Home latest Traffic Update : ವಾಹನ ಸವಾರರ ಗಮನಕ್ಕೆ, ಈ ರಸ್ತೆಗಳಲ್ಲಿ ಪಾರ್ಕಿಂಗ್‌ ನಿಷೇಧ

Traffic Update : ವಾಹನ ಸವಾರರ ಗಮನಕ್ಕೆ, ಈ ರಸ್ತೆಗಳಲ್ಲಿ ಪಾರ್ಕಿಂಗ್‌ ನಿಷೇಧ

Traffic Updates

Hindu neighbor gifts plot of land

Hindu neighbour gifts land to Muslim journalist

Traffic Update : ಬೆಂಗಳೂರು ನಗರ ಸಂಚಾರ ಪೊಲೀಸರು ( Bangalore Traffic Police )ನಾಗರಿಕರಿಗೆ ಮಹತ್ವ ಮಾಹಿತಿ (information )ಒಂದನ್ನು ತಿಳಿಸಿದ್ದಾರೆ. ಸದ್ಯ ಕರ್ನಾಟಕಕ್ಕೆ ಜರ್ಮನ್ ಚಾನ್ಸಲರ್ ಆಗಮಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಗಣ್ಯರ ಭದ್ರತೆ ಮತ್ತು ಸುಗಮ ಸಂಚಾರದ ಹಿತದೃಷ್ಠಿಯಿಂದ ದಿನಾಂಕ 26-02-2023ರ ಅಂದರೆ ಇಂದು ಬೆಳಿಗ್ಗೆ 11 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಗರದ ವಿವಿಧ ಪ್ರದೇಶಗಳ ರಸ್ತೆಗಳಲ್ಲಿ ಎರಡು ಬದಿಗಳಲ್ಲಿ ಎಲ್ಲಾ ಮಾದರಿಯ ವಾಹನಗಳ ನಿಲುಗಡೆಯನ್ನು (Traffic Update) ನಿಷೇಧಿಸಲಾಗಿದೆ ಎಂದು ಮಾಹಿತಿ ನೀಡಲಾಗಿದೆ.

ಬೆಂಗಳೂರು(bengaluru )ನಗರ ಸಂಚಾರ ಪೊಲೀಸರ ಮಾಹಿತಿಯಂತೆ ಇಂದು ಬೆಳಿಗ್ಗೆ 11 ರಿಂದ ಸಂಜೆ 6 ಗಂಟೆಯವರೆಗೆ ಮುಖ್ಯವಾಗಿ ಬಳ್ಳಾರಿ ರಸ್ತೆ, ರಮಣ ಮಹರ್ಷಿ ರಸ್ತೆ, ಮೇಖ್ರಿ ಸರ್ಕಲ್, ಕಾವೇರಿ ಥಿಯೇಟರ್ ಜಂಕ್ಷನ್, ಇನ್ ಫೆಂಟ್ರಿ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ.

ಜೊತೆಗೆ ಕಬ್ಬನ್ ರಸ್ತೆ, ಹಳೆ ವಿಮಾನ ನಿಲ್ದಾಣ, ವೈಟ್ ಫೀಲ್ಟ್ ಮುಖ್ಯ ರಸ್ತೆ, ಹೆಚ್‌ಎಎಲ್ ನಿಂದ ಕೆ ಆರ್ ಪುರಂವರೆಗೆ ಹೊರ ವರ್ತುಲ ರಸ್ತೆ, ದೊಡ್ಡನೆಕ್ಕುಂದಿ ರಸ್ತೆ, ಗ್ರಾಫೈಟ್ ಇಂಡಿಯಾ ರಸ್ತೆ, ಕ್ವೀನ್ಸ್ ರಸ್ತೆ, ರಾಜಭವನ ರಸ್ತೆ, ಎಂಜಿ ರೋಡ್, ಇಂದಿರಾನಗರ 100 ಅಡಿ ರಸ್ತೆ ಹಾಗೂ ಹಳೆ ಮದ್ರಾಸ್ ರಸ್ತೆಗಳ ಎರಡು ಬದಿಯಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಿದೆ.

ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಸಂಚಾರ ಪೊಲೀಸರ ಪ್ರಕಾರ ಯಾರಾದರು ಈ ಮೇಲಿನ ನಿಯಮವನ್ನು ಉಲ್ಲಂಘನೆ ಮಾಡಿದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.