SBI : ಎಸ್‌ಬಿಐ ನಿಂದ ಉದ್ಯೋಗವಕಾಶ! ಮ್ಯಾನೇಜರ್‌ ಹುದ್ದೆಗೆ ಅರ್ಜಿ ಸಲ್ಲಿಸಿ, ಮಾರ್ಚ್‌ 15 ಕೊನೆಯ ದಿನಾಂಕ

SBI SO Job Notification 2023: ಇಂದಿನ ಕಾಲದಲ್ಲಿ ಉದ್ಯೋಗ ಅತ್ಯವಶ್ಯಕವಾಗಿದೆ. ಆದರೆ, ಬಯಸಿದ ಉದ್ಯೋಗ(Job) ಪಡೆಯುವುದು ಸುಲಭದ ಮಾತಲ್ಲ. ಪೈಪೋಟಿಯ ನಡುವೆ ನೆಚ್ಚಿನ ಕೆಲ್ಸ ಗಿಟ್ಟಿಸಿಕೊಳ್ಳೋದು ಯುವಜನತೆಯ ಪಾಲಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಹಾಗೆಂದ ಮಾತ್ರಕ್ಕೆ ಉದ್ಯೋಗದ (employment) ವಿಷಯದಲ್ಲಿ ಅನೇಕ ಅವಕಾಶದ ಬಾಗಿಲುಗಳು ತೆರೆದಿದ್ದು ಇವುಗಳ ಕುರಿತಂತೆ ಮಾಹಿತಿ ಎಷ್ಟೋ ಮಂದಿಗೆ ತಿಳಿದಿಲ್ಲ ಎನ್ನುವುದು ಅಷ್ಟೆ ಸತ್ಯ. ಸದ್ಯ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಅರಸುತ್ತಿರುವ ಅಭ್ಯರ್ಥಿಗಳಿಗೆ ಬಹು ಮುಖ್ಯ ಮಾಹಿತಿ ಇಲ್ಲಿ ನೀಡಲಾಗಿದೆ.

ಭಾರತೀಯ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (SBI SO Job Notification 2023)ವಿವಿಧ ಸ್ಪೆಷಲಿಸ್ಟ್‌ ಕೇಡರ್ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡುವ ಸಲುವಾಗಿ ಅಧಿಸೂಚನೆ ಹೊರಡಿಸಿದ್ದು, ಎಸ್‌ಬಿಐ ಅರ್ಹರಿಂದ ಈ ಹುದ್ದೆಗಳಿಗೆ ನೇರ ನೇಮಕಾತಿ ಹಾಗೂ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನ ಮಾಡಿದೆ. ಈ ಉದ್ಯೋಗಾಂಕ್ಷಿಗಳು ಕೊನೆಯ ದಿನದ ಮೊದಲೇ ಅರ್ಜಿ ಸಲ್ಲಿಸುವುದು ಉತ್ತಮ. ಈ ಹುದ್ದೆಗಳಿಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸುವ ಮುನ್ನ ಖಾಲಿ ಇರುವ ಹುದ್ದೆಗಳು, ವೇತನ ಶ್ರೇಣಿ, ವಿದ್ಯಾರ್ಹತೆ ಹಾಗೂ ಇನ್ನಿತರ ಮಾಹಿತಿಗಳನ್ನು ತಿಳಿದಿರುವುದು ಅವಶ್ಯಕ. ಈ ಹುದ್ದೆಗಳಿಗೆ ಫೆಬ್ರವರಿ 23 ರಿಂದ ಮಾರ್ಚ್ 15 ರವರೆಗೆ ಆನ್‌ಲೈನ್‌ ರಿಜಿಸ್ಟ್ರೇಷನ್‌ ಮಾಡಿಕೊಳ್ಳ ಬಹುದು.

ರೆಗ್ಯುಲರ್ ಬೇಸಿಸ್ ಎಸ್‌ಬಿಐ ಎಸ್‌ಒ ಹುದ್ದೆಗಳು ಹೀಗಿವೆ:
ಹುದ್ದೆ ಹೆಸರು: ಮ್ಯಾನೇಜರ್ (ರೀಟೇಲ್ ಪ್ರೋಡಕ್ಟ್‌) (Manager)(Retail Product)
ಹುದ್ದೆಗಳ ಸಂಖ್ಯೆ : 05
ವಿದ್ಯಾರ್ಹತೆ : ಎಂಬಿಎ / ಪಿಜಿಡಿಎಂ / ಮಾರ್ಕೆಟಿಂಗ್ ವಿಷಯದಲ್ಲಿ ಪಿಜಿಡಿಎಂ ಜತೆಗೆ 5 ವರ್ಷ ಪೋಸ್ಟ್‌
ಹುದ್ದೆಯ ಸ್ಥಳ: ಮುಂಬೈ
ಅಭ್ಯರ್ಥಿಗಳು ಕನಿಷ್ಠ 28 ವರ್ಷ ಹೊಂದಿರಬೇಕಾಗಿದ್ದು, ಗರಿಷ್ಠ 38 ವರ್ಷಗಳು. ಈ ಹುದ್ದೆಗೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಶಾರ್ಟ್‌ಲಿಸ್ಟಿಂಗ್ ಕಮ್ ಚರ್ಚೆ ನಡೆಸಲಾಗುತ್ತದೆ. ಆ ಬಳಿಕ ಸಂದರ್ಶನ ನಡೆಯಲಿದ್ದು, ಕ್ವಾಲಿಫಿಕೇಶನ್‌ ಜೊತೆಗೆ ಕಾರ್ಯಾನುಭವವನ್ನು ಪರಿಗಣಿಸಲಾಗುತ್ತದೆ.

