Tirupati : ತಿರುಪತಿ ಪ್ರಯಾಣಿಕರೇ ನಿಮಗೊಂದು ಮುಖ್ಯವಾದ ಮಾಹಿತಿ!

Tirupati :  ರೈಲಿನಲ್ಲಿ ಪ್ರಯಾಣ ಬೆಳೆಸುವ ಮುನ್ನ ಈ ಮಾಹಿತಿ ತಿಳಿದುಕೊಳ್ಳುವುದು ಉತ್ತಮ. ಅದರಲ್ಲಿಯೂ ತಿರುಪತಿಗೆ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಬಹು ಮುಖ್ಯ ಮಾಹಿತಿ ಇಲ್ಲಿ ನೀಡಲಾಗಿದೆ. ಕೆಲವೊಮ್ಮೆ ಅನಿವಾರ್ಯ ಕಾರಣಗಳಿಂದ ಕೆಲ ರೈಲು ಸೇವೆಗಳು ಸ್ಥಗಿತಗೊಂಡು ಸಂಚಾರ ನಡೆಸಲು ಆಗದೇ ಇದ್ದರೆ ಬದಲಿ ವ್ಯವಸ್ಥೆಗಳನ್ನು ಮಾಡಿ ಪ್ರಯಾಣಿಕರಿಗೆ ನೆರವಾಗುವ ನಿಟ್ಟಿನಲ್ಲಿ ಜೊತೆಗೆ ಜನದಟ್ಟಣೆ ನಿವಾರಿಸಲು ರೈಲ್ವೇ ಇಲಾಖೆ (Indian Railways) ಕ್ರಮ ಕೈಗೊಳ್ಳುತ್ತದೆ. ಇದೀಗ, ನೈಋತ್ಯ ರೈಲ್ವೆ ರೈಲ್ವೇ ಪ್ರಯಾಣಿಕರಿಗೆ ಮುಖ್ಯ ಮಾಹಿತಿ ನೀಡಿದೆ.

ನೀವೇನಾದರೂ ಬೆಂಗಳೂರಿನಿಂದ ಬೇರೆ ಊರುಗಳಿಗೆ ರೈಲಿನಲ್ಲಿ ಪ್ರಯಾಣಿಸುವ ಯೋಜನೆ ಹಾಕಿದ್ದರೆ, ಈ ಮಾಹಿತಿ ನಿಮಗೆ ಉಪಯುಕ್ತ. ಬೆಂಗಳೂರಿನಿಂದ ಹೊರಡುವ ಮಾರ್ಗಗಳ ಹಲವು ರೈಲುಗಳ ಸಂಚಾರ ಸ್ಥಗಿತಗೊಂಡಿದ್ದು, ಹೀಗಾಗಿ, ಪ್ರಯಾಣಿಕರು ಈ ಬಗ್ಗೆ ಗಮನ ಹರಿಸುವುದು ಒಳ್ಳೆಯದು. ಹಾಗಿದ್ರೆ, ಸ್ಥಗಿತಗೊಂಡಿರುವ ರೈಲ್ವೇ ಸೇವೆಗಳು(Indian Railways) ಯಾವುವು?

ಬೆಂಗಳೂರು-ಚೆನ್ನೈ ಮಾರ್ಗದ (Bangalore- Chennai) ನಡುವೆ ವಿದ್ಯುತ್​ ಲೈನ್​ ತುಂಡಾಗಿರುವ ಮಾಹಿತಿ ಲಭ್ಯವಾದ ತಕ್ಷಣವೇ ರಿಪೇರಿ ಕಾರ್ಯ ಅರಂಭವಾಗಿದೆ. ಬಂಗಾರಪೇಟೆ ಹಾಗೂ ಕಂಟ್ರೋನ್​ಮೆಂಟ್​ ರೈಲ್ವೇ ಸಿಬ್ಬಂದಿಗಳು ಬಾರಿ ದೊಡ್ಡ ಅವಘಡ ಸಂಭವಿಸುವುದನ್ನು ತಡೆದಿದ್ದಾರೆ ಎನ್ನಲಾಗಿದೆ. ಕೋಲಾರದ ಮಾಲೂರು ತಾಲೂಕಿನ ಬ್ಯಾಟರಾಯನಹಳ್ಳಿ ಸಮೀಪದಲ್ಲಿ ವಿದ್ಯುತ್ ಲೈನ್ ತುಂಡಾಗಿ ಬಿದ್ದ ಹಿನ್ನೆಲೆ ದುರಸ್ತಿ ಕಾರ್ಯ ನಡೆಯುತ್ತಿದ್ದು ಹೀಗಾಗಿ, ಚೆನ್ನೈ-ಬೆಂಗಳೂರು, ಬೆಂಗಳೂರು-ಮೈಸೂರು-ತಿರುಪತಿ ( Tirupati) ಸೇರಿದಂತೆ ಹಲವು ಹಲವು ರೈಲುಗಳ ಸಂಚಾರ ಸ್ಥಗಿತಗೊಂಡಿರುವ ಬಗ್ಗೆ ನೈಋತ್ಯ ರೈಲ್ವೆ ಇಲಾಖೆ ಪ್ರಯಾಣಿಕರಿಗೆ ಮಾಹಿತಿ ನೀಡಿದೆ

ಪ್ರಸ್ತುತ, ಚೆನ್ನೈ-ಬೆಂಗಳೂರು ಮಾರ್ಗದ 8 ರೈಲುಗಳ ಸಂಚಾರ ನಿಂತಿದ್ದು,ಬೆಂಗಳೂರು- ಮೈಸೂರು-ತಿರುಪತಿ, ಮಾರಿಕುಪ್ಪಂ ಬೆಂಗಳೂರು, ಬೆಂಗಳೂರು ಚೆನೈ, ಜೋಲಾರ್ಪೇಟ್ ಬೆಂಗಳೂರು, ಸೇರಿದಂತೆ ಸುಮಾರು ಎಂಟು ರೈಲುಗಳ ಸಂಚಾರ ಸ್ಥಗಿತವಾಗಿದೆ. ರೈಲ್ವೇ ಸಂಚಾರ ಸ್ಥಗಿತಗೊಂಡಿರುವ ಹಿನ್ನೆಲೆ ನೀವು ಈ ಸಮಯದಲ್ಲಿಯೇ ತಿರುಪತಿ ದರ್ಶನ ಮಾಡಬೇಕೆನ್ನುವುದಾದರೆ ಬೆಂಗಳೂರಿನಿಂದ ರೈಲು ಟಿಕೆಟ್ ಬುಕ್ ಮಾಡಿದ್ದರೆ ರೈಲು ಸಂಚಾರ ಪುನರಾರಂಭ ವಾಗುವ ವರೆಗೆ ಬದಲಿ ವ್ಯವಸ್ಥೆ ಮಾಡಿಕೊಳ್ಳಬೇಕಾಗಿದೆ. ದುರಸ್ಥಿ ಕಾರ್ಯ ಮುಗಿಯುತ್ತಿದ್ದಂತೆ ಅತೀ ಶೀಘ್ರದಲ್ಲಿ ಸ್ಥಗಿತಗೊಂಡಿರುವ ರೈಲ್ವೇ ಸೇವೆಗಳನ್ನು ಪುನಾರಾರಂಭಗೊಳಿಸುವ ಕುರಿತು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.

Leave A Reply

Your email address will not be published.