್ದಾರೆ.

ಹೌದು ಬೇಸಿಗೆ ಆರಂಭದಲ್ಲೇ ಜನರು ಬಿಸಿಲಿಗೆ ಪರಿತಪಿಸುತ್ತಿದ್ದಾರೆ. ಬರುವ ಮಾರ್ಚ್ 3ನೇ ವಾರದಲ್ಲಿ ದೇಶಾದ್ಯಂತ ಉಷ್ಣಾಂಶದಲ್ಲಿ ಮತ್ತಷ್ಟು ಏರಿಕೆ ಕಂಡುಬರಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ತಜ್ಞರು ಅಂದಾಜಿಸಿದ್ದಾರೆ. ಆದರೆ ಈ ನಡುವೆ ಬೇಸಿಗೆಯ ಧಗೆ ಕಡಿಮೆ ಮಾಡುವ ಸುದ್ದಿಯೊಂದಿದೆ. ಹೌದು ದೇಶದ ಕೆಲವು ರಾಜ್ಯಗಳಲ್ಲಿ ಮಾರ್ಚ್ 2ರ ತನಕ ಮಳೆಯಾಗುವ (Rain alert) ನಿರೀಕ್ಷೆ ಇದೆ ಎಂದು ತಿಳಿಸಲಾಗಿದೆ. ಇನ್ನು ಉತ್ತರ ಭಾರತದಂತೆ ದಕ್ಷಿಣ ಭಾರತದಲ್ಲೂ ತಾಪಮಾನ ಜಾಸ್ತಿಯಾಗಿದೆ. ಆದರೆ ಮಳೆ ಜೋರಾಗಿ ಸುರಿಯುವ ಸಾಧ್ಯತೆ ಕಡಿಮೆ ಇದೆ ಎಂದು ತಿಳಿಸಲಾಗಿದೆ.

ಈಗಾಗಲೇ ಬೆಂಗಳೂರು ನಗರದಲ್ಲಿ ಸೋಮವಾರ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕನಿಷ್ಠ ತಾಪಮಾನ 13 ಡಿಗ್ರಿ ಇರಬಹುದು ಎಂದು ಅಂದಾಜಿಸಲಾಗಿದೆ. ಉಳಿದಂತೆ ಹುಬ್ಬಳ್ಳಿ, ಹಾವೇರಿ, ಕಲಬುರಗಿ ಮತ್ತು ಬಾಗಕೋಟೆಯಲ್ಲಿ ಗರಿಷ್ಠ 36 ಡಿಗ್ರಿ, ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ ಎಂದು ಅಂದಾಜಿಸಲಾಗಿದೆ. ಆದರೆ ಹವಾಮಾನ ಇಲಾಖೆ ಮಾಹಿತಿಯಂತೆ
ಬೆಂಗಳೂರು ನಗರದಲ್ಲಿ ವರ್ಷ ಪ್ರತಿ ಫೆಬ್ರವರಿ ತಿಂಗಳಿನಲ್ಲಿ 7 ಮಿ. ಮೀ. ಮಳೆಯಾಗಬೇಕಿತ್ತು. ಆದರೆ, ಈ ವರ್ಷ ಮಳೆಯಾಗಿಲ್ಲ. ಮೋಡದ ಸಂಚಾರವೂ ಇಲ್ಲದ ಕಾರಣ ಈಗ ಮಳೆಯಾಗುವ ಸಾಧ್ಯತೆ ಇಲ್ಲ ಎಂದು ತಿಳಿಸಲಾಗಿದೆ.

