Rakesh Adiga : ಬಿಗ್‌ಬಾಸ್‌ ರಾಕೇಶ್‌ ಅಡಿಗ ನೀಡಿದ್ರು ಬಿಗ್‌ ಅಪ್ಡೇಟ್‌ ! ಬಂತು ನೋಡಿ ಕಾಕ್ರೋಚ್!!!‌

Rakesh Adiga in cockroach : ರಾಕೇಶ್ ಅಡಿಗ(Rakesh adiga) ‘ಬಿಗ್ ಬಾಸ್ ಕನ್ನಡ ಸೀಸನ್ 9’(biggboss season9 kannada) ರಲ್ಲಿ ತಮ್ಮ ಒಳ್ಳೆಯ ವ್ಯಕ್ತಿತ್ವ, ಅತ್ಯುತ್ತಮ ಟಾಸ್ಕ್ ಆಡುವಿಕೆಯಿಂದ ಜನರ ಮನಗೆದ್ದಿದ್ದರು. ಬಿಗ್ ಬಾಸ್ ಒಟಿಟಿ(OTT)ಯಲ್ಲಿ ಸ್ಪರ್ಧಿಸಿ, ಉತ್ತಮ ಸ್ಪರ್ಧಿ ಎನಿಸಿ, ಟಿವಿಯಲ್ಲಿ ಪ್ರಸಾರವಾಗುವ ಜನಪ್ರಿಯ ಶೋ ‘ಬಿಗ್ ಬಾಸ್ ಕನ್ನಡ ಸೀಸನ್ 9’ ಗೆ ಕಾಲಿಟ್ಟರು. ಇಲ್ಲಿ ಹಲವು ಘಟಾನುಘಟಿ ಸ್ಪರ್ಧಿಗಳ ಜೊತೆಗೆ ಪೈಪೋಟಿ ನಡೆಸಿ, ರನ್ನರ್ ಅಪ್(runner up) ಆಗಿ ದೊಡ್ಮನೆಯಿಂದ ಹೊರಬಂದಿದ್ದರು. ಸದ್ಯ ರಾಕೇಶ್ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದು, ಇದೀಗ ರಾಕೇಶ್ ಅಡಿಗ ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ಯಾವುದು ಆ ಸಿನಿಮಾ?

ಬಿಗ್ ಬಾಸ್ ಬಳಿಕ ರಾಕೇಶ್ ಏನು ಮಾಡುತ್ತಿದ್ದಾರೆ? ಎಂಬ ಪ್ರಶ್ನೆ ಕೇಳಿ ಬರುತ್ತಿತ್ತು. ಸದ್ಯ ಈ ಪ್ರಶ್ನೆಗೆ ತೆರೆ ಎಳೆದು, ತೆರೆ ಮೇಲೆ ಬರಲು ಸಜ್ಜಾಗಿದ್ದಾರೆ. ಹೌದು, ನಟ ರಾಕೇಶ್ ಅಡಿಗ ಹೊಸ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ರಾಕೇಶ್ ಅಡಿಗ ನಟಿಸಲಿರುವ ಹೊಸ ಚಿತ್ರದ ಹೆಸರು ‘ಕಾಕ್ರೋಚ್’ (Rakesh Adiga in Cockroach)ಎಂದಾಗಿದೆ. ಈಗಾಗಲೇ ಈ ಚಿತ್ರದಲ್ಲಿನ ರಾಕೇಶ್ ಅಡಿಗ ಅವರ ಕ್ಯಾರೆಕ್ಟರ್ ರಿವೀಲ್ ಟೀಸರ್ ಬಿಡುಗಡೆಯಾಗಿದೆ. ಕ್ಯಾರೆಕ್ಟರ್ ರಿವೀಲ್ ಟೀಸರ್‌ಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದ್ದು, ನಟನೆ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ.

ರಾಕೇಶ್ ಇದೀಗ ನಾಲ್ಕು ವರ್ಷಗಳ ಗ್ಯಾಪ್ ಬಳಿಕ ಮತ್ತೆ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. 2019 ರಲ್ಲಿ ರಿಲೀಸ್ ಆಗಿದ್ದ ‘ನೈಟ್ ಔಟ್’(night out) ಸಿನಿಮಾದ ಬಳಿಕ ರಾಕೇಶ್ ಅಡಿಗ ಯಾವ ಚಿತ್ರದಲ್ಲೂ ಕಾಣಿಸಿಕೊಂಡಿರಲಿಲ್ಲ. ಆ ನಂತರ ಪ್ರೇಕ್ಷಕರಿಗೆ ಕಾಣಿಸಿಕೊಂಡಿದ್ದು, ಬಿಗ್ ಬಾಸ್ ಸ್ಪರ್ಧಾಯಾಗಿ, ಇದೀಗ ಮತ್ತೆ ಸಿನಿಮಾದಲ್ಲಿ ನಿರತರಾಗಿದ್ದಾರೆ. ‘ಕಾಕ್ರೋಚ್’ ಚಿತ್ರದ ಮೂಲಕ ರಾಕೇಶ್ ಅಡಿಗ ಸಿನಿಮಾರಂಗಕ್ಕೆ ರೀ ಎಂಟ್ರಿ ಕೊಟ್ಟಿದ್ದಾರೆ.

ಇನ್ನು ಸಿನಿಮಾದ ಹೆಸರು ‘ಕಾಕ್ರೋಚ್’ ಇದನ್ನ ಕೇಳುತ್ತಿದ್ದ ಹಾಗೇ ಹಲವಾರು ಪ್ರಶ್ನೆಗಳು ಒಮ್ಮೆಲೆ ಮೂಡುತ್ತವೆ. ಸದ್ಯ ಈ ಚಿತ್ರ ವಿಶೇಷವಾಗಿದ್ದು, ‘ಕಾಕ್ರೋಚ್’ ಚಿತ್ರದಲ್ಲಿ ಪ್ರೇಕ್ಷಕರನ್ನು ಪ್ರೇಮ ಸಾಗರದಲ್ಲಿ ತೇಲಾಡಿಸುವಂತಹ ಸುಂದರ ಲವ್ ಸ್ಟೋರಿ ಇರಲಿದೆ. ಇನ್ನೊಂದು ವಿಚಾರ ಏನಂದ್ರೆ, ರಾಕೇಶ್ ಈ ಚಿತ್ರದಲ್ಲಿ ನಟಿಸುವುದು ಮಾತ್ರವಲ್ಲ ನಿರ್ದೇಶನ ಕೂಡ ಅವರದ್ದೇ. ಹಾಗೇ ಪೂಜಾ ಶ್ರೀ ಎಂಬವರು ‘ಕಾಕ್ರೋಚ್’ ಚಿತ್ರದ ನಿರ್ಮಾಪಕಿ ಆಗಿದ್ದಾರೆ. ಸದ್ಯ ಈ ಚಿತ್ರ ತೆರೆ ಮೇಲೆ ಬರಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

Leave A Reply

Your email address will not be published.