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು 23-02-2023 ಆರಂಭಿಕ ದಿನಾಂಕವಾಗಿದೆ.
ಅರ್ಜಿ ಸಲ್ಲಿಸಲು 15-03-2023 ಕೊನೆ ದಿನಾಂಕವಾಗಿದೆ.

ಗುತ್ತಿಗೆ ಆಧಾರಿತ ಎಸ್‌ಬಿಐ ಎಸ್‌ಒ ಹುದ್ದೆಗಳು
ಹುದ್ದೆ ಹೆಸರು: ಫ್ಯಾಕಲ್ಟಿ (ಎಕ್ಸಿಕ್ಯೂಟಿವ್ ಎಜುಕೇಷನ್)
ಹುದ್ದೆಗಳ ಸಂಖ್ಯೆ : 02
ಹುದ್ದೆಯ ಸ್ಥಳ: SBIL, Kolkata
ಅಭ್ಯರ್ಥಿಗಳ ಕನಿಷ್ಠ ವಯೋಮಿತಿ 28 ವರ್ಷವಾಗಿದ್ದು, ಗರಿಷ್ಠ 55 ವರ್ಷ ಗಳು. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಯಾವುದೇ ಸ್ನಾತಕೋತ್ತರ ಪದವಿ ಜತೆಗೆ 3 ವರ್ಷ ಟೀಚಿಂಗ್ ಕಾರ್ಯಾನುಭವ ಹೊಂದಿರಬೇಕು. ಇದಲ್ಲದೆ, ಆಯ್ಕೆ ವಿಧಾನ ಶಾರ್ಟ್‌ಲಿಸ್ಟಿಂಗ್ ಕಮ್ ಚರ್ಚೆ ನಡೆಯಲಿದ್ದು ಆ ಬಳಿಕ ಸಂದರ್ಶನ ನಡೆಯಲಿದೆ.
ಸಂಭಾವ್ಯ ಸಂಭಾವನೆ: 25-40 ಲಕ್ಷ ವಾರ್ಷಿಕ.

ಗುತ್ತಿಗೆ ಆಧಾರಿತ ಎಸ್‌ಬಿಐ ಎಸ್‌ಒ ಹುದ್ದೆಗಳು
ಹುದ್ದೆ ಹೆಸರು: ಸೀನಿಯರ್ ಎಕ್ಸಿಕ್ಯೂಟಿವ್ (ಸ್ಟ್ಯಾಟಿಸ್ಟಿಕ್ಸ್‌ ) (Senior Executive)
ಹುದ್ದೆಗಳ ಸಂಖ್ಯೆ : 1
ಹುದ್ದೆಯ ಸ್ಥಳ: AML / CFT, Jaipur
ಈ ಹುದ್ದೆಗೆ ಅರ್ಹ ಅಭ್ಯರ್ಥಿಗಳ ಕನಿಷ್ಠ ವಯೋಮಿತಿ 25 ವರ್ಷ ಹಾಗೂ ಗರಿಷ್ಠ 35 ವರ್ಷಗಳು. ಈ ಹುದ್ದೆಗೆ ವಿದ್ಯಾರ್ಹತೆಯನ್ನು ಪರಿಗಣಿಸಿದರೆ, ಸ್ಟ್ಯಾಟಿಸ್ಟಿಕ್ಸ್‌/ ಗಣಿತ / ಅರ್ಥಶಾಸ್ತ್ರದಲ್ಲಿ ಪಿಜಿ ಅಥವಾ ಬಿಇ/ಬಿ.ಟೆಕ್/ ಪಿಜಿ ಡಿಪ್ಲೊಮ ಇನ್ ಸಿಎಸ್. ಜತೆಗೆ 5 ವರ್ಷ ಕಾರ್ಯಾನುಭವ ಹೊಂದಿರಬೇಕು. ಇದರ ಜೊತೆಗೆ ಅಯ್ಕೆ ಪ್ರಕ್ರಿಯೆ ಶಾರ್ಟ್‌ಲಿಸ್ಟಿಂಗ್ ಕಮ್ ಚರ್ಚೆ ಹಾಗೂ ಸಂದರ್ಶನವಿರಲಿದೆ.
ಸಂಭಾವ್ಯ ಸಂಭಾವನೆ: 15-20 ಲಕ್ಷ ವಾರ್ಷಿಕ.

ಮೇಲೆ ತಿಳಿಸಿದ ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳು ಕೊನೆಯ ದಿನದ ಮೊದಲೇ ಅರ್ಜಿ ಸಲ್ಲಿಸುವುದು ಉತ್ತಮ. ಅರ್ಜಿ ಸಲ್ಲಿಸಲು 15-03-2023 ಕೊನೆ ದಿನಾಂಕವಾಗಿದ್ದು, ಈ ಮೊದಲೇ ಹುದ್ದೆಗೆ ಸಂಬಂಧಿಸಿದ ಯಾವುದೇ ಅನುಮಾನ ಗಳಿದ್ದರು ಬಗೆಹರಿಸಿಕೊಂಡು ಅರ್ಜಿ ಸಲ್ಲಿಸಬಹುದು.

Leave A Reply

Your email address will not be published.