ಆದರೆ ಭಾರತೀಯ ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಫೆಬ್ರವರಿ 28ರಿಂದ ಮಾರ್ಚ್ 2ರ ತನಕ ಹಿಮಾಲಯ ಪ್ರದೇಶಗಳು, ವಾಯುವ್ಯ ಭಾಗದ ರಾಜ್ಯಗಳಲ್ಲಿ ಮಳೆಯಾಗಲಿದೆ. ಹಿಮಾಚಲ ಪ್ರದೇಶ, ಚಂಡೀಗಢ್, ಹರ್ಯಾಣದಲ್ಲಿ ಮೂರು ದಿನ ಮಳೆಯಾಗಲಿದೆ ಎಂದು ಮುನ್ಸೂಚನೆ ಕೊಡಲಾಗಿದೆ. ಇದರಿಂದಾಗಿ ಉಷ್ಣಾಂಶದಲ್ಲಿಯೂ ಸಹ ಕೆಲವು ಏರುಪೇರು ಉಂಟಾಗಲಿದೆ.

ಇನ್ನು ಅರುಣಾಚಲ ಪ್ರದೇಶ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪ, ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ, ಪಶ್ಚಿಮ ಬಂಗಾಳ, ಸಿಕ್ಕಿಂ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರ ರಾಜ್ಯಗಳಲ್ಲಿ ಲಘುವಾಗಿ ಮಳೆಯಾಗಿದೆ. ಪಂಜಾಬ್, ಹರ್ಯಾಣ, ಚಂಡೀಗಢದಲ್ಲಿ ಫೆಬ್ರವರಿ 28 ರಿಂದ ಮಾರ್ಚ್ 1ರ ತನಕ 30 ರಿಂದ 40 ಕಿ. ಮೀ. ವೇಗದಲ್ಲಿ ಗಾಳಿ ಬೀಸಲಿದೆ ಎಂದು ಸಹ ಮುನ್ಸೂಚನೆ ನೀಡಲಾಗಿದೆ.

ಜೊತೆಗೆ ಉತ್ತರಾಖಂಡ, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶದಲ್ಲಿ ಗುಡುಗು ಸಹಿತ ಮಳೆಯಾಗಬಹುದು ಎಂದು ಅಂದಾಜಿಸಲಾಗಿದೆ. ವಾಯುವ್ಯ ಮತ್ತು ಮಧ್ಯ ಭಾರತದ ರಾಜ್ಯಗಳಲ್ಲಿ ಗರಿಷ್ಠ ತಾಪಮಾನವು ಸರಾಸರಿಗಿಂತ 3 ರಿಂದ 5ರಷ್ಟು ಹೆಚ್ಚಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಇನ್ನು ತೆಲಂಗಾಣ, ಆಂಧ್ರ ಪ್ರದೇಶ, ಮಹಾರಾಷ್ಟ್ರ, ಗುಜರಾತ್‌ನ ಕೆಲವು ಭಾಗದಲ್ಲಿ ಉಷ್ಣಾಂಶ 35 ರಿಂದ 37 ಡಿಗ್ರಿ ತನಕ ಇರಲಿದೆ. ಉತ್ತರ ಪ್ರದೇಶ, ದೆಹಲಿಯಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಇರುವಷ್ಟು ಬಿಸಿಲು ಇದೆ.

ಒಟ್ಟಿನಲ್ಲಿ ಬೇಸಿಗೆ ಆರಂಭ ಕರ್ನಾಟಕದಲ್ಲಿ ಮಾರ್ಚ್ 1ರ ಬದಲಿಗೆ ಫೆಬ್ರವರಿ 24ರಿಂದಲೇ ಬೇಸಿಗೆ ಆರಂಭವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದ್ದು ಮುಂದಿನ ದಿನಗಳಲ್ಲಿ ಬೇಸಿಗೆಯ ಧಗೆ ಇದ್ದರೂ ಮುಂಜಾನೆ ಸಮಯದಲ್ಲಿ ಶುಷ್ಕ ವಾತಾವರಣ ಇರಲಿದೆ. ಸದ್ಯ ಜನರು ಬಿಸಿಲ ಧಗೆ ಸಹಿಸಿಕೊಳ್ಳಲೇಬೇಕಾಗಿದೆ.